BIG NEWS: ಕೇಜ್ರಿವಾಲ್ ಸರ್ಕಾರದ ಮದ್ಯ ನೀತಿ ಬಗ್ಗೆ ಸಿಬಿಐ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗ್ರಹ

| Updated By: ರಶ್ಮಿ ಕಲ್ಲಕಟ್ಟ

Updated on: Jul 22, 2022 | 1:19 PM

ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರದ ವಿವಾದಾತ್ಮಕ ಹೊಸ ಮದ್ಯ ನೀತಿಯ ಕುರಿತು ತನಿಖಾ ಸಂಸ್ಥೆ ಕೇಂದ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಇಂದು ಶಿಫಾರಸು ಮಾಡಿದ್ದಾರೆ.

BIG NEWS: ಕೇಜ್ರಿವಾಲ್ ಸರ್ಕಾರದ ಮದ್ಯ ನೀತಿ ಬಗ್ಗೆ ಸಿಬಿಐ ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ಆಗ್ರಹ
Kejriwal
Image Credit source: NDTV
Follow us on

ನವದೆಹಲಿ:  ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ (Arvind Kejriwal) ನೇತೃತ್ವದ ಸರ್ಕಾರದ ವಿವಾದಾತ್ಮಕ ಹೊಸ ಮದ್ಯ ನೀತಿಯ (excise policy) ಕುರಿತು ತನಿಖಾ ಸಂಸ್ಥೆ ಕೇಂದ್ರೀಯ ತನಿಖಾ ದಳದಿಂದ ತನಿಖೆ ನಡೆಸುವಂತೆ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ (Lieutenant Governor Vinai Kumar Saxena) ಇಂದು ಶಿಫಾರಸು ಮಾಡಿದ್ದಾರೆ.  ಮದ್ಯ ಪರವಾನಗಿದಾರರಿಗೆ ಟೆಂಡರ್ ನಂತರದ ಅನಗತ್ಯ ಪ್ರಯೋಜನಗಳನ್ನು ಒದಗಿಸಲು ಉದ್ದೇಶ ಪೂರ್ವಕ ಮತ್ತು ಸಮಗ್ರ ಕಾರ್ಯವಿಧಾನಗಳ ಲೋಪ ನಡೆದಿದೆ ಎಂದು ಪ್ರಧಾನ ಕಾರ್ಯದರ್ಶಿಯವರು ಜುಲೈ 8ರಂದು ಸಲ್ಲಿಸಿದ ವರದಿಯಲ್ಲಿ ಹೇಳಲಾಗಿದೆ ಎಂದು ಸಕ್ಸೇನಾ ಅವರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಹೆಸರನ್ನು ನೇರವಾಗಿ  ಉಲ್ಲೇಖಿಸಿದ  ಗವರ್ನರ್, ಉನ್ನತ ರಾಜಕೀಯ ನಾಯಕರಿಗೆ ಹಣಕಾಸಿನ ಅನುಕೂಲಗಳನ್ನು ನೀಡಿದೆ ಎಂಬುದನ್ನು ಈವರದಿ ತೋರಿಸುತ್ತದೆ.  ನೂತನ ಮದ್ಯ ನೀತಿಯು ಖಾಸಗಿ ಮದ್ಯ ದೊರೆಗಳಿಗೆ ಆರ್ಥಿಕ ಲಾಭ ನೀಡುವ ಉದ್ದೇಶದಿಂದ ಮಾಡಿದ್ದು ಇದು ವ್ಯಕ್ತಿಗಳಿಂದ ಹಿಡಿದು ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಅವರಿಗೆ ಆರ್ಥಿಕ ಲಾಭ ನೀಡುವ ಉದ್ದೇಶ ಹೊಂದಿದೆ ಎಂದು ಗವರ್ನರ್ ಆರೋಪಿಸಿದ್ದಾರೆ.

ಅಬಕಾರಿ ಇಲಾಖೆಯ ಉಸ್ತುವಾರಿ ಸಚಿವರಾದ ಮನೀಶ್ ಸಿಸೋಡಿಯಾ ಅವರು ಈ ಮದ್ಯನೀತಿಯನ್ನು ಜಾರಿಗೆ ತಂದಿದ್ದು, ಇದು ಶಾಸನಬದ್ಧ ನಿಬಂಧನೆಗಳು ಮತ್ತು ಅಧಿಸೂಚಿತ ಅಬಕಾರಿ ನೀತಿಯ ಉಲ್ಲಂಘನೆಯು ಭಾರಿ ಆರ್ಥಿಕ ಪರಿಣಾಮಗಳನ್ನು ಹೊಂದಿದೆ ಎಂದು ಸಕ್ಸೇನಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ
ಬೆಂಗಳೂರು ಮೈಸೂರು ರಸ್ತೆಯಲ್ಲಿ ಸರಣಿ ಅಪಘಾತ! ಟೆಂಪೋ, ಬಿಎಂಟಿಸಿ ಬಸ್ ನಡುವೆ ಸಿಲುಕಿ ಆಟೋ ಜಖಂ
36 ವರ್ಷದ ಬಳಿಕ ಮರುಕಳಿಸಿತು ಇತಿಹಾಸ; ಕಮಲ್​ ಹಾಸನ್​-ಚಿರಂಜೀವಿ ಸ್ನೇಹದ ರೆಟ್ರೋ ಫೋಟೋ ವೈರಲ್
ಶಿಕ್ಷಕರ ಮತ್ತು ಪದವಿಧರ ಕ್ಷೇತ್ರಗಳ ಚುನಾವಣೆ: ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
Chicago Shootings: ಅಮೆರಿಕದಲ್ಲಿ ಮತ್ತೆ ಗುಂಡಿನ ಸದ್ದು, ಚಿಕಾಗೊದಲ್ಲಿ ಐವರು ಸಾವು, 16 ಮಂದಿಗೆ ಗಾಯ

ಸಿಸೋಡಿಯಾ ಅವರು ಮದ್ಯ ಪರವಾನಗಿದಾರರಿಗೆ ಆರ್ಥಿಕ ಲಾಭವನ್ನುಂಟು ಮಾಡಲು ಸಹಾಯ ಮಾಡಿದ್ದಾರೆ ಎಂದು ಸಕ್ಸೇನಾ ಆರೋಪಿಸಿದ್ದಾರೆ.

Published On - 11:13 am, Fri, 22 July 22