ದರ್ಬಾಂಗ್ ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಹೈದರಾಬಾದಿನ ಬಂಧಿತರಿಬ್ಬರೂ ಎಲ್‌ಇಟಿ ಉಗ್ರರು
ಇಮ್ರಾನ್ ಮಲಿಕ್, ನಾಸೀರ್ ಮಲಿಕ್ ಬ್ರದರ್ಸ್ ಅರೆಸ್ಟ್ ಆಗಿದ್ದಾರೆ. ಎನ್ಐಎ ವಿಚಾರಣೆ ಬಳಿಕ ಬಂಧಿತರಿಬ್ಬರೂ ಎಲ್‌ಇಟಿ ಉಗ್ರರೆಂದು ಸಾಬೀತಾಗಿದೆ.
ಬಿಹಾರದ ದರ್ಬಾಂಗ್ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಕೇಸ್ಗೆ ಸಂಬಂಧಿಸಿ ಎನ್ಐಎಯಿಂದ ಹೈದರಾಬಾದ್ನ ಇಬ್ಬರ ಬಂಧನವಾಗಿದೆ. ಇಮ್ರಾನ್ ಮಲಿಕ್, ನಾಸೀರ್ ಮಲಿಕ್ ಬ್ರದರ್ಸ್ ಅರೆಸ್ಟ್ ಆಗಿದ್ದಾರೆ. ಎನ್ಐಎ ವಿಚಾರಣೆ ಬಳಿಕ ಬಂಧಿತರಿಬ್ಬರೂ ಎಲ್‌ಇಟಿ ಉಗ್ರರೆಂದು ಸಾಬೀತಾಗಿದೆ.
ಲಷ್ಕರ್ ಎ ತಯ್ಬಾದ ಮುಖ್ಯನಾಯಕನ ಆದೇಶದಂತೆ ಹೈದರಾಬಾದ್ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ಬ್ರದರ್ಸ್ ಹೈದರಾಬಾದ್ನಿಂದ ರೈಲಿನಲ್ಲಿ ಬಾಂಬ್ ಪಾರ್ಸೆಲ್ ಕಳುಹಿಸಿದ್ದರು. ದರ್ಬಾಂಗ್ನಲ್ಲಿ ರೈಲು ಸ್ಫೋಟ ಮಾಡಿ ಭಾರಿ ಹತ್ಯೆಗಳನ್ನು ಮಾಡುವ ಸಂಚಿನೊಂದಿಗೆ ಪಾರ್ಸಲ್ ಕಳಿಸಲಾಗಿತ್ತು. ಜೂ.17ರಂದು ದರ್ಬಾಂಗ್ ರೈಲ್ವೆ ನಿಲ್ದಾಣದಲ್ಲಿ ಸ್ಫೋಟವಾಗಿದೆ. ಹೈದರಾಬಾದ್ನ ಇಬ್ಬರು, ಯುಪಿಯಲ್ಲಿ ಇಬ್ಬರ ಬಂಧನವಾಗಿದೆ.
ಹೈದರಾಬಾದ್ನಲ್ಲಿ ಬಂಧಿತರಾದ ನಾಸೀರ್ ಮಲ್ಲಿಕ್, ಇಮ್ರಾನ್ ಮಲ್ಲಿಕ್ ಕಳೆದ 8ವರ್ಷಗಳಿಂದ ಹೈದರಾಬಾದ್ನಲ್ಲಿ ವಾಸವಾಗಿದ್ದರು. ಇವರಿಗೆ ಪಾಕಿಸ್ತಾನದಲ್ಲಿ ಎಲ್ಇಟಿ 2012ರಲ್ಲಿ ತರಭೇತಿ ನೀಡಿತ್ತು. ನಂತರ ಐಎಸ್.ಎ ಮುಖ್ಯಸ್ತ ಇಕ್ಬಾಲ್ ನೇತೃತ್ವದಲ್ಲಿ ತರಭೇತಿ, ಇವರನ್ನು ಐಎಸ್.ಐ ಹೈದರಾಬಾದ್ಗೆ ಕಳುಹಿಸಿಕೊಟ್ಟಿತ್ತು. ಮಲಿಕ್ ಸಹೋದರರು ಹೈದರಾಬಾದ್ನ ಹಬೀಬ್ ನಗರದ ಬಡಿ ಮಸೀದ್ ಬಳಿ ವ್ಯಾಪಾರ ಮಾಡುತ್ತಿದ್ದರು. ಉಗ್ರರು ಇದೇ ವಿಳಾಸದ ಮೂಲಕ ಬಿಹಾರದ ದರ್ಬಾಂಗ್ಗೆ ಪಾರ್ಸಲ್ ಕಳುಹಿಸಿದ್ದರು. ಹೈದರಾಬಾದ್ನಿಂದ ಉತ್ತರ ಪ್ರದೇಶದವರೆಗೂ ನೆಟ್ವರ್ಕ್ ಹೊಂದಿದ್ದ ನಾಸಿರ್ ಮಲ್ಲಿಕ್ ಮತ್ತು ಇಮ್ರಾನ್ ಮಲ್ಲಿಕ್ ದೇಶದಾದ್ಯಂತ ಅನೇಕ ಸ್ಫೋಟ, ಉಗ್ರ ಚಟುವಟಿಕೆಗೆ ಸಂಚು ರೂಪಿಸಿವುದರಲ್ಲಿ ಭಾಗಿಯಾಗಿದ್ದಾರೆ. ಇವರೊಂದಿಗೆ ಸಾಕಷ್ಟು ಜನರ ತಂಡ ಇರುವ ಶಂಕೆ ವ್ಯಕ್ತವಾಗಿದೆ. ಇವರಿಗೆ ಬೆಂಬಲಿಸುತ್ತಿದ್ದವರಿಗಾಗಿ ಎನ್ಐಎ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: LPG Cylinder Price: ಗೃಹಬಳಕೆ ಸಿಲಿಂಡರ್ ಬೆಲೆಯಲ್ಲಿ 25 ರೂ. ಹೆಚ್ಚಳ; ಹೀಗಿದೆ ಮಹಾನಗರಗಳಲ್ಲಿ ಎಲ್ಪಿಜಿ ಸಿಲಿಂಡರ್ ದರ