AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೇವು ಹಗರಣದಲ್ಲಿ ಲಾಲು ಪ್ರಸಾದ್‌ಗೆ ಶಿಕ್ಷೆ ವಿಧಿಸಿದ್ದ ಸಿಬಿಐ ಮಾಜಿ ವಿಶೇಷ ನ್ಯಾಯಾಧೀಶರಿಗೆ ಮದುವೆ, ವಧು ಬಿಜೆಪಿ ನಾಯಕಿ

ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ ನೂತನ್ ತಿವಾರಿ. ಸಿಂಗ್, ಪ್ರಸ್ತುತ ಕಳೆದ ಮೂರು ವರ್ಷಗಳಿಂದ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ-1 ಆಗಿ ನೇಮಕಗೊಂಡಿದ್ದಾರೆ.

ಮೇವು ಹಗರಣದಲ್ಲಿ ಲಾಲು ಪ್ರಸಾದ್‌ಗೆ ಶಿಕ್ಷೆ ವಿಧಿಸಿದ್ದ ಸಿಬಿಐ ಮಾಜಿ ವಿಶೇಷ ನ್ಯಾಯಾಧೀಶರಿಗೆ ಮದುವೆ, ವಧು ಬಿಜೆಪಿ ನಾಯಕಿ
ನೂತನ್ ತಿವಾರಿ-ಶಿವಪಾಲ್ ಸಿಂಗ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 06, 2022 | 2:22 PM

Share

ಪಾಟ್ನಾ: ಮೇವು ಹಗರಣದ  (fodder scam)ಎರಡು ಪ್ರಕರಣಗಳಲ್ಲಿ ಬಿಹಾರದ (Bihar)ಮಾಜಿ ಸಿಎಂ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ಗೆ ಶಿಕ್ಷೆ ವಿಧಿಸಿದ್ದ ಮಾಜಿ ವಿಶೇಷ ಸಿಬಿಐ ನ್ಯಾಯಾಧೀಶ ಶಿವ್ ಪಾಲ್ ಸಿಂಗ್ (Shiv Pal Singh) (59) ಅವರು ಬಿಜೆಪಿ ನಾಯಕಿ, ವಕೀಲೆ ನೂತನ್ ತಿವಾರಿಯನ್ನು ವಿವಾಹವಾಗಿದ್ದಾರೆ. ವಧು ತಿವಾರಿ, ಸಿಂಗ್ ಅವರಿಗಿಂತ 9 ವಯಸ್ಸು ಚಿಕ್ಕವರು. ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ ನೂತನ್ ತಿವಾರಿ. ಸಿಂಗ್, ಪ್ರಸ್ತುತ ಕಳೆದ ಮೂರು ವರ್ಷಗಳಿಂದ ಗೊಡ್ಡಾ ಜಿಲ್ಲಾ ನ್ಯಾಯಾಲಯದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ-1 ಆಗಿ ನೇಮಕಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ದುಮ್ಕಾ ಜಿಲ್ಲೆಯ ಪ್ರಸಿದ್ಧ ಬಸುಕಿನಾಥ್ ದೇವಾಲಯದಲ್ಲಿ ನೂತನ್ ತಿವಾರಿ ಅವರನ್ನು ವಿವಾಹವಾದರು ಎಂದು ಅವರ ನಿಕಟ ವಕೀಲರು ದೂರವಾಣಿಯಲ್ಲಿ ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.ನ್ಯಾಯಾಧೀಶ ಸಿಂಗ್ 2006 ರಲ್ಲಿ ವಿಧುರರಾದರು ಮತ್ತು ಅವರಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ನೂತನ್ ತನ್ನ ಪತಿಯನ್ನು ಕಳೆದುಕೊಂಡರು. ಆಕೆಗೆ ಮಗಳಿದ್ದಾಳೆ. ಇಬ್ಬರೂ ತಮ್ಮ ಮಕ್ಕಳು ಮತ್ತು ಕುಟುಂಬಗಳು ಮದುವೆಗೆ ಒಪ್ಪಿಗೆ ನೀಡಿದ ನಂತರ ಮದುವೆಯಾಗಲು ನಿರ್ಧರಿಸಿದರು. ಎಂದು ನೂತನ್ ಕುಟುಂಬದ ಆಪ್ತರು ಹೇಳಿದ್ದಾರೆ.

ಸಿಂಗ್ ಮತ್ತು ತಿವಾರಿ ಅವರ ಮದುವೆ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಚರ್ಚೆಯಾಗುತ್ತಿದೆ ವಿಧವೆ ವಕೀಲರೊಂದಿಗೆ ಅಂತರ್ಜಾತಿ ವಿವಾಹವಾದ ನ್ಯಾಯಾಧೀಶ ಸಿಂಗ್ ಅವರನ್ನು ಬುದ್ಧಿಜೀವಿಗಳು ಮತ್ತು ವಕೀಲರು ಶ್ಲಾಘಿಸಿದ್ದಾರೆ.

ಅಧಿಕೃತ ದಾಖಲೆಗಳ ಪ್ರಕಾರ ಉತ್ತರ ಪ್ರದೇಶ ಮೂಲದ ನ್ಯಾಯಾಧೀಶ ಸಿಂಗ್, ಮಾರ್ಚ್ 31, 2023 ರಂದು 60 ವರ್ಷಗಳು ಪೂರ್ಣಗೊಂಡ ನಂತರ ಜಾರ್ಖಂಡ್ ನ್ಯಾಯಾಂಗ ಸೇವೆಯಿಂದ ನಿವೃತ್ತರಾಗಲಿದ್ದಾರೆ. ರಾಂಚಿ ಜಿಲ್ಲಾ ನ್ಯಾಯಾಲಯದಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶರಾಗಿ ನೇಮಕಗೊಂಡ ಸಂದರ್ಭದಲ್ಲಿ ಸಿಂಗ್ ಅವರು ಮೇವು ಹಗರಣದ ಎರಡು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಅವರನ್ನು ದೋಷಿ ಎಂದು ಘೋಷಿಸಿದ್ದರು. ಒಂದು ಪ್ರಕರಣದಲ್ಲಿ ಅವರು ಲಾಲು ಪ್ರಸಾದ್‌ಗೆ 14 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದರು.

1990 ರ ದಶಕದ ಆರಂಭದಲ್ಲಿ ದುಮ್ಕಾ ಖಜಾನೆಯಿಂದ 3.13 ಕೋಟಿ ರೂಪಾಯಿಗಳನ್ನು ವಂಚಿಸಿದ ಆರೋಪದಲ್ಲಿ ಲಾಲು ಪ್ರಸಾದ್‌ಗೆ ಮಾರ್ಚ್ 24, 2018 ರಂದು ನ್ಯಾಯಾಧೀಶ ಸಿಂಗ್ 14 ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂಪಾಯಿ ದಂಡ ವಿಧಿಸಿದರು. ಇದು ಮೇವು ಹಗರಣದ ನಾಲ್ಕನೇ ಪ್ರಕರಣವಾಗಿದೆ. ಇದಕ್ಕೂ ಮೊದಲು, 1991-1994 ನಡುವೆ ದಿಯೋಘರ್ ಖಜಾನೆಯಿಂದ 89.27 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಪ್ರಕರಣದಲ್ಲಿ ಲಾಲು ಪ್ರಸಾದ್‌ಗೆ ನ್ಯಾಯಾಧೀಶ ಸಿಂಗ್ 2018 ರ ಜನವರಿ 6 ರಂದು ಮೂರೂವರೆ ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂಪಾಯಿ ದಂಡ ವಿಧಿಸಿದ್ದರು.