ಕೇರಳ: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ; ಆರೋಪಿ ಬಿಷಪ್ ಫ್ರಾಂಕೋ ಮುಳಯ್ಕಲ್ ತಪ್ಪಿತಸ್ಥನಲ್ಲ ಎಂದ ಕೋರ್ಟ್

Bishop Franco Mulakkal ಫ್ರಾಂಕೋ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಬಲವಂತದ ಬಂಧನದ ಆರೋಪ ಹೊರಿಸಲಾಗಿತ್ತು. ಕೋಟ್ಟಯಂನ ನ್ಯಾಯಾಲಯವು 100 ದಿನಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯ ನಂತರ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು.

ಕೇರಳ: ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ; ಆರೋಪಿ ಬಿಷಪ್ ಫ್ರಾಂಕೋ ಮುಳಯ್ಕಲ್ ತಪ್ಪಿತಸ್ಥನಲ್ಲ ಎಂದ ಕೋರ್ಟ್
ಬಿಷಪ್ ಫ್ರಾಂಕೋ ಮುಳಯ್ಕಲ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 14, 2022 | 12:57 PM

ತಿರುವನಂತಪುರಂ: 2014 ಮತ್ತು 2016 ರ ನಡುವೆ ಹಲವಾರು ಬಾರಿ ಕ್ರೈಸ್ತ ಸನ್ಯಾಸಿನಿಯ (Nun) ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ಬಿಷಪ್ ಫ್ರಾಂಕೋ ಮುಳಯ್ಕಲ್ (Bishop Franco Mulakkal)ಅವರನ್ನು ಕೇರಳದ (Kerala) ನ್ಯಾಯಾಲಯವು ಖುಲಾಸೆಗೊಳಿಸಿದೆ. ಫ್ರಾಂಕೋ ಮುಳಯ್ಕಲ್ ಅವರು ಸನ್ಯಾಸಿನಿಯೊಬ್ಬರ ದೂರಿನ ಆಧಾರದ ಮೇಲೆ ಅತ್ಯಾಚಾರಕ್ಕಾಗಿ ಬಂಧಿಸಲ್ಪಟ್ಟ ಭಾರತದ ಮೊದಲ ಕ್ಯಾಥೋಲಿಕ್ ಬಿಷಪ್ ಆಗಿದ್ದರು. ಫ್ರಾಂಕೋ ಮುಳಯ್ಕಲ್ ಅವರು ಪೊಲೀಸರು ಮತ್ತು ನ್ಯಾಯಾಲಯಕ್ಕೆ ಎಲ್ಲರೂ ಸಹಕಾರ ನೀಡಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದಾರೆ. ಫ್ರಾಂಕೋ ವಿರುದ್ಧ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಮತ್ತು ಬಲವಂತದ ಬಂಧನದ ಆರೋಪ ಹೊರಿಸಲಾಗಿತ್ತು. ಕೊಟ್ಟಾಯಂನ ನ್ಯಾಯಾಲಯವು 100 ದಿನಗಳಿಗೂ ಹೆಚ್ಚು ಕಾಲ ನಡೆದ ವಿಚಾರಣೆಯ ನಂತರ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿತು. 2018 ರಲ್ಲಿ, ಜಲಂಧರ್ ಡಯಾಸಿಸ್ ಅಧೀನದಲ್ಲಿರುವ ಸಭೆಯ ಸನ್ಯಾಸಿನಿಯರು ಬಿಷಪ್ ಫ್ರಾಂಕೋ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು.

ಬಿಷಪ್ ಫ್ರಾಂಕೋ ಅವರನ್ನು ಬಂಧಿಸಲಾಯಿತು ಮತ್ತು ಅವರ ವಿರುದ್ಧ ಪಟ್ಟಿ ಮಾಡಲಾದ ಆರೋಪಗಳಲ್ಲಿ ತಪ್ಪಾದ ಬಂಧನ, ಕ್ರಿಮಿನಲ್ ಬೆದರಿಕೆ ಸೇರಿವೆ. ಆರೋಪಗಳ ನಂತರ ಸನ್ಯಾಸಿನಿಯರು ತಮ್ಮ ಅಧಿಕೃತ ಉಡುಪಿನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು ಚರ್ಚ್, ಪೊಲೀಸರು ಮತ್ತು ಸರ್ಕಾರದಿಂದ ಕ್ರಮಕ್ಕೆ ಒತ್ತಾಯಿಸಿದರು.  ಸನ್ಯಾಸಿನಿಯರ ಪ್ರತಿಭಟನೆಯ ನಡುವೆ ಪೊಲೀಸರು ಮೂರು ದಿನಗಳ ವಿಚಾರಣೆಯ ನಂತರ ಫ್ರಾಂಕೋ ಮುಳಯ್ಕಲ್ ಅವರನ್ನು ಬಂಧಿಸಲಾಗಿತ್ತು.

ಈ ತೀರ್ಪು ಆಘಾತ ತಂದಿದೆ ಎಂದು ಅಂದಿನ ಕೋಟ್ಟಯಂ ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಸ್ ಹರಿ ಶಂಕರ್ ಹೇಳಿದ್ದಾರೆ. “ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಾಧಾರಗಳಿವೆ. ಯಾವುದೇ ಸಾಕ್ಷಿಗಳು ಪ್ರತಿಕೂಲವಾಗಿ ಬದಲಾಗಿಲ್ಲ” ಎಂದು ಅವರು ಹೇಳಿದರು.

ಕೋಟ್ಟಯಂ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಿ ಗೋಪಕುಮಾರ್ ಅವರು ಈ ತೀರ್ಪು ನೀಡಿದ್ದಾರೆ. ಮಿಷನರೀಸ್ ಆಫ್ ಜೀಸಸ್ ಕಾನ್ವೆಂಟ್‌ನ ಸದಸ್ಯೆ ಹಾಗೂ ಕುರವಿಲಂಗಾಡ್ ನಡುಕುನ್ನು ಸೇಂಟ್ ಫ್ರಾನ್ಸಿಸ್ ಮಿಷನ್ ಹೋಮ್‌ನ ನಿವಾಸಿ ನೀಡಿದ ದೂರಿನ ಮೇರೆಗೆ ಕುರವಿಲಂಗಾಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಾಸಿಕ್ಯೂಷನ್ ಪರವಾಗಿ ವಿಶೇಷ ನ್ಯಾಯವಾದಿಗಳಾದ ಜಿತೇಶ್ ಜೆ.ಬಾಬು ಮತ್ತು ಸುಬಿನ್ ಕೆ. ವರ್ಗೀಸ್ ಮತ್ತು ವಕೀಲರಾದ ಕೆ ರಾಮನ್ ಪಿಳ್ಳೈ ಮತ್ತು ಸಿಎಸ್ ಅಜಯನ್ ವಾದ ಮಂಡಿಸಿದರು.

ನ್ಯಾಯಾಲಯದ ಬಳಿ ಪೊಲೀಸರು ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಬಾಂಬ್ ಮತ್ತು ಶ್ವಾನ ದಳಗಳು ನ್ಯಾಯಾಲಯಕ್ಕೆ ತೆರಳಿ ಪರಿಶೀಲನೆ ನಡೆಸಿವೆ. ತೀರ್ಪು ಕೇಳಲು ಬಿಷಪ್ ಫ್ರಾಂಕೋ ಹಿಂಬಾಗಿಲ ಮೂಲಕ ನ್ಯಾಯಾಲಯಕ್ಕೆ ಬಂದಿದ್ದರು ಎಂದು ಮಲಯಾಳಂ ಪತ್ರಿಕೆ ಮಲಯಾಳ ಮನೋರಮಾ ವರದಿ ಮಾಡಿದೆ. ಜೂನ್ 2018 ರಲ್ಲಿ ದಾಖಲಾದ ಪ್ರಕರಣದ ವಿಚಾರಣೆಯು ಪಾಲಾ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು. ನಂತರ ಕೋಟ್ಟಯಂ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಸ್ಥಳಾಂತರಿಸಲಾಯಿತು. ಒಂದೂವರೆ ವರ್ಷದಲ್ಲಿ ವಿಚಾರಣೆ ಪೂರ್ಣಗೊಂಡಿತು. ಮಾಜಿ ವೈಕಂ ಡಿವೈಎಸ್ಪಿ ಕೆ ಸುಭಾಷ್ ನೇತೃತ್ವದ ಪ್ರಕರಣದಲ್ಲಿ ಫ್ರಾಂಕೋ ಅವರನ್ನು ಸೆಪ್ಟೆಂಬರ್ 21, 2018 ರಂದು ಬಂಧಿಸಲಾಯಿತು. 25 ದಿನಗಳ ಜೈಲುವಾಸ ಅನುಭವಿಸಿದ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ವಿಚಾರಣೆಯ ದಿನಗಳಲ್ಲಿ ಫ್ರಾಂಕೋ ಮುಳಯ್ಕಲ್ ಅವರು ತ್ರಿಶೂರ್‌ನಲ್ಲಿರುವ ತಮ್ಮ ಕುಟುಂಬದ ಮನೆಯಲ್ಲಿ ತಂಗಿದ್ದಾಗ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ಕಲಾಪವನ್ನು ವರದಿ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧಿಸಿತ್ತು.

ಬಿಷಪ್ ಫ್ರಾಂಕೋ ವಿರುದ್ಧ ಲೈಂಗಿಕ ದೌರ್ಜನ್ಯ, ಬಂಧನ ಮತ್ತು ಬೆದರಿಕೆ ಸೇರಿದಂತೆ ಏಳು ಆರೋಪಗಳನ್ನು ಹೊರಿಸಲಾಯಿತು. 2,000 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಐವರು ಬಿಷಪ್‌ಗಳು, 11 ಪಾದ್ರಿಗಳು, 25 ಸನ್ಯಾಸಿನಿಯರು ಮತ್ತು ಏಳು ಮ್ಯಾಜಿಸ್ಟ್ರೇಟ್‌ಗಳು ಸೇರಿದಂತೆ 89 ಸಾಕ್ಷಿಗಳಿದ್ದರು. 10 ಗೌಪ್ಯ ಹೇಳಿಕೆಗಳಿವೆ. ಕರ್ದಿನಾಳ್ ಮಾರ್ ಜಾರ್ಜ್ ಅಲೆಂಚೇರಿ, ಪಂಜಾಬ್‌ನ ಭಗತ್‌ಪುರದ ಬಿಷಪ್ ಕುರಿಯನ್ ವಲಿಯಕಂಡಂತಿಲ್, ಉಜ್ಜಯಿನಿ ಬಿಷಪ್ ಸೆಬಾಸ್ಟಿಯನ್ ವಡಕ್ಕೆಲ್, ಪಾಲಾ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾ. ಜೋಸೆಫ್ ತಡತ್ತಿಲ್ ಮೊದಲಾದ 39 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿತ್ತು. ಸಂತ್ರಸ್ತ ಸನ್ಯಾಸಿನಿಯನ್ನು 12 ದಿನಗಳ ಕಾಲ ವಿಚಾರಣೆ ನಡೆಸಲಾಯಿತು. 122 ದಾಖಲೆಗಳು ಮತ್ತು 4 ಅಫಿಡವಿಟ್‌ಗಳನ್ನು ಮಂಡಿಸಲಾಗಿತ್ತು. ಪ್ರತಿವಾದಿಯಿಂದ ಆರು ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು.

ಇದನ್ನೂ ಓದಿ: Magh mela ಕೊವಿಡ್ ಉಲ್ಬಣದ ನಡುವೆಯೇ ಪ್ರಯಾಗ್​​ರಾಜ್ ಮಾಘ ಮೇಳದಲ್ಲಿ ಸಾವಿರಾರು ಮಂದಿ ಭಾಗಿ .

Published On - 12:48 pm, Fri, 14 January 22

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್