ಪಟನಾ: ಲೋಕ ಜನಶಕ್ತಿ ಪಕ್ಷದ (LJP) ಆರು ಲೋಕಸಭಾ ಸಂಸದರಲ್ಲಿ ನಾಲ್ವರು ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದಿದ್ದು ಅವರನ್ನು ಪ್ರತ್ಯೇಕ ಗುಂಪು ಎಂದು ಗುರುತಿಸುವಂತೆ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಹಾಜಿಪುರ ಸಂಸದ ಮತ್ತು ಚಿರಾಗ್ ಅವರ ಮಾ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಈ ಬಂಡಾಯ ಹಿಂದೆ ಇದ್ದಾರೆ ಎಂದು ನಂಬಲಾಗಿದೆ. ಪಾರಸ್ ತನ್ನ ಅಣ್ಣನ ಮಗನಿಂದ ಅಸಮಾಧಾನಗೊಂಡಿದ್ದಾರೆ ಮತ್ತು ಜೆಡಿಯು ಲೋಕಸಭಾ ಸಂಸದರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಪಾರಸ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉತ್ತಮ ನಾಯಕ ಮತ್ತು “ವಿಕಾಸ್ ಪುರುಷ್” (ಅಭಿವೃದ್ಧಿ-ಆಧಾರಿತ ವ್ಯಕ್ತಿ) ಎಂದು ಶ್ಲಾಘಿಸಿದರು. ಅವರ ಗುಂಪು ಬಿಜೆಪಿ ನೇತೃತ್ವದ ಎನ್‌ಡಿಎಯ ಭಾಗವಾಗಿ ಮುಂದುವರಿಯುತ್ತದೆ ಮತ್ತು ಚಿರಾಗ್ ಸಂಘಟನೆಯ ಭಾಗವಾಗಿ ಉಳಿಯಬಹುದು ಎಂದು ಹೇಳಿದರು. ಪಾಸ್ವಾನ್ ತಮ್ಮ ಪಕ್ಷವನ್ನು ಜೆಡಿಯು ವಿರುದ್ಧ ಮುನ್ನಡೆಸಿದ್ದರಿಂದ ಮತ್ತು 2020 ರ ವಿಧಾನಸಭೆಯಲ್ಲಿ ಕಳಪೆ ಸ್ಪರ್ಧೆ ನಡೆಸಿದ್ದರಿಂದ ಬಿಹಾರದಲ್ಲಿ ನಡೆದ ಘಟನೆಗಳ ಬಗ್ಗೆ 99 ಪ್ರತಿಶತದಷ್ಟು ಎಲ್ ಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಪಾರಸ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬಿರುಕುಂಟಾಗಿದೆ ಎಂಬ ವರದಿಗಳ ನಡುವೆಯೇ, 2020 ರಲ್ಲಿ ತನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ಮರಣದ ನಂತರ ಪಕ್ಷದ ಮುಂದಾಳತ್ವ ವಹಿಸಿಕೊಂಡ ಚಿರಾಗ್ ಪಾಸ್ವಾನ್ “ನನ್ನ ತಂದೆಯ ಸಾವಿನ ಆಘಾತವನ್ನು ನಾನು ಸಹಿಸಬಹುದಾದರೆ, ನಾನು ಈ ಆಘಾತ ಕೂಡಾ ನಾನು ಸಹಿಸಿಕೊಳ್ಳುತ್ತೇನೆ ಎಂದು ತಮ್ಮ ನಿಕಟವರ್ತಿಗಳಲ್ಲಿ ಹೇಳಿದ್ದಾರೆ.
ಏತನ್ಮಧ್ಯೆ ನಾಲ್ಕು ಅಥವಾ ಐದು ಎಲ್‌ಜೆಪಿ ಸಂಸದರು ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. “ನಾಲ್ಕು ಅಥವಾ ಐದು ಎಲ್‌ಜೆಪಿ ಸಂಸದರನ್ನು ಪ್ರತ್ಯೇಕ ಗುಂಪಾಗಿ ಪರಿಗಣಿಸುವ ಬಗ್ಗೆ ಭಾರತದ ಚುನಾವಣಾ ಆಯೋಗಕ್ಕೆ ತಿಳಿಸಿದ ನಂತರ, ವಿಭಜನೆಯು ಅಧಿಕೃತವಾಗಿರುತ್ತದೆ ಎಲ್ ಜೆಪಿ ಮುಖಂಡರೊಬ್ಬರು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಉಲ್ಲೇಖಿಸಿದೆ.
Pashupati Kumar Paras unanimously elected as the Lok Janshakti Party (LJP) Parliamentary party leader in Lok Sabha; a meeting was held on 13th June.
(File photo) pic.twitter.com/2qNBAqiZhq
— ANI (@ANI) June 14, 2021
ಎಲ್‌ಜೆಪಿ 2019 ರ ಲೋಕಸಭೆಯಲ್ಲಿ ವೈಶಾಲಿ (ಬಿನಾ ದೇವಿ), ಸಮಸ್ತಿಪುರ (ರಾಮ್ ಚಂದ್ರ ಪಾಸ್ವಾನ್ ಮತ್ತು ನಂತರ ಅವರ ಮಗ ಪ್ರಿನ್ಸ್ ರಾಜ್), ಖಗರಿಯಾ (ಚೌಧರಿ ಮೆಹಬೂಬ್ ಅಲಿ ಖೈಸರ್), ನವಾಡಾ (ಚಂದನ್ ಕುಮಾರ್) ಮತ್ತು ಜಮುಯಿ (ಚಿರಾಗ್ ಪಾಸ್ವಾನ್) ಹೀಗೆ ಒಟ್ಟು ಆರು ಸ್ಥಾನಗಳನ್ನು ಗೆದ್ದಿದೆ .2020 ರ ವಿಧಾನಸಭಾ ಚುನಾವಣೆಯಲ್ಲಿ ಬೆಗುಸರಾಯ್ನಲ್ಲಿರುವ ಮತಿಹಾನಿ ಸೀಟು ಗೆದ್ದಿದ್ದ ಎಲ್ಜೆಪಿಯ ಏಕೈಕ ಶಾಸಕ ರಾಜ್ ಕುಮಾರ್ ಸಿಂಗ್ ಈಗಾಗಲೇ ಜೆಡಿಯುಗೆ ಸೇರ್ಪಡೆಗೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಬಂಡಾಯ ಗುಂಪು ಜೆಡಿಯುಗೆ ಬೆಂಬಲ ನೀಡಬಹುದು ಎಂದು ಮೂಲಗಳು ತಿಳಿಸಿವೆ. ಪಶುಪತಿ ಪಾರಸ್ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡುವ ಬಗ್ಗೆಯೂ ಊಹಾಪೋಹಗಳಿವೆ.
ನಿತೀಶ್ ಕುಮಾರ್ ಅವರ ವಿರೋಧದಿಂದಾಗಿ ಎಲ್‌ಜೆಪಿ ಕಳೆದ ವರ್ಷ ಬಿಹಾರದ ಎನ್‌ಡಿಎಯಿಂದ ಹೊರನಡೆದಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಇದು ಜೆಡಿಯು ಕಣದಲ್ಲಿದ್ದ ಎಲ್ಲ ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.ಬಿಹಾರ ಚುನಾವಣೆಯಲ್ಲಿ ಎಲ್ ಡೆಪಿಗೆ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾದರೂ, ಅದು ಜೆಡಿಯುಗೆ ಗಂಭೀರ ಹಾನಿಯನ್ನುಂಟುಮಾಡಿತು. ಪ್ರಸ್ತುತ ಚುನಾವಣೆಯಲ್ಲಿ ಜೆಡಿಯು ಸಂಖ್ಯೆ 71 ರಿಂದ 43 ಕ್ಕೆ ಇಳಿದಿದೆ.
ಲೋಕಸಭೆಯಲ್ಲಿ ಎಲ್‌ಜೆಪಿ ನಾಯಕರಾಗಿ ಪಶುಪತಿ ಕುಮಾರ್ ಪಾರಸ್ ಆಯ್ಕೆ
ಲೋಕಸಭೆಯಲ್ಲಿ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ನಾಯಕರಾಗಿ ಪಶುಪತಿ ಪಾರಸ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ಸೋಮವಾರ ವರದಿ ಮಾಡಿದೆ. ಎಲ್‌ಜೆಪಿ ಆರು ಸಂಸದರಲ್ಲಿ ಐವರು ಅದರ ಮುಖ್ಯಸ್ಥ ಚಿರಾಗ್ ಪಾಸ್ವಾನ್ ವಿರುದ್ಧ ಕೈಜೋಡಿಸಿ ಪಾರಸ್ ಅವರನ್ನು ಅವರ ಸ್ಥಾನಕ್ಕೆ ಆಯ್ಕೆ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಐವರು ಸಂಸದರು ಇಂದು ಮಧ್ಯಾಹ್ನ 3 ಗಂಟೆಗೆ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಲಿದ್ದಾರೆ.
2020 ರಲ್ಲಿ ಎಲ್‌ಜೆಪಿ ಸಂಸ್ಥಾಪಕ ಮತ್ತು ಮಾಜಿ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನರಾದ ನಂತರ ಪಕ್ಷವನ್ನು ವಹಿಸಿಕೊಂಡ ಚಿರಾಗ್ ಅವರ ಕಾರ್ಯವೈಖರಿಯ ಬಗ್ಗೆ ಬಂಡುಕೋರರು ಸಂತೋಷವಾಗಿಲ್ಲ.
“ನಮ್ಮ ಪಕ್ಷದಲ್ಲಿ 6 ಸಂಸದರು ಇದ್ದಾರೆ. ನಮ್ಮ ಪಕ್ಷವನ್ನು ಉಳಿಸಬೇಕೆಂಬುದು 5 ಸಂಸದರ ಬಯಕೆಯಾಗಿತ್ತು. ಆದ್ದರಿಂದ, ನಾನು ಪಕ್ಷವನ್ನು ಮುರಿಯಲಿಲ್ಲ, ಅದನ್ನು ಉಳಿಸಿದ್ದೇನೆ. ಚಿರಾಗ್ ಪಾಸ್ವಾನ್ ನನ್ನ ಅಣ್ಣನ ಮಗ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ. ಅವರ ವಿರುದ್ಧ ಯಾವುದೇ ಆಕ್ಷೇಪಣೆ ಇಲ್ಲ “ಎಂದು ಪ್ರಸ್ತುತ ಬಿಹಾರದ ಹಾಜಿಪುರ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತಿರುವ ಪಾರಸ್ ಎಎನ್‌ಐಗೆ ತಿಳಿಸಿದ್ದಾರೆ.
ಇದನ್ನೂ ಓದಿ: Sanchari Vijay Death: ನಟ ಸಂಚಾರಿ ವಿಜಯ್ ನಿಧನ; ಪ್ರತಿಭಾನ್ವಿತ ಕಲಾವಿದನ ದುರಂತ ಅಂತ್ಯ
(Bihar Politics Four of its six Lok Sabha MPs revolted against LJP chief Chirag Paswan)
Published On - 2:25 pm, Mon, 14 June 21