Bihar Panchayat Polls: ಪೆಟ್ರೋಲ್ ದರ ಏರಿಕೆ ಪ್ರತಿಭಟಿಸಿ ನಾಮಪತ್ರ ಸಲ್ಲಿಸಲು ಎಮ್ಮೆಯೇರಿ ಬಂದ ಅಭ್ಯರ್ಥಿ

ನಾಮಪತ್ರ ಸಲ್ಲಿಸುವ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಆಲಂ ಎಮ್ಮೆಯ ಮೇಲೆ ಕುಳಿತಿರುವುದು ಕಾಣುತ್ತದೆ. ಆಲಂನ ಕೈಯಲ್ಲಿ ಒಂದು ಕೋಲು ಇದೆ, ಒಬ್ಬ ವ್ಯಕ್ತಿ ಎಮ್ಮೆಯನ್ನು ಕೇಂದ್ರದ ಕಡೆಗೆ ಕರೆದೊಯ್ಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

Bihar Panchayat Polls: ಪೆಟ್ರೋಲ್ ದರ ಏರಿಕೆ ಪ್ರತಿಭಟಿಸಿ ನಾಮಪತ್ರ ಸಲ್ಲಿಸಲು ಎಮ್ಮೆಯೇರಿ ಬಂದ ಅಭ್ಯರ್ಥಿ
ಎಮ್ಮೆಯೇರಿ ಬಂದ ಆಜಾದ್ ಆಲಂ
Edited By:

Updated on: Sep 14, 2021 | 11:45 AM

ಪಟನಾ: ಬಿಹಾರ ರಾಜ್ಯದ ರಾಜಕೀಯ ಅಭ್ಯರ್ಥಿಗಳು ಚುನಾವಣೆಗೆ ಮುಂಚಿತವಾಗಿ ಸ್ವಲ್ಪ ನಾಟಕ ಪ್ರದರ್ಶಿಸುವುದು ಹೊಸತೇನೂ ಅಲ್ಲ. ಕಳೆದ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದಾಗ ಬಹದ್ದೂರಪುರ ಕ್ಷೇತ್ರದ  ಸ್ವತಂತ್ರ ಅಭ್ಯರ್ಥಿಯು ತನ್ನ ನಾಮಪತ್ರ ಸಲ್ಲಿಸಲು ಎಮ್ಮೆಯ ಮೇಲೆ ಕುಳಿತು ಬಂದಿದ್ದರು. ತಾನು ಬಡ ಕುಟುಂಬದವನಾಗಿದ್ದು ನಾಲ್ಕು ಚಕ್ರದ ವಾಹನಗಳನ್ನು ಹೊಂದಿಲ್ಲ ಎಂದು ಅಭ್ಯರ್ಥಿ ಹೇಳಿದ್ದರು.

“ನಾನು ಸಮಾಜದ ಬಡ ಮತ್ತು ದುರ್ಬಲ ವರ್ಗದಿಂದ ಬಂದವನು. ನಾನು ರೈತನ ಮಗ ಮತ್ತು ನನಗೆ ನಾಲ್ಕು ಚಕ್ರದ ವಾಹನವಿಲ್ಲದ ಕಾರಣ ನಾನು ಎಮ್ಮೆಯ ಮೇಲೆ ಬರಲು ನಿರ್ಧರಿಸಿದೆ. ಎಮ್ಮೆ, ಹಸು ಮತ್ತು ಎತ್ತುಗಳು ರೈತನ ಸಂಪತ್ತು ಎಂದು ಮಂಡಲ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿತ್ತು.

ಇದೀಗ ಬಿಹಾರ ಪಂಚಾಯತ್ ಚುನಾವಣೆಯ ಅಭ್ಯರ್ಥಿ ಆಜಾದ್ ಆಲಂ ಎಂಬವರು ನಾಚಾರಿ ಮಂಡಲ್ ಬಂದಂತೆಯೇ ಎಮ್ಮೆಯ ಮೇಲೆ ಕುಳಿತು ನಾಮಪತ್ರ ಸಲ್ಲಿಸಲು ಬಂದಿದ್ದಾರೆ.

ಎಎನ್ಐ ಸುದ್ದಿ ಸಂಸ್ಥೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ, ನಾಮಪತ್ರ ಸಲ್ಲಿಸುವ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ಆಲಂ ಎಮ್ಮೆಯ ಮೇಲೆ ಕುಳಿತಿರುವುದು ಕಾಣುತ್ತದೆ. ಆಲಂನ ಕೈಯಲ್ಲಿ ಒಂದು ಕೋಲು ಇದೆ, ಒಬ್ಬ ವ್ಯಕ್ತಿ ಎಮ್ಮೆಯನ್ನು ಕೇಂದ್ರದ ಕಡೆಗೆ ಕರೆದೊಯ್ಯುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಈ ವಿಡಿಯೊ ಇದು ಟ್ವಿಟರ್‌ನಲ್ಲಿ 10,500 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದನ್ನು ಫೇಸ್‌ಬುಕ್ ಮತ್ತು ಇತರ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗಿದೆ.


ಅನೇಕ ಬಳಕೆದಾರರು ಈ ಸ್ಟಂಟ್ ವಿನೋದಮಯ ಮತ್ತು ‘ಪರಿಸರ ಸ್ನೇಹಿ’ ಎಂದು ಕಂಡುಕೊಂಡರೂ, ಕೆಲವರು ಅಂತಹ ವಿಷಯಗಳನ್ನು ಅನುಮತಿಸಬಾರದು ಎಂದು ಬರೆದಿದ್ದಾರೆ.

“ಜಾಗತಿಕ ತಾಪಮಾನ ಏರಿಕೆ ಮತ್ತು ವಿಶ್ವ ಮಾಲಿನ್ಯವನ್ನು ಕಡಿಮೆ ಮಾಡುವ ಈ ಮಹನೀಯರ ಉಪಕ್ರಮವನ್ನು ನಾವೆಲ್ಲರೂ ಶ್ಲಾಘಿಸಬೇಕ, ಅವರು ಗೆದ್ದರೆ ಕಿವಿಗಡಕಿಚ್ಚುವ ಸೈರನ್ ಹೊಂದಿರುವ ವಾಹನದ ಬದಲು ಅವರು ಅದೇ ಎಮ್ಮೆಯಲ್ಲಿ ಸವಾರಿ ಮಾಡುತ್ತಾರೆ ಎಂದು ಟ್ವೀಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬ ಟ್ವೀಟಿಗರು “ಕೇವಲ ಯಮದೂತರು ಮಾತ್ರ ಎಮ್ಮೆಯ ಮೇಲೆ ಬಂದು ಮಾನವರಾದ ನಮ್ಮಿಂದ ಆತ್ಮಗಳನ್ನು ತೆಗೆದುಕೊಂಡು ಹೋಗಲು ಕುಖ್ಯಾತರಾಗಿದ್ದರು! ಆದರೆ ಇಲ್ಲಿ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಎಮ್ಮೆಯ ಮೇಲೆ ಸವಾರಿ ಮಾಡುವ ನಿಜವಾದ ಮನುಷ್ಯ !! ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ದೇವೇಗೌಡ ಸೇರಿ ಗಣ್ಯರಿಂದ ಸಂತಾಪ

ಇದನ್ನೂ ಓದಿ: Coronavirus cases in India: ದೇಶದಲ್ಲಿ 25,404 ಹೊಸ ಕೊವಿಡ್ ಪ್ರಕರಣ ಪತ್ತೆ, 339 ಮಂದಿ ಸಾವು

(Bihar panchayat polls candidate Azad Alam came to file his nomination on a buffalo)