ರಾಜಸ್ಥಾನ: ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭಾ ಚುನಾವಣೆ ಕಣಕ್ಕಿಳಿದ ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ

ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಸಮಾಧಾನ ಮತ್ತು ಅಶೋಕ್ ಗೆಹ್ಲೋಟ್ ವರ್ಸಸ್ ಸಚಿನ್ ಪೈಲಟ್ ಕಲಹ ಯಾವ ಸಮಯದಲ್ಲಾದರೂ ಸ್ಫೋಟಗೊಳ್ಳುವ ಭೀತಿಯನ್ನು ಎದುರಿಸುತ್ತಿರುವ ಬಿಜೆಪಿ ಸುಭಾಷ್ ಅವರನ್ನು ಕಣಕ್ಕಿಳಿಸುವ ಮೂಲಕ ಲೆಕ್ಕಾಚಾರದ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಲಾಗುತ್ತಿದೆ

ರಾಜಸ್ಥಾನ: ಬಿಜೆಪಿ ಬೆಂಬಲದೊಂದಿಗೆ ರಾಜ್ಯಸಭಾ ಚುನಾವಣೆ ಕಣಕ್ಕಿಳಿದ ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ
ಸುಭಾಷ್ ಚಂದ್ರ (ಸಂಗ್ರಹ ಚಿತ್ರ)Image Credit source: Mint
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 31, 2022 | 3:28 PM

ದೆಹಲಿ: ರಾಜಸ್ಥಾನದಲ್ಲಿ (Rajasthan) ರಾಜ್ಯಸಭಾ ಚುನಾವಣೆಗೆ (Rajya Sabha election) ಬಿಜೆಪಿ (BJP) ಬೆಂಬಲಿತ ಪಕ್ಷೇತರ  ಅಭ್ಯರ್ಥಿಯೊಬ್ಬರು ಅಚ್ಚರಿಯ ಎಂಟ್ರಿ ಕೊಟ್ಟಿದ್ದಾರೆ. ಮಾಧ್ಯಮ ಉದ್ಯಮಿ ಸುಭಾಷ್ ಚಂದ್ರ ಅವರನ್ನು ಕೊನೇ ಗಳಿಗೆಯಲ್ಲಿ ನಾಮನಿರ್ದೇಶನ ಮಾಡಲಾಗಿದೆ. ಎಸ್ಸೆಲ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ (Subhash Chandra) ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಸ್ಪರ್ಧಿಸಲಿರುವ ಐದನೇ ಅಭ್ಯರ್ಥಿ ಆಗಿದ್ದಾರೆ. ರಾಜಸ್ಥಾನದಲ್ಲಿ ನಾಲ್ಕು ರಾಜ್ಯಸಭಾ ಸೀಟುಗಳಿದ್ದು ಕಾಂಗ್ರೆಸ್ ಮೂರು ಮತ್ತು ಒಂದು ಸೀಟಿನಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ. ಇದೀಗ ನಾಲ್ಕನೇ ಸ್ಥಾನಕ್ಕೆ ಸುಭಾಷ್ ಚಂದ್ರ ಐದನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಮೂಲಕ ಪೈಪೋಟಿ ಏರ್ಪಟ್ಟಿದೆ. ಉತ್ತರ ಪ್ರದೇಶದ ನಿವಾಸಿಯಾಗಿರುವ ಕಾಂಗ್ರೆಸ್‌ನ ಪ್ರಮೋದ್ ತಿವಾರಿಗೆ ಸುಭಾಷ್ ಚಂದ್ರ ಸ್ಪರ್ಧೆ ನೀಡಲಿದ್ದಾರೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಸಮಾಧಾನ ಮತ್ತು ಅಶೋಕ್ ಗೆಹ್ಲೋಟ್ ವರ್ಸಸ್ ಸಚಿನ್ ಪೈಲಟ್ ಕಲಹ ಯಾವ ಸಮಯದಲ್ಲಾದರೂ ಸ್ಫೋಟಗೊಳ್ಳುವ ಭೀತಿಯನ್ನು ಎದುರಿಸುತ್ತಿರುವ ಬಿಜೆಪಿ ಸುಭಾಷ್ ಅವರನ್ನು ಕಣಕ್ಕಿಳಿಸುವ ಮೂಲಕ ಲೆಕ್ಕಾಚಾರದ ಹೆಜ್ಜೆಯನ್ನಿಟ್ಟಿದೆ ಎಂದು ಹೇಳಲಾಗುತ್ತಿದೆ. ಇತರ ರಾಜ್ಯದವರಿಗೆ ಅವಕಾಶ ನೀಡಿದ್ದಕ್ಕಾಗಿ ರಾಜ್ಯಸಭಾ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಕಾಂಗ್ರೆಸ್ ಆಕ್ರೋಶ ಎದುರಿಸುತ್ತಿದೆ.

ರಣದೀಪ್ ಸುರ್ಜೇವಾಲಾ, ಮುಕುಲ್ ವಾಸ್ನಿಕ್ ಮತ್ತು ಪ್ರಮೋದ್ ತಿವಾರಿ ಕಾಂಗ್ರೆಸ್ ಅಭ್ಯರ್ಥಿಗಳಾಗಿದ್ದಾರೆ. ಅದೇ ವೇಳೆ ಘನಶ್ಯಾಮ ತಿವಾರಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ತಿವಾರಿ ವಸುಂಧರಾ ರಾಜೇ ಸಚಿವ ಸಂಪುಟದಲ್ಲಿ ಸಚಿವರಾಗಿದ್ದವರು.

200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಪ್ರತಿ ಅಭ್ಯರ್ಥಿ ಗೆಲುವಿಗೆ 41 ಮತಗಳ ಅಗತ್ಯವಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, ಬಿಜೆಪಿ 71 ಮತಗಳನ್ನು ಹೊಂದಿದೆ. ಅವರಿಗೆ 30 ಹೆಚ್ಚುವರಿ ಮತಗಳಿವೆ, ಆದರೆ ಎರಡನೇ ಸ್ಥಾನವನ್ನು ಗೆಲ್ಲಲು ಅವರಿಗೆ ಇನ್ನೂ 11 ಬೇಕು. ಮೂರನೇ ಸ್ಥಾನ ಗೆಲ್ಲಲು ಕಾಂಗ್ರೆಸ್‌ಗೆ ಇನ್ನೂ 15 ಮತಗಳ ಅಗತ್ಯವಿದೆ. ಆದ್ದರಿಂದ ಸಣ್ಣ ಪಕ್ಷಗಳು ಮತ್ತು ಸ್ವತಂತ್ರರು ಯಾರು ಸ್ಥಾನವನ್ನು ಗೆಲ್ಲುತ್ತಾರೆ ಎಂಬುದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಇದನ್ನೂ ಓದಿ
Image
Rajya Sabha Election : ರಂಗೇರಿದ ರಾಜ್ಯಸಭಾ ಚುನಾವಣೆ ಜೆಡಿಎಸ್​ನಿಂದ ನಾಮಪತ್ರ ಸಲ್ಲಿಸಲಿರುವ ಕುಪೇಂದ್ರ ರೆಡ್ಡಿ
Image
‘ಯಾರೋ ಒಬ್ಬನು ಇದ್ದಾನೆ, ನಮ್ಮನ್ನೆಲ್ಲ ನಡೆಸುತ್ತಿದ್ದಾನೆ’; ಬದುಕಿನ ಬಗ್ಗೆ ಆತ್ಮಾವಲೋಕನ ಮಾಡಿಕೊಂಡ ಜಗ್ಗೇಶ್​
Image
ರಾಜ್ಯದಲ್ಲಿ ಕಾವೇರಿದ ರಾಜ್ಯಸಭಾ ಚುನಾವಣಾ ಕಣ: ಕಾಂಗ್ರೆಸ್​ಗೆ ಕೌಂಟರ್​ ನೀಡಲು ಬಿಜೆಪಿ ನಾಯಕರ ಪ್ಲ್ಯಾನ್​​, ಜೆಡಿಎಸ್ ಕಥೆ ಏನು?
Image
Breaking ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಸ್ಪರ್ಧೆ

13 ಪಕ್ಷೇತರರು, ಇಬ್ಬರು ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (ಆರ್‌ಎಲ್‌ಪಿ) ಸದಸ್ಯರು, ಇಬ್ಬರು ಭಾರತೀಯ ಬುಡಕಟ್ಟು ಪಕ್ಷದ (ಬಿಟಿಪಿ) ಮತ್ತು ಇಬ್ಬರು ಸಿಪಿಎಂ ಶಾಸಕರು ನಿರ್ಣಾಯಕ ಅಂಶ ಆಗಲಿದ್ದಾರೆ. ಬಿಜೆಪಿ ಪಕ್ಷೇತರರ ಮೇಲೆ ಹಣಾಹಣಿ ನಡೆಸುತ್ತಿದ್ದು, ಕಾಂಗ್ರೆಸ್ ಸಣ್ಣ ಪಕ್ಷಗಳು ಮತ್ತು ಎಡಪಕ್ಷಗಳ ಬೆಂಬಲವನ್ನು ಅವಲಂಬಿಸಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 3:22 pm, Tue, 31 May 22