ಸಂಕ್ರಾಂತಿ ಹಬ್ಬದ ದಿನವೇ ದೆಹಲಿಯ ಹೂವಿನ ಮಾರ್ಕೆಟ್​ನಲ್ಲಿ ಬಾಂಬ್ ಪತ್ತೆ; ತಪ್ಪಿದ ಭಾರೀ ಅನಾಹುತ

ಇಂದು ಮಕರ ಸಂಕ್ರಾಂತಿಯಾದ್ದರಿಂದ ದೆಹಲಿ ಮಾರ್ಕೆಟ್​ನಲ್ಲಿ ಸಾಕಷ್ಟು ಜನರು ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಈ ವೇಳೆ ಬಾಂಬ್ ಇರಿಸಲಾಗಿದ್ದ ಬ್ಯಾಗ್ ಪತ್ತೆಯಾಗಿ ಆತಂಕ ಸೃಷ್ಟಿಯಾಯಿತು.

ಸಂಕ್ರಾಂತಿ ಹಬ್ಬದ ದಿನವೇ ದೆಹಲಿಯ ಹೂವಿನ ಮಾರ್ಕೆಟ್​ನಲ್ಲಿ ಬಾಂಬ್ ಪತ್ತೆ; ತಪ್ಪಿದ ಭಾರೀ ಅನಾಹುತ
ದೆಹಲಿ ಮಾರ್ಕೆಟ್​ನಲ್ಲಿ ಪತ್ತೆಯಾದ ಬಾಂಬ್

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಗಾಜಿಪುರದಲ್ಲಿರುವ ಹೂವಿನ ಮಾರ್ಕೆಟ್​ನಲ್ಲಿ ಇಂದು ಅನುಮಾನಾಸ್ಪದವಾದ ಚೀಲವೊಂದು ಪತ್ತೆಯಾಗಿದ್ದು, ಆ ಚೀಲದಲ್ಲಿ ಬಾಂಬ್ ಇರಿಸಲಾಗಿತ್ತು. ಹೂವಿನ ಮಾರುಕಟ್ಟೆಯಲ್ಲಿ ಬಾಂಬ್ ಇರಿಸಲಾಗಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಐಇಡಿ ಇರಿಸಲಾಗಿದ್ದ ಬ್ಯಾಗನ್ನು ವಶಕ್ಕೆ ಪಡೆದಿದ್ದಾರೆ.

ಇಂದು ಮಕರ ಸಂಕ್ರಾಂತಿಯಾದ್ದರಿಂದ ದೆಹಲಿ ಮಾರ್ಕೆಟ್​ನಲ್ಲಿ ಸಾಕಷ್ಟು ಜನರು ಹಬ್ಬದ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಈ ವೇಳೆ ಬಾಂಬ್ ಇರಿಸಲಾಗಿರುವ ಮಾಹಿತಿ ಸಿಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ಜೊತೆಗೆ ಬಾಂಬ್ ನಿಷ್ಕ್ರಿಯ ದಳವನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಬಾಂಬ್ ಸ್ಫೋಟಿಸುವಲ್ಲಿ ಯಶಸ್ವಿಯಾಗಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಆಸ್ತಾನಾ ತಿಳಿಸಿದ್ದಾರೆ.

ದೆಹಲಿ ಪೊಲೀಸ್ ವಿಶೇಷ ದಳವೂ ಸ್ಥಳಕ್ಕೆ ತಲುಪಿದೆ. ಘಾಜಿಪುರ ಮಂಡಿಯಲ್ಲಿ ಪತ್ತೆಯಾದ ಬಾಂಬ್ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ಖಚಿತಪಡಿಸಿದ್ದಾರೆ.

ಗಾಜಿಪುರ ಸಬ್ಜಿ ಮಂಡಿಯಲ್ಲಿ ಪತ್ತೆಯಾದ ಚೀಲವನ್ನು ನೆಲದಲ್ಲಿ ಗುಂಡಿ ತೋಡಿ, 8 ಅಡಿಗಳಷ್ಟು ಆಳದಲ್ಲಿ ಹೂತು ಹಾಕಲಾಯಿತು. ಬಾಂಬ್ ಪತ್ತೆಯಾದ ಪ್ರದೇಶವನ್ನು ಎನ್‌ಎಸ್‌ಜಿ ತಂಡವು ಸಂಪೂರ್ಣವಾಗಿ ಸುತ್ತುವರಿದಿದೆ. ಮೂಲಗಳ ಪ್ರಕಾರ, ಐಇಡಿಯನ್ನು ತೆರೆದ ಮೈದಾನದಲ್ಲಿ ಸ್ಫೋಟಿಸಲಾಗಿದೆ. ಆ ಚೀಲವನ್ನು ಮಾತ್ರ ಹೂತು ಹಾಕಲಾಗಿದೆ. ದೆಹಲಿ ಪೊಲೀಸರಿಂದ ಈ ಕುರಿತು ಅಧಿಕೃತ ಹೇಳಿಕೆಗಾಗಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: Shah Rukh Khan: ಶಾರುಖ್ ನಿವಾಸ ‘ಮನ್ನತ್​’ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದವ ಈಗ ಪೊಲೀಸರ ಅತಿಥಿ

ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣ: ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದವರ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ

Published On - 2:22 pm, Fri, 14 January 22

Click on your DTH Provider to Add TV9 Kannada