Bihar Election Exit Poll Results 2025: ಬಿಹಾರದಲ್ಲಿ ಮತ್ತೊಮ್ಮೆ ಎನ್ಡಿಎಗೆ ಗೆಲುವಿನ ಮಾಲೆ; ಚುನಾವಣೋತ್ತರ ಸಮೀಕ್ಷೆಗಳ ಲೆಕ್ಕಾಚಾರ ಇಲ್ಲಿದೆ
Bihar Elections 2025 Exit Poll Result: ಬಿಹಾರದಲ್ಲಿ ಇಂದು ಎರಡನೇ ಹಂತದ ಮತದಾನ ಮುಗಿದಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಈ ನಡುವೆ ಇದೀಗ ವಿವಿಧ ಏಜೆನ್ಸಿಗಳು ನಡೆಸಿದ ಮತದಾನೋತ್ತರ ಸಮೀಕ್ಷಗಳು ಹೊರಬಿದ್ದಿದ್ದು, ಇದರ ಪ್ರಕಾರ ಬಿಜೆಪಿ ನೇತೃತ್ವದ ಎನ್ಡಿಎ ಈ ಬಾರಿಯೂ ಭಾರೀ ಗೆಲುವು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ. ಹಾಗೇನಾದರೂ ಆದರೆ ಮತ್ತೊಮ್ಮೆ ನಿತೀಶ್ ಕುಮಾರ್ ಬಿಹಾರದ ಅಧಿಕಾರದ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ.

ಪಾಟ್ನಾ, ನವೆಂಬರ್ 11: ಬಿಹಾರದಲ್ಲಿ 2 ಹಂತಗಳಲ್ಲಿ ವಿಧಾನಸಭಾ ಚುನಾವಣೆ (Bihar Assembly Elections) ನಡೆದಿದೆ. ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆದಿದ್ದರೆ ಎರಡನೇ ಹಂತದ ಮತದಾನ ಇಂದು ಮುಕ್ತಾಯವಾಗಿದೆ. ಈ ಬಾರಿ ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಹಾಗೂ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಯಾವ ಮೈತ್ರಿಕೂಟ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಕಲ್ಪನೆಯನ್ನು ನೀಡಲು ಚನಾವಣೋತ್ತರ ಸಮೀಕ್ಷೆಗಳು ಸಹಾಯ ಮಾಡುತ್ತವೆ. ಎಕ್ಸಿಟ್ ಪೋಲ್ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಸಿಗಬಹುದು ಎಂದು ಲೆಕ್ಕಾಚಾರ ಹಾಕಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಬಿಹಾರದಲ್ಲಿ ಮೊದಲ ಹಂತದಲ್ಲಿ, 18 ಜಿಲ್ಲೆಗಳ 121 ಕ್ಷೇತ್ರಗಳಿಗೆ ಚುನಾವಣೆ ನಡೆದರೆ, ಎರಡನೇ ಹಂತದಲ್ಲಿ 20 ಜಿಲ್ಲೆಗಳ 122 ಸ್ಥಾನಗಳಿಗೆ ಮತದಾನ ನಡೆಯಿತು. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಹೊರಬೀಳಲಿದೆ. ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಈ ಬಾರಿ ಸ್ಪಷ್ಟ ಮುನ್ನಡೆಯನ್ನು ಸಾಧಿಸಲಿವೆ ಎಂದು ಭವಿಷ್ಯ ನುಡಿದಿವೆ. ತೀವ್ರ ಪೈಪೋಟಿಯಿಂದ ಕೂಡಿರುವ ಈ ಸಮೀಕ್ಷೆಯಲ್ಲಿ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಬಣ ಎನ್‌ಡಿಎಗಿಂತ ಹಿಂದುಳಿದಿದೆ.
ಇದನ್ನೂ ಓದಿ: Bihar Assembly Election 2025: ಇಂದು ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ
ಯಾವ ಸಮೀಕ್ಷೆ ಏನು ಹೇಳಿದೆ?:
ಪೀಪಲ್ಸ್ ಪಲ್ಸ್ ಸಮೀಕ್ಷೆ
ಎನ್ಡಿಎ: 133-159 ಮಹಾಘಟಬಂಧನ್: 75-101 ಜನ್ ಸುರಾಜ್: 0-5 ಇತರರು: 2-8
ಪೀಪಲ್ಸ್ ಇನ್‌ಸೈಟ್ ಸಮೀಕ್ಷೆ
ಎನ್ಡಿಎ: 133-148
ಮಹಾಘಟಬಂಧನ್: 87-102
ಮ್ಯಾಟ್ರಿಜ್ ಸಮೀಕ್ಷೆ
ಎನ್ಡಿಎ: 147-167
ಮಹಾಘಟಬಂಧನ್: 70-90
ಜೆವಿಸಿ ಸಮೀಕ್ಷೆ
ಎನ್ಡಿಎ: 135-140
ಮಹಾಘಟಬಂಧನ್: 88-103
ಭಾಸ್ಕರ್ ಬಿಹಾರ ಸಮೀಕ್ಷೆ
ಎನ್ಡಿಎ: 145-160
ಮಹಾಘಟಬಂಧನ್: 73-91
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆ
ಎನ್ಡಿಎ: 130-138
ಮಹಾಘಟಬಂಧನ್: 100-108
ಇತರರು: 3-5
ಇದನ್ನೂ ಓದಿ: ಬಿಹಾರದಲ್ಲಿ ಮೊದಲ ಹಂತದ ಚುನಾವಣೆ ಮುಕ್ತಾಯ; ಶೇ. 64.46ರಷ್ಟು ಮತದಾನ ದಾಖಲು
2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಸ್ಪರ್ಧಿಸಿದ 115 ಕ್ಷೇತ್ರಗಳಲ್ಲಿ ಕೇವಲ 43 ಸ್ಥಾನಗಳನ್ನು ಗೆದ್ದಿತ್ತು. 2015ರ ಬಿಹಾರ ಚುನಾವಣೆಯಲ್ಲಿ, ಜೆಡಿಯು 71 ಸ್ಥಾನಗಳನ್ನು ಗೆದ್ದಿತ್ತು. 2020ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಿಹಾರದಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗ ಅದು 75 ಸ್ಥಾನಗಳನ್ನು ಗೆದ್ದಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:13 pm, Tue, 11 November 25




