ಗಾಜಿಪುರದಲ್ಲಿ ಕಸದ ರಾಶಿ ವಿರುದ್ಧ ಬಿಜೆಪಿ ಪ್ರತಿಭಟನೆ, ನಾನು ಶ್ರವಣ ಕುಮಾರ ಎಂದ ಅರವಿಂದ ಕೇಜ್ರಿವಾಲ್
ನಾನು ದೆಹಲಿಯ ಹಿರಿಯ ನಾಗರಿಕರನ್ನು ಉಚಿತ ತೀರ್ಥಯಾತ್ರೆಗಳಿಗೆ ಕಳುಹಿಸಿದ್ದೇನೆ, ನಾನು ದೆಹಲಿಯ ‘ಶ್ರವಣ ಕುಮಾರ’ ಎಂದ ಅರವಿಂದ ಕೇಜ್ರಿವಾಲ್
ದೆಹಲಿ: ದೆಹಲಿಯ ಬಿಜೆಪಿ (BJP) ಮತ್ತು ಎಎಪಿ (AAP) ಕಾರ್ಯಕರ್ತರು ಇಂದು ಗಾಜಿಪುರದಲ್ಲಿ ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಕಸದ ಸಮಸ್ಯೆ ವಿಚಾರವಾಗಿ ಬಿಜೆಪಿ, ಕೇಜ್ರಿವಾಲ್ ವಿರುದ್ದ ಪ್ರತಿಭಟನೆ ನಡೆಸುತ್ತಿದೆ. ಸಿಎಂ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಗಾಜಿಪುರದಲ್ಲಿ ಕಸ ತುಂಬುವ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಕಸ ವಿಲೇವಾರಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಿಜೆಪಿ ಪ್ರತಿಭಟನೆಗೆ ಪ್ರತಿಯಾಗಿ ಎಪಿ ಕಾರ್ಯಕರ್ತರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿದರು. ದೆಹಲಿಯ ನಗರ ಪಾಲಿಕೆ ಅಥವಾ ಮುನ್ಸಿಪಲ್ ಕಾರ್ಪೊರೇಷನ್ ಆಫ್ ಡೆಲ್ಲಿ (MCD) ಚುನಾವಣೆ ಸಮೀಪಿಸುತ್ತಿದ್ದಂತೆ ಕೇಜ್ರಿವಾಲ್, ದೆಹಲಿಯ ತ್ಯಾಜ್ಯಗಳನ್ನು ಸುರಿಯುವ ಸ್ಥಳವಾದ ಗಾಜಿಪುರಕ್ಕೆ ಭೇಟಿ ನೀಡಿದ್ದಾರೆ. ಏಕೀಕೃತ ಎಂಸಿಡಿ ಚುನಾವಣೆ ಈ ವರ್ಷದ ಅಂತ್ಯದ ವೇಳೆಗೆ ಅಥವಾ 2023 ರ ಆರಂಭದಲ್ಲಿ ನಡೆಯುವ ಸಾಧ್ಯತೆಯಿದೆ.
ಎಲ್ಲಾ ಮೂರು ಎಂಸಿಡಿಗಳನ್ನು ವಿಸರ್ಜಿಸಿ ಒಂದು ಏಕೀಕೃತ ಸಂಸ್ಥೆಯನ್ನು ಮಾಡುವ ಮೊದಲು ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್ (MCD)ನಲ್ಲಿ ಒಂದು ದಶಕದಿಂದ ಹೆಚ್ಚು ಕಾಲ ಅಧಿಕಾರ ಹೊಂದಿದ್ದ ಬಿಜೆಪಿ ವಿರುದ್ಧ ಎಎಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಇತ್ತ, ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಅರವಿಂದ ಕೇಜ್ರಿವಾಲ್ ಅವರನ್ನು ಸುಳ್ಳುಗಾರ ಎಂದು ಕರೆದಿದ್ದಾರೆ.
ಬಿಜೆಪಿ ಪ್ರತಿಭಟನೆ ತಾರ್ಕಿಕವಲ್ಲದ್ದು ಎಂದು ಟೀಕಿಸಿದ ಕೇಜ್ರಿವಾಲ್ ನಾನು ದೆಹಲಿಯ ಹಿರಿಯ ನಾಗರಿಕರನ್ನು ಉಚಿತ ತೀರ್ಥಯಾತ್ರೆಗಳಿಗೆ ಕಳುಹಿಸಿದ್ದೇನೆ, ನಾನು ದೆಹಲಿಯ ‘ಶ್ರವಣ ಕುಮಾರ’ ಎಂದಿದ್ದಾರೆ. ತಂದೆ ತಾಯಿಯನ್ನು ಶ್ರದ್ಧಾ ಭಕ್ತಿಯಿಂದ ತೀರ್ಥಯಾತ್ರೆಗೆ ಕರೆದೊಯ್ದ ರಾಮಾಯಣದ ಶ್ರವಣ ಕುಮಾರನಿಗೆ ಕೇಜ್ರಿವಾಲ್ ತಮ್ಮನ್ನು ಹೋಲಿಸಿಕೊಂಡಿದ್ದಾರೆ.
#WATCH | Delhi BJP workers & AAP workers came face to face & raised slogans against each other in Ghazipur today.
The BJP workers were protesting against the Delhi Govt; AAP workers reached there soon after and raised slogans against them.
Police personnel present at the spot. pic.twitter.com/OrCgYiO8OE
— ANI (@ANI) October 27, 2022
ಬಿಜೆಪಿ ಮತದಾರರು ಒಮ್ಮೆ ಪಕ್ಷ ಬೇಧ ಮರೆತು ಬಿಡಿ. ನಾವು ದೆಹಲಿಯನ್ನು ಸ್ಪಚ್ಛ ಮಾಡುತ್ತೇವೆ. ನಿಮ್ಮನ್ನು ತೀರ್ಥಯಾತ್ರೆಗೆ ಕರೆದೊಯ್ದ ನಿಮ್ಮ ಮಗನಿಗೆ ಮತ ನೀಡಿ ಎಂದು ನಾನು ದೆಹಲಿಯ ಅಮ್ಮಂದಿರಿಗೆ ಮನವಿ ಮಾಡುತ್ತಿದ್ದೇನೆ ಎಂದಿದ್ದಾರೆ ಕೇಜ್ರಿವಾಲ್.
I want to ask HM how much fund given to Delhi? They just abuse people of Delhi. I want to ask the mothers of Delhi, will they tolerate their son being abused? I want to ask senior citizens-like ‘Shravan Kumar’ I sent you on pilgrimages,will you tolerate when I’m abused?: Delhi CM pic.twitter.com/x1IBQM998X
— ANI (@ANI) October 27, 2022
ಗುಜರಾತ್ ಚುನಾವಣೆ ಸಮೀಪಿಸುತ್ತಿದ್ದಂತೆ ಎಎಪಿ ಮತ್ತು ಬಿಜೆಪಿ ನಡುವಿನ ಗುದ್ದಾಟ ಮತ್ತಷ್ಟು ತೀವ್ರವಾಗಿದೆ.ಇದರ ನಡುವೆಯೇ ಕರೆನ್ಸಿ ನೋಟುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳಿರಬೇಕು ಎಂದು ಕೇಜ್ರಿವಾಲ್ ಹೇಳಿದ್ದು, ಬಿಜೆಪಿಯ ಹಿಂದುತ್ವ ಮತಗಳನ್ನು ಕಬಳಿಸುವ ತಂತ್ರ ಎನ್ನಲಾಗಿದೆ.
ಇಂದು ಗಾಜಿಪುರದಲ್ಲಿ ಕೇಜ್ರಿವಾಲ್ ಬರುವುದಕ್ಕೆ ಮುನ್ನ ಬಿಜೆಪಿ ಕಾರ್ಯಕರ್ತರು ಎಎಪಿ ಧ್ವಜಗಳನ್ನು ತುಳಿದರ.ಕೆಲವರು ಅವುಗಳನ್ನು ರಸ್ತೆಯ ಮೇಲೆ ಹಾಕಿ ಕೋಲುಗಳಿಂದ ಹೊಡೆದರು. ಕೇಜ್ರಿವಾಲ್ ಹೋಗುವ ರಸ್ತೆಯನ್ನು ನಿರ್ಬಂಧಿಸಿ. ‘ಕೇಜ್ರಿವಾಲ್, ಹಾಯ್ ಹಾಯ್’ ಎಂದು ಎದೆಗೆ ಬಡಿದುಕೊಳ್ಳುತ್ತಿದ್ದರು. ಇದಕ್ಕೆ ಪ್ರತಿಯಾಗಿ ಎಎಪಿ ಕಾರ್ಯಕರ್ತರು ಎದೆಗೆ ಹೊಡೆದುಕೊಂಡು ಬಿಜೆಪಿ ಮುರ್ದಾಬಾದ್ ಎಂದು ಘೋಷಣೆ ಕೂಗಿದರು.
Published On - 1:32 pm, Thu, 27 October 22