ಹೆಲ್ಮೆಟ್​ ಹಾಕಿಲ್ಲ ಅಂತಾ.. ಬೈಕ್​ ಸವಾರನ ಹಣೆಗೆ Key ಯಿಂದ ಇರಿದೇಬಿಟ್ಟ ಖಾಕಿ!

| Updated By:

Updated on: Jul 29, 2020 | 1:45 PM

ಡೆಹ್ರಾಡೂನ್​: ಹೆಲ್ಮೆಟ್​ ಧರಿಸದ ಬೈಕ್​ ಸವಾರನಿಗೆ ಪೊಲೀಸರು ವಾಹನದ ಬೀಗದ ಕೈಯಿಂದಲೇ ಇರಿದಿರುವ ಘಟನೆ ಉತ್ತರಾಖಂಡ್​ನ ಉಧಮ್​ ಸಿಂಗ್​ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ. ನಿನ್ನೆ ರಾತ್ರಿ ಬೈಕ್​ಗೆ ಪೆಟ್ರೋಲ್​ ತುಂಬಿಸಲು ಸ್ನೇಹಿತನೊಟ್ಟಿಗೆ ತೆರಳಿದ ಯುವಕನನ್ನ ಉತ್ತರಾಖಂಡದ ನಗರ ಗಸ್ತು ಪಡೆಯ ಮೂವರು ಸಿಬ್ಬಂದಿ ತಡೆದಿದ್ದಾರೆ. ಚೆಕ್​ಪಾಯಿಂಟ್​ ಕರ್ತವ್ಯದಲ್ಲಿದ್ದ ಸಿಬ್ಬಂದಿ ನೀನು ಹೆಲ್ಮೆಟ್​ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪ್ರಕರಣ ವಿಕೋಪಕ್ಕೆ ತಿರುಗಿದೆ. ಗಲಾಟೆಯ ಭರದಲ್ಲಿ ಪೊಲೀಸರು ಯುವಕನ ಬೈಕ್​ ಬೀಗದ […]

ಹೆಲ್ಮೆಟ್​ ಹಾಕಿಲ್ಲ ಅಂತಾ.. ಬೈಕ್​ ಸವಾರನ ಹಣೆಗೆ Key ಯಿಂದ ಇರಿದೇಬಿಟ್ಟ ಖಾಕಿ!
Follow us on

ಡೆಹ್ರಾಡೂನ್​: ಹೆಲ್ಮೆಟ್​ ಧರಿಸದ ಬೈಕ್​ ಸವಾರನಿಗೆ ಪೊಲೀಸರು ವಾಹನದ ಬೀಗದ ಕೈಯಿಂದಲೇ ಇರಿದಿರುವ ಘಟನೆ ಉತ್ತರಾಖಂಡ್​ನ ಉಧಮ್​ ಸಿಂಗ್​ ಜಿಲ್ಲೆಯ ರುದ್ರಾಪುರದಲ್ಲಿ ನಡೆದಿದೆ.

ನಿನ್ನೆ ರಾತ್ರಿ ಬೈಕ್​ಗೆ ಪೆಟ್ರೋಲ್​ ತುಂಬಿಸಲು ಸ್ನೇಹಿತನೊಟ್ಟಿಗೆ ತೆರಳಿದ ಯುವಕನನ್ನ ಉತ್ತರಾಖಂಡದ ನಗರ ಗಸ್ತು ಪಡೆಯ ಮೂವರು ಸಿಬ್ಬಂದಿ ತಡೆದಿದ್ದಾರೆ. ಚೆಕ್​ಪಾಯಿಂಟ್​ ಕರ್ತವ್ಯದಲ್ಲಿದ್ದ ಸಿಬ್ಬಂದಿ ನೀನು ಹೆಲ್ಮೆಟ್​ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಪ್ರಕರಣ ವಿಕೋಪಕ್ಕೆ ತಿರುಗಿದೆ. ಗಲಾಟೆಯ ಭರದಲ್ಲಿ ಪೊಲೀಸರು ಯುವಕನ ಬೈಕ್​ ಬೀಗದ ಕೈಯನ್ನ ಕಸಿದು ಆತನ ಹಣೆಗೆ ಇರಿದುಬಿಟ್ಟರಂತೆ.

ಮೂವರು ಪೊಲೀಸರನ್ನ ಅಮಾನತು
ಕೊನೆಗೆ, ಇರಿತದಿಂದ ತೀವ್ರ ರಕ್ತಸ್ರಾವವಾದ ಯುವಕನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ, ಪೊಲೀಸರ ವಿರುದ್ಧ ಪ್ರತಿಭಟನೆಗೂ ಇಳಿದಿದ್ದಾರೆ. ಸ್ಥಳೀಯ ಶಾಸಕ ರಾಜ್​ಕುಮಾರ್​ ಠುಕ್ರಾಲ್​ ಮಧ್ಯ ಪ್ರವೇಶಿಸಿದ ಮೇಲೆ ಪ್ರತಿಭಟನೆಯನ್ನ ಕೈಬಿಡಲಾಯ್ತು.

ಇನ್ನು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಮೂವರು ಪೊಲೀಸರನ್ನ ಅಮಾನತ್ತು ಮಾಡಲಾಗಿದೆ. ಜೊತೆಗೆ, ತನಿಖೆಗೆ ಕೂಡ ಆದೇಶ ನೀಡಲಾಗಿದೆ.

Published On - 2:14 pm, Tue, 28 July 20