ಇಂದು ಸಂಜೆ ಕೇರಳದ ಶಬರಿಮಲೆಯಲ್ಲಿ ಮಕರವಿಳಕ್ಕು ಆಚರಣೆ, ಪೊನ್ನಂಬಲಮೇಡುವಿನಲ್ಲಿ ಕಾಣಿಸಿಕೊಳ್ಳಲಿದೆ ಮಕರಜ್ಯೋತಿ

Sabarimala Makaravilakku ಮಧ್ಯಾಹ್ನ 2.29ಕ್ಕೆ ಮಕರ ಸಂಕ್ರಮಣ ಮುಹೂರ್ತ. ಕವಡಿಯಾರ್ ಅರಮನೆಯಿಂದ ಮುದ್ರೆಯಲ್ಲಿರುವ ತುಪ್ಪವನ್ನು ಸಂಕ್ರಮಣದ ಸಮಯದಲ್ಲಿ ಅಭಿಷೇಕ ಮಾಡಲಾಗುತ್ತದೆ. ಪಂದಳಂನಿಂದ ತಿರುವಾಭರಣ ಮೆರವಣಿಗೆ ಸಂಜೆ 6.20ರ ನಂತರ ಸನ್ನಿಧಾನಂ ತಲುಪಲಿದೆ.

ಇಂದು ಸಂಜೆ ಕೇರಳದ ಶಬರಿಮಲೆಯಲ್ಲಿ ಮಕರವಿಳಕ್ಕು ಆಚರಣೆ, ಪೊನ್ನಂಬಲಮೇಡುವಿನಲ್ಲಿ ಕಾಣಿಸಿಕೊಳ್ಳಲಿದೆ ಮಕರಜ್ಯೋತಿ
ಶಬರಿಮಲೆ ದೇಗುಲ (ಸಂಗ್ರಹ ಚಿತ್ರ)

ಶಬರಿಮಲೆ: ಶಬರಿಮಲೆ ಸನ್ನಿಧಾನದಲ್ಲಿ (Sabarimala Sannidhanam)  ಶುಕ್ರವಾರ ಮಕರವಿಳಕ್ಕು(Makaravilakku) ಆಚರಿಸಲಾಗುವುದು. ಶುಕ್ರವಾರ ಸಂಜೆ ಆಕಾಶದಲ್ಲಿ ‘ಮಕರ ಜ್ಯೋತಿ’  (Makara Jyothi)ಗೋಚರಿಸಲಿದೆ. ಶುಕ್ರವಾರ ಮುಂಜಾನೆ 2.29ಕ್ಕೆ ಸಂಕ್ರಮ ಪೂಜೆ ಮತ್ತು ‘ಅಭಿಷೇಕ’ ನಡೆದಿದ್ದು, ಕೌಡಿಯಾರ್ ಅರಮನೆಯಿಂದ ‘ಕನ್ನಿ ಅಯ್ಯಪ್ಪನ್’ (ಮೊದಲಬಾರಿ ಅಯ್ಯಪ್ಪ ವೃತಾಧಾರಿಯಾಗಿ ಶಬರಿಮಲೆಗೆ ಬಂದವರು) ‘ಮಕರಸಂಕ್ರಮಣ’ ಸಮಯದಲ್ಲಿ ತುಪ್ಪದ ನೈವೇದ್ಯಕ್ಕಾಗಿ (ನೆಯ್ಯಭಿಷೇಕ) ‘ನೈ ತೇಂಞಾ’ (ತುಪ್ಪದ ತೆಂಗಿನಕಾಯಿ) ನೊಂದಿಗೆ ಶಬರಿಮಲೆಗೆ ತಲುಪಿದರು. ಸಂಜೆ 6.30ಕ್ಕೆ ದೇವರಿಗೆ ‘ದೀಪಾರಾಧನೆ’ (ದೀಪ ಸಮರ್ಪಣೆ) ನಡೆಯಲಿದೆ. ‘ತಿರುವಾಭರಣಂ’ ಕೂಡ ದೇವರಿಗೆ ತೊಡಿಸಲಾಗುವುದು. ಈ ಸಮಯದಲ್ಲಿ, ‘ಮಕರ ನಕ್ಷತ್ರ’ ಆಕಾಶದಲ್ಲಿ ಗೋಚರಿಸಲಿದ್ದು ನಂತರ ಮಕರ ಜ್ಯೋತಿ ಪೊನ್ನಂಬಲಮೇಡುವಿನಲ್ಲಿ ಗೋಚರಿಸಲಿದೆ.  ಕೊವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಪರ್ಣಶಾಲೆ ನಿರ್ಮಾಣಕ್ಕೆ ಅವಕಾಶ ಇಲ್ಲದಿದ್ದರೂ ಸನ್ನಿಧಾನಂ, ಪಂಪಾ ಮಾತ್ರವಲ್ಲದೆ ಪೊನ್ನಂಬಲಮೇಡು ಕಾಣಸಿಗುವ ಎಲ್ಲ ಕಡೆಯೂ ಮಕರ ಜ್ಯೋತಿಯನ್ನು ಕಾಣಲು ಅಯ್ಯಪ್ಪ ಭಕ್ತರು ಕಾಯುತ್ತಿದ್ದಾರೆ. ಪುಲ್ಲುಮೇಡುನಲ್ಲಿ ದರ್ಶನಕ್ಕೆ ಅನುಮತಿ ಇಲ್ಲ.

ಮಧ್ಯಾಹ್ನ 2.29ಕ್ಕೆ ಮಕರ ಸಂಕ್ರಮಣ ಮುಹೂರ್ತ. ಕವಡಿಯಾರ್ ಅರಮನೆಯಿಂದ ಮುದ್ರೆಯಲ್ಲಿರುವ ತುಪ್ಪವನ್ನು ಸಂಕ್ರಮಣದ ಸಮಯದಲ್ಲಿ ಅಭಿಷೇಕ ಮಾಡಲಾಗುತ್ತದೆ. ಪಂದಳಂನಿಂದ ತಿರುವಾಭರಣ ಮೆರವಣಿಗೆ ಸಂಜೆ 6.20ರ ನಂತರ ಸನ್ನಿಧಾನಂ ತಲುಪಲಿದೆ. ತಂತ್ರಿ ಮತ್ತು ಮೇಲ್ಶಾಂತಿಯವರು ತಿರುವಾಭರಣಗಳನ್ನು ಸ್ವೀಕರಿಸಿ ಅಯ್ಯಪ್ಪನ ಮೂರ್ತಿಯ ಮೇಲೆ ಇಡುತ್ತಾರೆ. 6.30 ಮತ್ತು 6.45 ರ ನಡುವೆ ದೀಪಾಲಂಕಾರ. ನಂತರ ಪೊನ್ನಂಬಲಮೇಡುನಲ್ಲಿ ಮಕರ ಜ್ಯೋತಿ ಕಾಣಿಸಲಿದೆ.

ಕೊವಿಡ್ ನಿಯಮಾವಳಿ ಪಾಲಿಸಿ ಮಕರಜ್ಯೋತಿಗೆ  ಸಜ್ಜಾಗಿದ್ದೇವೆ: ದೇವಸ್ವಂ ಮಂಡಳಿ

75,000 ಯಾತ್ರಾರ್ಥಿಗಳು ಕೊವಿಡ್ ನಿಯಮಾವಳಿಗಳನ್ನು ಸಂಪೂರ್ಣವಾಗಿ ಅನುಸರಿಸಿ ಮಕರ ಜ್ಯೋತಿಯನ್ನು ನೋಡಲು ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತಗೋಪನ್ ಹೇಳಿದ್ದಾರೆ. ಒಂದೂವರೆ ಲಕ್ಷ ಯಾತ್ರಾರ್ಥಿಗಳನ್ನು ನಿರೀಕ್ಷಿಸಲಾಗಿತ್ತು. ದೇಶದಲ್ಲಿ ಕೊವಿಡ್‌ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಬರುವವರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಎಲ್ಲ ಭಕ್ತರಿಗೂ ಮಕರ ಜ್ಯೋತಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿರುವುದಾಗಿ  ಮಲಯಾಳ ಮನೋರಮಾ ವರದಿ ಮಾಡಿದೆ.

ಸರ್ಕಾರಿ ಇಲಾಖೆಗಳ ಸಮನ್ವಯದ ಮೂಲಕ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ರಾಜ್ಯದಲ್ಲಿ ಕೊವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಮೇಲೆ ಮತ್ತೆ ನಿರ್ಬಂಧ ಹೇರುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳಿಂದ ಸೂಚನೆಗಳಿವೆ ಎಂದು ಹೇಳಿದರು. ನಿನ್ನೆಯವರೆಗೆ 16.88 ಲಕ್ಷ ಯಾತ್ರಾರ್ಥಿಗಳು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಒಟ್ಟು ಆದಾಯ 128. 84 ಕೋಟಿ. 2019ರಲ್ಲಿ 269 ಕೋಟಿ ರೂ. ಕೊವಿಡ್‌ನಿಂದಾಗಿ ಕಳೆದ ವರ್ಷ ಒಟ್ಟು 21.11 ಕೋಟಿ ರೂ. ಅರವಣ ಮಾರಾಟದಿಂದ 51.47 ಕೋಟಿ ರೂ., ಅಪ್ಪಂ ಮಾರಾಟದಿಂದ 5.98 ಕೋಟಿ ರೂ., ಪ್ರದರ್ಶನದಿಂದ 50.64 ಕೋಟಿ ರೂ.ಲಭಿಸಿದೆ.

ಮಕರವಿಳಕ್ಕ್ ಅವಧಿಯಲ್ಲಿ ಬರೋಬ್ಬರಿ 43.90 ಕೋಟಿ ಆದಾಯ ಬಂದಿದೆ. ಖಜಾನೆಯಲ್ಲಿ ಕಾಣಿಕೆ ರೂಪದಲ್ಲಿ ಬಂದ ಬಹುತೇಕ ನೋಟುಗಳನ್ನು ಎಣಿಸಲಾಗಿದೆ. ನಾಣ್ಯಗಳು ಲೆಕ್ಕವಿಲ್ಲದೇ ಬಿದ್ದಿವೆ. ನಾಣ್ಯಗಳು 10 ದಿನಗಳಲ್ಲಿ ಸಂಪೂರ್ಣವಾಗಿ ಎಣಿಕೆಯಾಗುವ ನಿರೀಕ್ಷೆಯಿದೆ. ಹಣ ಎಣಿಕೆ ಮಾಡಲು 321 ನೌಕರರನ್ನು ನಿಯೋಜಿಸಲಾಗಿದೆ. ಒಂದು ವೇಳೆ ಹೈಕೋರ್ಟ್ ಅನುಮತಿ ನೀಡಿದರೆ ಶಬರಿಮಲೆ ವರ್ಚುವಲ್ ಕ್ಯೂ ವ್ಯವಸ್ಥೆಯನ್ನು ದೇವಸ್ವಂ ಮಂಡಳಿ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ. ಯಾತ್ರೆ ಆರಂಭವಾಗುವ ಮುನ್ನವೇ ವರ್ಚುವಲ್‌ಕ್ಯೂ ದೇವಸ್ವಂ ಮಂಡಳಿಗೆ ವಹಿಸಬೇಕು ಎಂಬ ಬೇಡಿಕೆ ಇತ್ತು. ಅವಕಾಶ ನೀಡಿದರೆ ಪೂರ್ಣ ಪ್ರಮಾಣದ ವ್ಯವಸ್ಥೆ ಕಲ್ಪಿಸಲು ಸಿದ್ಧ. ಈ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ.

ಜ್ಯೋತಿ ದರ್ಶನಕ್ಕೆ ವ್ಯವಸ್ಥೆ
ಶಬರಿಮಲೆ ಸನ್ನಿಧಾನಂ ಒಂದರಲ್ಲೇ 13 ಸ್ಥಳಗಳಲ್ಲಿ ಮಕರ ಜ್ಯೋತಿ ದರ್ಶನಕ್ಕೆ ಸೌಲಭ್ಯ ಕಲ್ಪಿಸಲಾಗುವುದು. ಇದಲ್ಲದೇ ಪಂಪಾ, ಅಟ್ಟತ್ತೋಡ್, ನೆಲ್ಲಿಮಲ, ಅಯ್ಯನ್ ಮಲ, ಪಂಜಿಪ್ಪಾರ ಮತ್ತು ಇಲವುಂಗಲ್‌ಗಳಲ್ಲಿ ಜ್ಯೋತಿಯನ್ನು ಕಾಣಬಹುದು. ಪುಲ್ಲುಮೇಡುವಿನಲ್ಲಿ ಈ ಬಾರಿ ಜ್ಯೋತಿ ದರ್ಶನಕ್ಕೆ ಅವಕಾಶವಿಲ್ಲ.

ಇದನ್ನೂ ಓದಿ: Ajay Devgan: ಅಯ್ಯಪ್ಪ ಮಾಲೆಧಾರಿಯಾಗಿ ಶಬರಿಮಲೆ ಯಾತ್ರೆ ಕೈಗೊಂಡ ಅಜಯ್ ದೇವಗನ್

Published On - 1:33 pm, Fri, 14 January 22

Click on your DTH Provider to Add TV9 Kannada