ಉತ್ತರ ಪ್ರದೇಶ: ಮಾವನ ಮನೆಗೆ ಹೋಗಿ ನೇಣಿಗೆ ಶರಣಾದ ಅಳಿಯ
ವ್ಯಕ್ತಿಯೊಬ್ಬ ಮಾವನ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದ ವ್ಯಕ್ತಿ ಶವವಾಗಿದ್ದಾನೆ. ಸಾಯುವ ಮೊದಲು ವಿಡಿಯೋವೊಂದನ್ನು ಮಾಡಿಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಬಾಲಕ್ರಾಮ್ ಎಂದು ಗುರುತಿಸಲಾಗಿದೆ. ಆ ವ್ಯಕ್ತಿ ಸಾಯುವ ಮುನ್ನ 15 ಸೆಕೆಂಡುಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು, ತನ್ನನ್ನು ಯಾರೋ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ನನ್ನ ಪತ್ನಿ ಸುಧಾಗೆ ಯಾವುದೇ ಹಕ್ಕಿಲ್ಲ.

ಝಾನ್ಸಿ, ಮಾರ್ಚ್ 21: ವ್ಯಕ್ತಿಯೊಬ್ಬ ಮಾವನ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಪತ್ನಿಯನ್ನು ಕರೆದುಕೊಂಡು ಬರಲು ಹೋಗಿದ್ದ ವ್ಯಕ್ತಿ ಶವವಾಗಿದ್ದಾನೆ. ಸಾಯುವ ಮೊದಲು ವಿಡಿಯೋವೊಂದನ್ನು ಮಾಡಿಟ್ಟಿದ್ದರು. ಮೃತ ವ್ಯಕ್ತಿಯನ್ನು ಬಾಲಕ್ರಾಮ್ ಎಂದು ಗುರುತಿಸಲಾಗಿದೆ. ಆ ವ್ಯಕ್ತಿ ಸಾಯುವ ಮುನ್ನ 15 ಸೆಕೆಂಡುಗಳ ವೀಡಿಯೊವನ್ನು ರೆಕಾರ್ಡ್ ಮಾಡಿದ್ದರು, ತನ್ನನ್ನು ಯಾರೋ ಕೊಲೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ನನ್ನ ಪತ್ನಿ ಸುಧಾಗೆ ಯಾವುದೇ ಹಕ್ಕಿಲ್ಲ.
ಈ ಜನರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ನಾನು ನನ್ನ ಮಾವನ ಮನೆಯಲ್ಲಿದ್ದೇನೆ. ಈಗೇನಾಗುತ್ತೆ ನೋಡಿ ಎಂದು ಹೇಳಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಲಕ್ ರಾಮ್ ಮತ್ತು ಸುಧಾ ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೃತರ ತಂದೆ ತನ್ನ ಸೊಸೆ (ಸುಧಾ) 15 ದಿನಗಳ ಹಿಂದೆ ತನ್ನ ತಾಯಿಯ ಮನೆಗೆ ಹೋಗಿದ್ದರು ಮತ್ತು ಘಟನೆ ನಡೆದ ದಿನ ಬಾಲಕ್ ರಾಮ್ ಅವಳನ್ನು ಮರಳಿ ಕರೆತರಲು ಹೋಗಿದ್ದರು ಎಂದು ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತನ್ನ ಮಗನನ್ನು ಈ ಕಠಿಣ ಹೆಜ್ಜೆ ಇಡುವಂತೆ ಯಾರೋ ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ ಎಂದು ಅದು ಹೇಳಿದೆ.
ಮತ್ತಷ್ಟು ಓದಿ: ಮರ್ಮಾಂಗಕ್ಕೆ ಒದ್ದು ಕೊಲ್ಲಲು ಪ್ರಯತ್ನಿಸಿದ್ದಾಳೆ: ಪತ್ನಿ ವಿರುದ್ಧ ಕಿರುಕುಳ ಆರೋಪ ಮಾಡಿದ ಟೆಕ್ಕಿ
ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆಗಳು ನಡೆಯುತ್ತಿದೆ.
ಮತ್ತೊಂದು ಘಟನೆ ಪತ್ನಿ ಹಾಗೂ ಆಕೆಯ ಕುಟುಂಬ ಸದಸ್ಯರ ಕಿರುಕುಳದಿಂದ ಬೇಸತ್ತ ಟೆಕ್ಕಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ನಡೆದಿತ್ತು. ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ (34) ಮಧ್ಯರಾತ್ರಿ ತನ್ನ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ 24 ಪುಟಗಳ ಡೆತ್ ನೋಟ್ ಬರೆದಿಟ್ಟು, ವಿಡಿಯೋ ಮಾಡಿದ್ದಾರೆ.
ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸರು ಆರೋಪಿ ಪತ್ನಿ ನಿಖಿತಾ ಸಿಂಘಾನಿಯಾ ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ಹಲವು ವಿಚಾರಗಳನ್ನು ನಿಖಿತಾ ಪೊಲೀಸರ ಮುಂದೆ ಹೇಳಿದ್ದಾರೆ. ನಾನು ಮತ್ತು ಅತುಲ್ ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದೇವೆ . ಆತ ಮಾಡಿರುವ ಆರೋಪ ಸುಳ್ಳು, ಎಲ್ಲವನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ. 2020 ರಿಂದಲೂ ನಾವು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದೇವೆ. ಆತನ ಸಾವಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ