AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವರದಕ್ಷಿಣೆಯಾಗಿ ನೀಡಿದ್ದ ಬೈಕ್​ನ ಕಂತನ್ನು ಅತ್ತೆ-ಮಾವ ಕಟ್ಟದಿದ್ದಕ್ಕೆ ಅಳಿಯ ಆತ್ಮಹತ್ಯೆ

ಕಳೆದ ಒಂದು ವರ್ಷದ ಹಿಂದಷ್ಟೇ ದೀಪಕ್​ ಎಂಬ ವ್ಯಕ್ತಿ ಮದುವೆಯಾಗಿದ್ದ, ಅದೇ ದಿನಾಂಕದಂದೇ ಸಾವನ್ನಪ್ಪಿದ್ದಾರೆ. ಮದುವೆಯಲ್ಲಿ ವರದಕ್ಷಿಣೆಯಾಗಿ ನೀಡಿದ್ದ ಬೈಕ್​ ದೀಪಕ್ ಸಾವಿಗೆ ಕಾರಣವಾಯಿತು. ಮದುವೆ ವೇಳೆ ಯುವಕನಿಗೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್ ನ ಕಂತನ್ನು ಅತ್ತೆ-ಮಾವಂದಿರು ಕಟ್ಟದೇ ಇದ್ದಾಗ ಯುವಕನ ಬೈಕ್​ನ್ನು ಫೈನಾನ್ಸ್ ಕಂಪನಿಯವರು ತೆಗೆದುಕೊಂಡು ಹೋಗಿದ್ದಾರೆ.

ವರದಕ್ಷಿಣೆಯಾಗಿ ನೀಡಿದ್ದ ಬೈಕ್​ನ ಕಂತನ್ನು ಅತ್ತೆ-ಮಾವ ಕಟ್ಟದಿದ್ದಕ್ಕೆ ಅಳಿಯ ಆತ್ಮಹತ್ಯೆ
ಮದುವೆ
ನಯನಾ ರಾಜೀವ್
|

Updated on:Dec 10, 2024 | 2:04 PM

Share

ಕಳೆದ ಒಂದು ವರ್ಷದ ಹಿಂದಷ್ಟೇ ದೀಪಕ್​ ಎಂಬ ವ್ಯಕ್ತಿ ಮದುವೆಯಾಗಿದ್ದ, ಅದೇ ದಿನಾಂಕದಂದೇ ಸಾವನ್ನಪ್ಪಿದ್ದಾರೆ. ಮದುವೆಯಲ್ಲಿ ವರದಕ್ಷಿಣೆಯಾಗಿ ನೀಡಿದ್ದ ಬೈಕ್​ ದೀಪಕ್ ಸಾವಿಗೆ ಕಾರಣವಾಯಿತು. ಮದುವೆ ವೇಳೆ ಯುವಕನಿಗೆ ವರದಕ್ಷಿಣೆಯಾಗಿ ನೀಡಿದ್ದ ಬೈಕ್ ನ ಕಂತನ್ನು ಅತ್ತೆ-ಮಾವಂದಿರು ಕಟ್ಟದೇ ಇದ್ದಾಗ ಯುವಕನ ಬೈಕ್​ನ್ನು ಫೈನಾನ್ಸ್ ಕಂಪನಿಯವರು ತೆಗೆದುಕೊಂಡು ಹೋಗಿದ್ದಾರೆ.

ಇದರಿಂದ ಕೋಪಗೊಂಡ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬನ್ಮಂಖಿ ಮುನ್ಸಿಪಲ್ ಕೌನ್ಸಿಲ್ ವಾರ್ಡ್ ಸಂಖ್ಯೆ 21 ಪಾಸ್ವಾನ್ ಟೋಲಾದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ದೀಪಕ್ ಕುಮಾರ್ ಪಾಸ್ವಾನ್ ಎಂದು ಗುರುತಿಸಲಾಗಿದೆ.

ಮೃತನ ಮಾವ ರಾಜ್‌ಕುಮಾರ್ ಪಾಸ್ವಾನ್ ಅವರು ದೀಪಕ್‌ಗೆ ವರದಕ್ಷಿಣೆಯಾಗಿ ಬೈಕ್ ನೀಡಿದ್ದರು. ನಗದು ನೀಡಿ ಬೈಕ್ ಖರೀದಿಸಿ ಕೊಡುವ ಸಾಮರ್ಥ್ಯ ಅವರಲ್ಲಿ ಇಲ್ಲದೇ ಕಂತು ಕಟ್ಟಿಕೊಂಡು ಬೈಕ್ ತೆಗೆದುಕೊಂಡು ಹೋಗಿದ್ದಾರೆ. ಹಣದ ಕೊರತೆಯಿಂದ ಮೂರು ತಿಂಗಳಿಂದ ಕಂತು ಕಟ್ಟಿರಲಿಲ್ಲ. ಆದರೆ ದೀಪಕ್ ಪದೇ ಪದೇ ಕರೆ ಮಾಡಿ ತೊಂದರೆ ಕೊಟ್ಟಿದ್ದ.

ಮಧ್ಯಾಹ್ನದ ವೇಳೆಗೆ ದೀಪಕ್ ತನ್ನ ಕೋಣೆಗೆ ತೆರಳಿ ಕೊಠಡಿಗೆ ಒಳಗಿನಿಂದ ಬೀಗ ಹಾಕಿದ್ದಾನೆ ಎಂದು ದೀಪಕ್ ಕುಮಾರ್ ಕುಟುಂಬಸ್ಥರು ತಿಳಿಸಿದ್ದಾರೆ. ಬಹಳ ಹೊತ್ತಾದರೂ ಬಾಗಿಲು ತೆರೆಯದೇ ಇದ್ದಾಗ ಮನೆಯಲ್ಲಿದ್ದವರು ಕರೆದಿದ್ದಾರೆ, ಕೊಠಡಿಯಿಂದ ಶಬ್ದ ಬರಲಿಲ್ಲ.

ಮತ್ತಷ್ಟು ಓದಿ: ಬೆಂಗಳೂರು: ಕಸ್ಟಮರ್ ಕೇರ್​ನಲ್ಲಿ ಪರಿಚಯವಾದ ಯುವತಿಗೆ ಮತ್ತು ಬರಿಸಿ ಯುವಕನಿಂದ ನೀಚ ಕೃತ್ಯ

ಮನೆಯವರು ಬಾಗಿಲು ಒಡೆದು ಒಳ ನುಗ್ಗಿ ನೋಡಿದಾಗ ದೀಪಕ್ ಕೊರಳಿಗೆ ಸೀರೆ ಬಿಗಿದುಕೊಂಡು ಸಾವನ್ನಪ್ಪಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಎಸ್‌ಐ ಕಮಲ್ ಕುಮಾರ್ ಮತ್ತು ಎಸ್‌ಐ ಬೀರೇಂದ್ರ ಕುಮಾರ್ ಯಾದವ್ ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದರು. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪೂರ್ಣಿಯಾಗೆ ಕಳುಹಿಸಿದ್ದಾರೆ.

10 ದಿನಗಳ ಹಿಂದೆ ಫಿನಾನ್ಶಿಯರ್ ಮನೆಗೆ ಬಂದಿದ್ದರು

ದೀಪಕ್ ಮದುವೆಯಾದಾಗ ವರದಕ್ಷಿಣೆಯಾಗಿ ಬೈಕ್ ನೀಡಲಾಗಿತ್ತು ಎನ್ನಲಾಗಿದೆ. ಸುಮಾರು 8 ತಿಂಗಳ ಕಂತುಗಳನ್ನು ಹೆಂಡತಿಯ ಮನೆಯವರು ಪಾವತಿಸಿದ್ದು, 3 ತಿಂಗಳ ಕಂತುಗಳು ಮಾತ್ರ ಬಾಕಿ ಉಳಿದಿತ್ತು. ಅದಕ್ಕಾಗಿ ಫೈನಾನ್ಸ್ ಸಿಬ್ಬಂದಿ ದೀಪಕ್ ಗೆ ಮತ್ತೆ ಮತ್ತೆ ಕರೆ ಮಾಡುತ್ತಿದ್ದರು. ನಂತರ ದೀಪಕ್ ಈ ಬಗ್ಗೆ ತನ್ನ ಅತ್ತೆಗೆ ತಿಳಿಸುತ್ತಿದ್ದ.

ಆದರೆ 3 ತಿಂಗಳ ಕಂತು ಬಾಕಿ ಇರುವಾಗ ಫಿನಾನ್ಶಿಯರ್ ವ್ಯಕ್ತಿ 10 ದಿನಗಳ ಹಿಂದೆ ಮನೆಗೆ ಬಂದು ದೀಪಕ್ ಬೈಕ್ ತೆಗೆದುಕೊಂಡು ಹೋಗಿದ್ದರು. ದೀಪಕ್ ದಿನಗೂಲಿ ಕೆಲಸ ಮಾಡುತ್ತಿದ್ದು, ಅದೇ ಬೈಕ್​ನಲ್ಲಿ ಕೆಲಸಕ್ಕೆ ಬರುತ್ತಿದ್ದ ಎನ್ನಲಾಗಿದೆ.

ಬೈಕ್ ಕಿತ್ತುಕೊಂಡಿದ್ದರಿಂದ ಕೋಪಗೊಂಡ ದೀಪಕ್ ಪತ್ನಿಯ ಮೇಲಿನ ಕೋಪವನ್ನೆಲ್ಲಾ ಹೊರಹಾಕಿ ಆಕೆಗೆ ತೀವ್ರವಾಗಿ ಥಳಿಸಿದ್ದ, ಮಗಳಿಗೆ ಥಳಿಸಿದ ಬಗ್ಗೆ ಮಾಹಿತಿ ಪಡೆದ ಅತ್ತೆಯಂದಿರು 10-15 ದಿನದೊಳಗೆ ಬೈಕ್ ವಾಪಸ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೂ ದುಡುಕಿ ನಿರ್ಧಾರ ತೆಗೆದುಕೊಂಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:10 pm, Tue, 10 December 24

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ