ಉತ್ತರ ಪ್ರದೇಶ: ಯೂಟ್ಯೂಬ್ ನೋಡಿ ಸರ್ಜರಿ ಮಾಡಿಕೊಳ್ಳಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿ
ಯೂಟ್ಯೂಬ್ ನೋಡಿ ಸರ್ಜರಿ ಮಾಡಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ವ್ಯಕ್ತಿಗೆ ತುಂಬಾ ದಿನಗಳಿಂದ ಹೊಟ್ಟೆ ನೋವು ಬರುತ್ತಿತ್ತು, ಹಲವು ವೈದ್ಯರನ್ನು ಸಂಪರ್ಕಿಸಿದರೂ ಸಮಸ್ಯೆ ಪರಿಹಾರವಾಗದಿದ್ದಾಗ ತನಗೆ ತಾನೇ ಸರ್ಜರಿ ಮಾಡಿಕೊಳ್ಳುವುದು ಸೂಕ್ತ ಎಂದು ನಿರ್ಧರಿಸಿದ್ದ.

ಮಥುರಾ, ಮಾರ್ಚ್ 21: ಯೂಟ್ಯೂಬ್ ನೋಡಿ ಸರ್ಜರಿ ಮಾಡಿಕೊಳ್ಳಲು ಹೋಗಿ ವ್ಯಕ್ತಿಯೊಬ್ಬ ಸಂಕಷ್ಟಕ್ಕೆ ಸಿಲುಕಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ವ್ಯಕ್ತಿಗೆ ತುಂಬಾ ದಿನಗಳಿಂದ ಹೊಟ್ಟೆ ನೋವು ಬರುತ್ತಿತ್ತು, ಹಲವು ವೈದ್ಯರನ್ನು ಸಂಪರ್ಕಿಸಿದರೂ ಸಮಸ್ಯೆ ಪರಿಹಾರವಾಗದಿದ್ದಾಗ ತನಗೆ ತಾನೇ ಸರ್ಜರಿ ಮಾಡಿಕೊಳ್ಳುವುದು ಸೂಕ್ತ ಎಂದು ನಿರ್ಧರಿಸಿದ್ದ. ಯೂಟ್ಯೂಬ್‌ನಲ್ಲಿ ಹಲವಾರು ವೀಡಿಯೊಗಳನ್ನು ನೋಡಿದ ನಂತರ, ಔಷಧ ಅಂಗಡಿಯಿಂದ ಔಷಧಿಗಳನ್ನು ಖರೀದಿ ಮಾಡಿದ್ದ.
ನಂತರ ಯೂಟ್ಯೂಬ್‌ನಲ್ಲಿ ನೋಡಿದ ಆಧಾರದ ಮೇಲೆ ಸ್ವತಃ ಶಸ್ತ್ರಚಿಕಿತ್ಸೆಗೆ ಪ್ರಯತ್ನಿಸಿದ್ದು ಅವರ ಸ್ಥಿತಿ ಹದಗೆಟ್ಟಾಗ, ಅವರ ಕುಟುಂಬವು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿತು.
ರಾಜಾ ಬಾಬು ಹಲವಾರು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ವೈದ್ಯರನ್ನು ಸಂಪರ್ಕಿಸಿದ ನಂತರವೂ ಅವರ ನೋವು ಕಡಿಮೆಯಾಗಲಿಲ್ಲ. ನೋವು ಅಸಹನೀಯವಾದಾಗ, ಅವರು ಮಥುರಾಗೆ ಹೋಗಿ ಶಸ್ತ್ರಚಿಕಿತ್ಸಾ ಬ್ಲೇಡ್, ಹೊಲಿಗೆ ಸಾಮಗ್ರಿಗಳು ಮತ್ತು ಅರಿವಳಿಕೆ ಇಂಜೆಕ್ಷನ್‌ಗಳನ್ನು ಖರೀದಿಸಿದ್ದ. ಬುಧವಾರ ತಮ್ಮ ಕೋಣೆಯಲ್ಲಿ ಕುಳಿತು ಶಸ್ತ್ರ ಚಿಕಿತ್ಸೆ ಮಾಡಲು ಪ್ರಾರಂಭಿಸಿದ್ದ.
ಸ್ವಲ್ಪ ಸಮಯದ ಬಳಿಕ ಅರವಳಿಕೆ ಪರಿಣಾಮ ಕಡಿಮೆಯಾದಾಗ ತೀವ್ರ ನೋವು ಶುರುವಾಗಿ ಅರಚಲಾರಂಭಿಸಿದ್ದರು. ಕೂಡಲೇ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸುಮಾರು 18 ವರ್ಷಗಳ ಹಿಂದೆ ರಾಜಾ ಬಾಬು ಅವರಿಗೆ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ಮನೆಯವರು ಹೇಳಿದ್ದಾರೆ.
ಮತ್ತಷ್ಟು ಓದಿ: ಇದು ನನ್ನ ಪತ್ನಿಗೆ ಪ್ರೀತಿಯ ಉಡುಗೊರೆ; ತನಗೆ ತಾನೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ
ಕಳೆದ ಕೆಲವು ದಿನಗಳಿಂದ ಅವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಮತ್ತು ಹಲವಾರು ವೈದ್ಯರನ್ನು ಸಂಪರ್ಕಿಸಿದರೂ ಯಾವುದೇ ಪರಿಹಾರ ಸಿಗಲಿಲ್ಲ. ಆಗ ರಾಜಾ ಬಾಬು ಸ್ವತಃ ಚಿಕಿತ್ಸೆ ಪಡೆಯಲು ನಿರ್ಧರಿಸಿದರು.
ಆದರೆ, ಅವರ ಸ್ಥಿತಿ ಹದಗೆಟ್ಟಂತೆ, ಹೆಚ್ಚಿನ ಚಿಕಿತ್ಸೆಗಾಗಿ ರಾಜಾ ಬಾಬು ಅವರನ್ನು ಆಗ್ರಾದ ಎಸ್‌ಎನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ