ಉತ್ತರ ಪ್ರದೇಶದಲ್ಲಿ ನಡೆದಿತ್ತು ಸಿಧು ಮೂಸೆವಾಲಾ ಹತ್ಯೆಗೆ ಸಂಚು, ಪಾಕ್ನಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲಾಗಿತ್ತು
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ಮಾಹಿತಿಗಳು ಲಭ್ಯವಾಗಿವೆ. ಸಿಧು ಹತ್ಯೆಗೆ ಉತ್ತರ ಪ್ರದೇಶದಲ್ಲಿ ಸಂಚು ರೂಪಿಸಲಾಗಿತ್ತು, ಹಾಗೆಯೇ ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಕೂಡ ಆಮದು ಮಾಡಿಕೊಳ್ಳಲಾಗಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಸಿಕ್ಕಿರುವ ಕೆಲವು ಫೋಟೊಗಳು ಈ ಹತ್ಯೆಯಲ್ಲಿ ಭಾಗಿಯಾಗಿರುವವರು ಅಯೋಧ್ಯೆ ಹಾಗೂ ಲಕ್ನೋದಲ್ಲಿ ಸುತ್ತಾಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡುತ್ತದೆ.

ಮೂಲಗಳ ಪ್ರಕಾರ, ಬಿಷ್ಣೋಯ್ ಮೂಲತಃ ಉತ್ತರ ಪ್ರದೇಶದವನಾಗಿದ್ದಾನೆ, ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರಗಳು ಮೂಸ್ ವಾಲಾ ಹತ್ಯೆಗೂ ಮುನ್ನ ತೆಗೆದ ಚಿತ್ರಗಳಾಗಿವೆ. ಛಾಯಾಚಿತ್ರಗಳಲ್ಲಿ ಸಚಿನ್ ಥಾಪನ್ ಬಿಷ್ಣೋಯ್, ಸಚಿನ್ ಭಿವಾನಿ ಮತ್ತು ಕಪಿಲ್ ಪಂಡಿತ್ ಅವರಂತಹ ಬಿಷ್ಣೋಯ್ ಗ್ಯಾಂಗ್‌ನ ಕೆಲವು ಶಾರ್ಪ್‌ಶೂಟರ್‌ಗಳು ಸ್ಪಷ್ಟವಾಗಿ ಗೋಚರಿಸುತ್ತಾರೆ.
ಸಚಿನ್ ಬಿಷ್ಣೋಯ್ ಅವರನ್ನು ಈ ತಿಂಗಳ ಆರಂಭದಲ್ಲಿ ಅಜರ್‌ಬೈಜಾನ್‌ನಿಂದ ಹಸ್ತಾಂತರಿಸಲಾಯಿತು ಮತ್ತು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಸಚಿನ್ ಬಿಷ್ಣೋಯ್ ಅವರು ಲಾರೆನ್ಸ್ ಬಿಷ್ಣೋಯ್ ಅವರ ಹತ್ತಿರದ ಸಹಾಯಕರಾಗಿದ್ದಾರೆ ಮತ್ತು ಯುಪಿಯ ವಿವಿಧ ಭಾಗಗಳಲ್ಲಿ ಇತರ ಗ್ಯಾಂಗ್ ಸದಸ್ಯರೊಂದಿಗೆ ಹಲವಾರು ದಿನಗಳವರೆಗೆ ತಂಗಿದ್ದರು ಎಂದು ಹೇಳಲಾಗುತ್ತದೆ.
ಮತ್ತಷ್ಟು ಓದಿ: ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ಗ್ಯಾಂಗ್ಸ್ಟರ್ಗೆ ಶಸ್ತ್ರಾಸ್ತ್ರ ಪೂರೈಸಿದ್ದ ವ್ಯಕ್ತಿಯ ಬಂಧನ
ಪಾಕಿಸ್ತಾನದಿಂದ ವಿಶೇಷವಾಗಿ ಆಮದು ಮಾಡಿಕೊಳ್ಳಲಾದ ಆಧುನಿಕ ಪಿಸ್ತೂಲ್‌ಗಳು ಸೇರಿದಂತೆ ವಿದೇಶಿ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಚಿತ್ರಗಳು ತೋರಿಸುತ್ತವೆ ಎಂದು ಮೂಲಗಳು ತಿಳಿಸಿವೆ.
ಮೂಸೆ ವಾಲಾ ಮೇಲೆ 100 ಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲು ಬಳಸಲಾದ ಶಸ್ತ್ರಾಸ್ತ್ರಗಳನ್ನು ಛಾಯಾಚಿತ್ರಗಳು ತೋರಿಸುತ್ತವೆ. ಬಿಷ್ಣೋಯ್ ಗ್ಯಾಂಗ್ ಶೂಟರ್‌ಗಳು ಹಲವಾರು ದಿನಗಳ ಕಾಲ ಅಯೋಧ್ಯೆಯ ಫಾರ್ಮ್‌ಹೌಸ್‌ನಲ್ಲಿ ತಂಗಿದ್ದರು, ಅಲ್ಲಿ ಅವರು ತಮ್ಮ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸುವುದನ್ನು ಅಭ್ಯಾಸ ಮಾಡಿದರು. ಫಾರ್ಮ್ ಹೌಸ್ ವಿಕಾಸ್ ಸಿಂಗ್ ಎಂಬ ಸ್ಥಳೀಯ ನಾಯಕನಿಗೆ ಸೇರಿತ್ತು. ಕಳೆದ ವರ್ಷ ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆ ವಾಲಾರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ