Shocking News: ಶಾಲೆಯಲ್ಲಿ 3 ವರ್ಷದ ಮಗುವಿನ ಮೇಲೆ ಪಿಸ್ತೂಲ್ನಿಂದ ಗುಂಡು ಹಾರಿಸಿದ 5 ವರ್ಷದ ಬಾಲಕ
ನರ್ಸರಿ ಶಾಲೆಯ ಬಾಲಕನೊಬ್ಬ 3 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಗುಂಡು ಹಾರಿಸಿದ ಮಗುವಿಗೆ ಕೇವಲ ಐದು ವರ್ಷ ವಯಸ್ಸು. ಮಗುವಿನ ಬ್ಯಾಗ್ನೊಳಗೆ ಪಿಸ್ತೂಲ್ ಹೇಗೆ ಬಂದಿದೆ ಎನ್ನುವ ಕುರಿತು ತನಿಖೆ ನಡೆಸಲಾಗುತ್ತಿದೆ.
ಬಿಹಾರದ ಶಾಲೆಯೊಂದರಲ್ಲಿ ಐದು ವರ್ಷದ ಬಾಲಕ 3 ವರ್ಷದ ಮಗುವಿನ ಮೇಲೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ಬಿಹಾರದ ಸುಪಾಲ್ ಜಿಲ್ಲೆಯ ತ್ರಿವೇಣಿಗಂಜ್ನ ಲಾಲ್ಪಟ್ಟಿಯಲ್ಲಿರುವ ಸೇಂಟ್ ಜಾನ್ಸ್ ಬೋರ್ಡಿಂಗ್ ಸ್ಕೂಲ್ನಲ್ಲಿ ನಡೆದಿದೆ. ಗುಂಡು ಮಗುವಿನ ಎಡಗೈಗೆ ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಆಸಿಫ್ ಎಂದು ಗುರುತಿಸಲಾಗಿದೆ.
ಈತ ಐದು ವರ್ಷದ ಬಾಲಕನಾಗಿದ್ದು, ಶಾಲೆಗೆ ಬಂದ ಕೂಡಲೇ ಪ್ರಾರ್ಥನೆ ಸಲ್ಲಿಸುವ ಮುನ್ನ ತನ್ನ ಬ್ಯಾಗ್ನಿಂದ ಬಂದೂಕು ತೆಗೆದು ಗುಂಡು ಹಾರಿಸಿದ್ದಾನೆ. ಆಸಿಫ್ನನ್ನು ನಗರದ ತ್ರಿವೇಣಿಗಂಜ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಚಿಕಿತ್ಸೆ ನಿಡಲಾಗುತ್ತಿದೆ. ಆರೋಪಿಯಾಗಿರುವ ಬಾಲಕ ಅಲ್ಲಿಂದ ಓಡಿಹೋಗಿದ್ದಾನೆ, ಶಾಲೆಯ ಆಡಳಿತ ಮಂಡಳಿಯ ಪ್ರಕಾರ, ಘಟನೆ ನಂತರ ಎರಡೂ ಮಕ್ಕಳ ಕುಟುಂಬದವರನ್ನು ಶಾಲೆಗೆ ಕರೆಸಲಾಯಿತು.
ಇದೇ ವೇಳೆ ವಿದ್ಯಾರ್ಥಿ ಏಕಲವ್ಯ ಕೂಡ ಶಾಲೆಯ ಪ್ರಾಂಶುಪಾಲರ ಚೇಂಬರ್ನಲ್ಲಿದ್ದು, ಆತನ ತಂದೆ ಮುಕೇಶ್ ಯಾದವ್ ಕೂಡ ಅಲ್ಲಿದ್ದರು. ಘಟನೆ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಮುಕೇಶ್ ಯಾದವ್ ಆಯುಧ ಸಮೇತ ತನ್ನ ಮಗುವಿನೊಂದಿಗೆ ಓಡಿ ಹೋಗಿದ್ದಾರೆ. ಆ ವೇಳೆ ಗಾಯಗೊಂಡ ಮಗುವಿನ ಕುಟುಂಬಸ್ಥರು ಆತನಿಂದ ಪಿಸ್ತೂಲ್ ಕಸಿದುಕೊಂಡಿದ್ದಾರೆ.
ಘಟನೆಯ ನಂತರ ಕೋಪದಗೊಂಡ ಕುಟುಂಬಸ್ಥರು ಶಾಲೆಯನ್ನು ಧ್ವಂಸಗೊಳಿಸಿದ್ದಾರೆ. ಈ ಬಗ್ಗೆ ತ್ರಿವೇಣಿಗಂಜ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸದ್ಯ ಬಾಲಕ ಹಾಗೂ ಆತನ ಕುಟುಂಬದವರು ತಲೆಮರೆಸಿಕೊಂಡಿದ್ದಾರೆ.
ಮತ್ತಷ್ಟು ಓದಿ: ಬಿಹಾರದಲ್ಲಿ ಒಂದೇ ತಿಂಗಳಲ್ಲಿ ಇಬ್ಬರು ಪತ್ರಕರ್ತರ ಹತ್ಯೆ; ಮರಕ್ಕೆ ನೇಣು ಬಿಗಿದ ಶವ ಪತ್ತೆ
ಪೊಲೀಸರು ತನಿಖೆ ಆರಂಭಿಸಿದ್ದು, ಇಷ್ಟೊಂದು ದೊಡ್ಡ ನಿರ್ಲಕ್ಷ್ಯ ಹೇಗಾಯಿತು ಎಂದು ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಲಾಗುತ್ತಿದೆ. ಶಾಲೆಗಳಲ್ಲಿ ಭದ್ರತೆ ಹಾಗೂ ವಿದ್ಯಾರ್ಥಿಗಳ ಬ್ಯಾಗ್ ತಪಾಸಣೆಗೆ ಒತ್ತು ನೀಡಲಾಗುತ್ತಿದೆ. ಈ ಘಟನೆ ಬಳಿಕ ಪೋಷಕರು ಮತ್ತು ಮಕ್ಕಳಲ್ಲಿ ಆತಂಕ ಶುರುವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ