ಪ್ರೇಯಸಿ ಯಾರೊಂದಿಗೆ ಮಾತಾಡ್ತಾಳೆಂದು ತಿಳಿಯಲು ಹೋಗಿ ಟೆಲಿಕಾಂ ಕಚೇರಿಯನ್ನೇ ಧ್ವಂಸಗೊಳಿಸಿದ ವ್ಯಕ್ತಿ
ಪ್ರೇಯಸಿ ಬಗ್ಗೆ ಅನುಮಾನ, ನಿತ್ಯ ಯಾರೊಂದಿಗೆ ಮಾತನಾಡುತ್ತಿದ್ದಾಳೆಂದು ತಿಳಿಯಲು ಹೋದ ವ್ಯಕ್ತಿ ಇಡೀ ಟೆಲಿಕಾಂ ಕಚೇರಿಯನ್ನೇ ಧ್ವಂಸಗೊಳಿಸಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ. ಆತನಿಗೆ ತನ್ನ ಗೆಳತಿಯ ಮೇಲೆ ಹಲವು ದಿನಗಳಿಂದ ಅನುಮಾನವಿತ್ತು. ಹೇಗಾದರೂ ಮಾಡಿ ಅದನ್ನು ತಿಳಿದುಕೊಳ್ಳಲೇಬೇಕೆಂದು ನಿರ್ಧರಿಸಿದ್ದ, ಕೊಡಲಿಯನ್ನು ಹಿಡಿದು ಹುಚ್ಚು ಪ್ರೇಮಿ ಟೆಲಿಕಾಂ ಕಚೇರಿಯನ್ನು ತಲುಪಿದ್ದ. ಇದು ನನ್ನ ಗೆಳತಿಯ ನಂಬರ್ ನನಗೆ ಎಲ್ಲಾ ಕರೆಗಳ ವಿವರ ಬೇಕು , ಆಕೆ ಯಾರ ಜತೆ ಮಾತನಾಡುತ್ತಾಳೆ ಎಂದು ನನಗೆ ತಿಳಿಯಬೇಕು ಎಂದು ಹೇಳಿದ.

ಮುಜಾಫರ್ಪುರ್, ಮಾರ್ಚ್ 21: ಪ್ರೇಯಸಿ ನಿತ್ಯ ಯಾರೊಂದಿಗೆ ಮಾತನಾಡುತ್ತಿದ್ದಾಳೆಂದು ತಿಳಿಯಲು ಹೋದ ವ್ಯಕ್ತಿ ಇಡೀ ಟೆಲಿಕಾಂ ಕಚೇರಿಯನ್ನೇ ಧ್ವಂಸಗೊಳಿಸಿರುವ ಘಟನೆ ಬಿಹಾರದ ಮುಜಾಫರ್ಪುರದಲ್ಲಿ ನಡೆದಿದೆ. ಆತನಿಗೆ ತನ್ನ ಗೆಳತಿಯ ಮೇಲೆ ಹಲವು ದಿನಗಳಿಂದ ಅನುಮಾನವಿತ್ತು. ಹೇಗಾದರೂ ಮಾಡಿ ಅದನ್ನು ತಿಳಿದುಕೊಳ್ಳಲೇಬೇಕೆಂದು ನಿರ್ಧರಿಸಿದ್ದ, ಕೊಡಲಿಯನ್ನು ಹಿಡಿದು ಹುಚ್ಚು ಪ್ರೇಮಿ ಟೆಲಿಕಾಂ ಕಚೇರಿಯನ್ನು ತಲುಪಿದ್ದ. ಇದು ನನ್ನ ಗೆಳತಿಯ ನಂಬರ್ ನನಗೆ ಎಲ್ಲಾ ಕರೆಗಳ ವಿವರ ಬೇಕು , ಆಕೆ ಯಾರ ಜತೆ ಮಾತನಾಡುತ್ತಾಳೆ ಎಂದು ನನಗೆ ತಿಳಿಯಬೇಕು ಎಂದು ಹೇಳಿದ.
ಆದರೆ ಟೆಲಿಕಾಂ ಸಿಬ್ಬಂದಿ ವಿವರಗಳನ್ನು ನೀಡಲು ನಿರಾಕರಿಸಿದಾಗ, ಆತ ಕೋಪಗೊಂಡಿದ್ದಾನೆ. ಹಾಗೆಯೇ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಕೊಡಲಿಯಿಂದ ಕಚೇರಿಯನ್ನು ಧ್ವಂಸಗೊಳಿಸಲು ಪ್ರಾರಂಭಿಸಿದ್ದ. ಈ ವೇಳೆ ಜನರು ಆತನನ್ನು ಹಿಡಿದು ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.
ಈ ಘಟನೆ ಮುಜಫರ್ ಪುರ್ ಜಿಲ್ಲೆಯ ಮಿಥನ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆ ಹುಚ್ಚು ಪ್ರೇಮಿ ತನ್ನ ಗೆಳತಿಯ ಕರೆ ವಿವರಗಳನ್ನು ಕೇಳಲು ಟೆಲಿಕಾಂ ಕಚೇರಿಗೆ ಬಂದಿದ್ದ. ಅವನು ಕಚೇರಿಗೆ ಪ್ರವೇಶಿಸಿದ ತಕ್ಷಣ, ಅಲ್ಲಿದ್ದ ಮಹಿಳಾ ಉದ್ಯೋಗಿಗಳೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದನು ಮತ್ತು ನಂತರ ಸ್ಥಳವನ್ನು ಧ್ವಂಸ ಮಾಡಲು ಪ್ರಾರಂಭಿಸಿದನು. ಈ ಘಟನೆಯು ಭೀತಿಯನ್ನು ಸೃಷ್ಟಿಸಿತು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಯುವಕ ಈ ಹಿಂದೆಯೂ ಟೆಲಿಕಾಂ ಕಚೇರಿಗೆ ಬಂದು ತನ್ನ ಗೆಳತಿಯ ಕರೆ ವಿವರಗಳನ್ನು ಕೇಳುತ್ತಿದ್ದ. ನೌಕರರು ಅದನ್ನು ನೀಡಲು ನಿರಾಕರಿಸಿದಾಗ, ಅವನು ಅವರನ್ನು ನಿಂದಿಸಿ ಸ್ಥಳದಿಂದ ಹೊರಟುಹೋಗಿದ್ದ.
ಮತ್ತಷ್ಟು ಓದಿ: Bengaluru: ಪ್ರೇಯಸಿ ಹುಟ್ಟಿದ ಹಬ್ಬ ಆಚರಣೆ ಬಳಿಕ ಕೊಲೆ ಪ್ರಕರಣ; ಪ್ರಿಯಕರ ಮಾಡಿದ್ದ ಪ್ಲಾನ್ ಏನು ಗೊತ್ತಾ?
ಇದಾದ ನಂತರ ಅವನು ಮತ್ತೆ ಬಂದಿದ್ದ ಮತ್ತು ಈ ಬಾರಿ ಖಾಲಿ ಕೈಯಿರಲಿಲ್ಲ ಬದಲಾಗಿ ಕೊಡಲಿ ಇತ್ತು. ಒಳಗೆ ಪ್ರವೇಶಿಸಿದ ತಕ್ಷಣ, ಅವನು ಮಹಿಳಾ ಉದ್ಯೋಗಿಗಳೊಂದಿಗೆ ಜಗಳವಾಡಲು ಪ್ರಾರಂಭಿಸಿದ್ದ ಮತ್ತು ನಂತರ ಟೆಲಿಕಾಂ ಕಂಪನಿಯ ಟ್ಯಾಪಿಂಗ್ ಗ್ಲಾಸ್ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿದ ಪರಿಣಾಮ ಗಾಜು ಒಡೆದು ಪುಡಿ ಪುಡಿಯಾಗಿದೆ. ಇದರಿಂದಾಗಿ ಹತ್ತಿರದ ಅಂಗಡಿಯವರು ಮತ್ತು ದಾರಿಯಲ್ಲಿ ಹೋಗುತ್ತಿದ್ದವರು ಸ್ಥಳದಲ್ಲಿ ಜಮಾಯಿಸಿದ್ದರು. ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿತ್ತು, ತನಿಖೆ ನಡೆಯುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ