Viral Video: ಪೊಲೀಸರೆದುರೇ ಮಾವನಿಗೆ ಕಪಾಳಮೋಕ್ಷ ಮಾಡಿದ ಲೇಡಿ ಪೊಲೀಸ್; ವಿಡಿಯೋ ವೈರಲ್

ಮಹಿಳಾ ಪೊಲೀಸ್ ಮತ್ತು ಆಕೆಯ ತಾಯಿ ಪೊಲೀಸ್ ಪೇದೆಯ ಮುಂದೆಯೇ ತನ್ನ ಮಾವನ ತೀವ್ರ ವಾಗ್ವಾದ ನಡೆಸಿದ್ದು, ದೈಹಿಕ ಹಲ್ಲೆ ನಡೆಸಿದ್ದಾರೆ.

Viral Video: ಪೊಲೀಸರೆದುರೇ ಮಾವನಿಗೆ ಕಪಾಳಮೋಕ್ಷ ಮಾಡಿದ ಲೇಡಿ ಪೊಲೀಸ್; ವಿಡಿಯೋ ವೈರಲ್
ಪೊಲೀಸರೆದುರೇ ಮಾವನಿಗೆ ಕಪಾಳಮೋಕ್ಷ ಮಾಡಿದ ಲೇಡಿ ಪೊಲೀಸ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Sep 06, 2022 | 1:19 PM

ನವದೆಹಲಿ: ದೆಹಲಿ ಮಹಿಳಾ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ (Police Sub Inspector) ಒಬ್ಬರು ತನ್ನ ತಾಯಿ ಹಾಗೂ ಮತ್ತೊಬ್ಬ ಪೋಲೀಸರ ಮುಂದೆ ತನ್ನ ವಯಸ್ಸಾದ ಮಾವನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋ ವೈರಲ್ (Video Viral) ಆಗಿದೆ. ಲಕ್ಷ್ಮಿನಗರದಲ್ಲಿರುವ ವೃದ್ಧೆಯ ಮನೆಯಲ್ಲಿ ಭಾನುವಾರ ಈ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸುವ ಮೊದಲು ಮಹಿಳಾ ಪೊಲೀಸ್ ತನ್ನ ಮಾವನಿಗೆ ಅನೇಕ ಬಾರಿ ಕಪಾಳಮೋಕ್ಷ ಮಾಡುವುದನ್ನು ಸಿಸಿಟಿವಿ ದೃಶ್ಯಾವಳಿಯಲ್ಲಿ ನೋಡಬಹುದು.

ಹಲ್ಲೆಗೂ ಮುನ್ನ ಮಹಿಳೆ ಮತ್ತು ಆಕೆಯ ತಾಯಿ ಪೊಲೀಸ್ ಪೇದೆಯ ಮುಂದೆಯೇ ತನ್ನ ಮಾವನ ತೀವ್ರ ವಾಗ್ವಾದ ನಡೆಸಿದ್ದು, ಮಹಿಳೆ ಹಾಗೂ ಆಕೆಯ ತಾಯಿ ಒಬ್ಬರ ನಂತರ ಒಬ್ಬರಂತೆ ವೃದ್ಧನಿಗೆ ಕಪಾಳಮೋಕ್ಷ ಮಾಡುವುದರೊಂದಿಗೆ ದೈಹಿಕ ಹಲ್ಲೆ ನಡೆಸಿದ್ದಾರೆ. ದೆಹಲಿಯ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡ ಮಹಿಳಾ ಪೊಲೀಸ್ ತನ್ನ ಮಾವನ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದಾರೆ.

ಇದನ್ನೂ ಓದಿ: Viral Video: ಜನರೆದುರೇ ಪಂಜಾಬ್​ನ ಆಮ್ ಆದ್ಮಿ ಶಾಸಕಿಗೆ ಗಂಡನಿಂದ ಕಪಾಳಮೋಕ್ಷ; ವಿಡಿಯೋ ವೈರಲ್

ಮಹಿಳಾ ಪೊಲೀಸ್ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಹಲವು ಸೆಕ್ಷನ್‌ಗಳಡಿ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿ ಪೊಲೀಸರ ವಿರುದ್ಧ ಇಲಾಖೆಯ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ