AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Big News: ಬಿಹಾರದ ಮುಖ್ಯಮಂತ್ರಿಯಾಗಿ 8ನೇ ಬಾರಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ

ಇಂದು ಮಹಾಘಟಬಂಧನ್‌ ಸರ್ಕಾರದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್​​ ಕುಮಾರ್ ಅವರಿಗೆ ಪಾಟ್ನಾದ ರಾಜಭವನದಲ್ಲಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

Big News: ಬಿಹಾರದ ಮುಖ್ಯಮಂತ್ರಿಯಾಗಿ 8ನೇ ಬಾರಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ
ನಿತೀಶ್ ಕುಮಾರ್
TV9 Web
| Updated By: ಸುಷ್ಮಾ ಚಕ್ರೆ|

Updated on:Aug 10, 2022 | 2:32 PM

Share

ಪಾಟ್ನಾ: ಬಿಹಾರದ ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ನಿತೀಶ್ ಕುಮಾರ್ (Nitish Kumar) ಪ್ರಮಾಣವಚನ ಸ್ವೀಕರಿಸಿದ್ದಾರೆ. ಉಪಮುಖ್ಯಮಂತ್ರಿಯಾಗಿ ಆರ್​ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿನ್ನೆಯಷ್ಟೇ ಬಿಜೆಪಿಯೊಂದಿಗಿನ ಮೈತ್ರಿ ಮುರಿದುಕೊಂಡು ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇಂದು ಮಹಾಘಟಬಂಧನ್‌ ಸರ್ಕಾರದ ಸಿಎಂ ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ನಿತೀಶ್​​ ಕುಮಾರ್ ಅವರಿಗೆ ಪಾಟ್ನಾದ ರಾಜಭವನದಲ್ಲಿ ರಾಜ್ಯಪಾಲರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ನಿತೀಶ್ ಕುಮಾರ್ 9 ಪಕ್ಷಗಳ ಮಹಾಘಟಬಂಧನ್ ನಾಯಕರಾಗಿ ಆಯ್ಕೆಯಾಗಿದ್ದಾರೆ. RJD, ಕಾಂಗ್ರೆಸ್, JD(U), ಮತ್ತು CPI, CPIML ಮತ್ತು ಇತರರು ಸೇರಿದಂತೆ ಎಡ ಪಕ್ಷಗಳು ನಿತೀಶ್ ಕುಮಾರ್ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ್ದವು. ನಿನ್ನೆ ಬಿಜೆಪಿ- ಜೆಡಿಯು ಮೈತ್ರಿ ಸರ್ಕಾರದ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಿತೀಶ್ ಕುಮಾರ್ ಬಳಿಕ ರಾಜ್ಯಪಾಲರಿಗೆ 164 ಶಾಸಕರ ಪಟ್ಟಿಯನ್ನು ಸಲ್ಲಿಸಿದ್ದರು. ಅದಾದ ಬಳಿಕ ಇಂದು ಪ್ರಮಾಣವಚನ ಸ್ವೀಕರಿಸಲು ರಾಜ್ಯಪಾಲರು ನಿತೀಶ್ ಕುಮಾರ್ ಅವರನ್ನು ಆಹ್ವಾನಿಸಿದ್ದರು.

ಇಂದು ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಮತ್ತು ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಆಗಸ್ಟ್​ 15ರ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎನ್ನಲಾಗಿದೆ. ಬಿಜೆಪಿಯೊಂದಿಗೆ ನಿತೀಶ್ ಕುಮಾರ್ ಹೊಂದಿದ್ದ ಸಚಿವ ಸಂಪುಟ ಹಂಚಿಕೆಯ ಸೂತ್ರವನ್ನೇ ಆರ್‌ಜೆಡಿ ಮತ್ತು ಜೆಡಿಯು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ. ಹಣಕಾಸು, ರಸ್ತೆ ನಿರ್ಮಾಣ, ಪಟ್ಟಣ ಯೋಜನೆ, ಕೃಷಿ ಮತ್ತು ಭೂ ಕಂದಾಯ ಖಾತೆಗಳನ್ನು ನೀಡುವಂತೆ ಆರ್‌ಜೆಡಿ ಒತ್ತಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Bihar Political Crisis: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಅಂತ್ಯ; ಹೊಸ ಮಿತ್ರಪಕ್ಷದೊಂದಿಗೆ ಹೊಂದಾಣಿಕೆಯ ಮುನ್ಸೂಚನೆ

7 ಪಕ್ಷಗಳ ಮಹಾಘಟಬಂಧನ್ (ಮಹಾಮೈತ್ರಿಕೂಟ) ಹಾಗೂ ಒಬ್ಬ ಪಕ್ಷೇತರರು ನಮಗೆ ಬೆಂಬಲ ನೀಡಲಿದ್ದಾರೆ ಎಂದು ನಿತೀಶ್ ಕುಮಾರ್ ನಿನ್ನೆ ರಾಜ್ಯಪಾಲರೊಂದಿಗಿನ ಎರಡನೇ ಸಭೆಯ ನಂತರ ಹೇಳಿದ್ದರು. ಮೊದಲನೆಯ ಸಭೆಯಲ್ಲಿ ಅವರು ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಮೂಲಕ ಜೆಡಿಯು ಮತ್ತು ಬಿಜೆಪಿ ಮೈತ್ರಿಗೆ ತಿಲಾಂಜಲಿ ಇಟ್ಟಿದ್ದರು. ಅದಾದ ಒಂದು ಗಂಟೆಯ ನಂತರ ಅವರು ತೇಜಸ್ವಿ ಯಾದವ್ ಮತ್ತು ಇತರ ವಿರೋಧ ಪಕ್ಷದ ನಾಯಕರೊಂದಿಗೆ ರಾಜ್ಯಪಾಲರ ಬಳಿಗೆ ತೆರಳಿ, ತಮ್ಮ ಒಟ್ಟು ಬಲದ ಆಧಾರದ ಮೇಲೆ ಮುಂದಿನ ಸರ್ಕಾರವನ್ನು ರಚಿಸಲು ಅವಕಾಶ ನೀಡಬೇಕು ಎಂದು ಕೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Wed, 10 August 22

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?
ಹೆಚ್ಚುತ್ತಲೇ ಇದೆ ‘ಸು ಫ್ರಮ್ ಸೋ’ ಸಿನಿಮಾ ಶೋ ಸಂಖ್ಯೆ; ಕಲೆಕ್ಷನ್ ಹೇಗಿದೆ?