AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rajya Sabha Election : ರಂಗೇರಿದ ರಾಜ್ಯಸಭಾ ಚುನಾವಣೆ ಜೆಡಿಎಸ್​ನಿಂದ ನಾಮಪತ್ರ ಸಲ್ಲಿಸಲಿರುವ ಕುಪೇಂದ್ರ ರೆಡ್ಡಿ

ರಾಜ್ಯಸಭೆ ಚುನಾವಣ ಕಣ ರೋಚಕತೆಯಿಂದ ಕೂಡಿದ್ದು, ಜೆಡಿಎಸ್​ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂಬಂಧ  ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. 

Rajya Sabha Election : ರಂಗೇರಿದ ರಾಜ್ಯಸಭಾ ಚುನಾವಣೆ ಜೆಡಿಎಸ್​ನಿಂದ ನಾಮಪತ್ರ ಸಲ್ಲಿಸಲಿರುವ ಕುಪೇಂದ್ರ ರೆಡ್ಡಿ
ಜೆಡಿಎಸ್ ಪಕ್ಷದ ಚಿಹ್ನೆ
TV9 Web
| Edited By: |

Updated on: May 31, 2022 | 11:37 AM

Share

ಬೆಂಗಳೂರು: ರಾಜ್ಯಸಭೆ ಚುನಾವಣಾ (Rajya Sabha Election) ಕಣ ರೋಚಕತೆಯಿಂದ ಕೂಡಿದ್ದು, ಜೆಡಿಎಸ್​ (JDS) ನಿಂದ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂಬಂಧ  ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದೆ.  ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim)  ನೇತೃತ್ವದಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಶಾಸಕರಾದ ಸಿ.ಎಸ್.ಪುಟ್ಟರಾಜು, ಟಿ.ಸಿ.ರಾಮಸ್ವಾಮಿ, ಕುಪೇಂದ್ರ ರೆಡ್ಡಿ ಭಾಗಿಯಾಗಿದ್ದಾರೆ. ಶಾಸಕಾಂಗ ಸಭೆಯಲ್ಲಿ ಎಲ್ಲಾರು ಒಟ್ಟಾಗಿ ಮತ ಚಲಾಯಿಸಲು ಸೂಚಿಸಲಾಗಿದೆ. ಜೆಡಿಎಸ್‌ನ ಎಲ್ಲಾ ಶಾಸಕರು ಒಗ್ಗಟ್ಟಿನ ಪತ್ರ ಪಠಿಸಲು ಸೂಚನೆ ನೀಡಲಾಗಿದೆ.

ಸದ್ಯ ಶಾಸಕಾಂಗ ಸಭೆ ಮುಗಿದಿದ್ದು, ಜೆಡಿಎಸ್ ಅಭ್ಯರ್ಥಿ ರಾಜ್ಯಸಭೆಯ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಲು ಹೊರಟಿದ್ದಾರೆ. ಇನ್ನೇನು ಕೆಲವೇ ಹೊತ್ತಿನಲ್ಲಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಲಿದ್ದಾರೆ.  ಕುಪೇಂದ್ರ ರೆಡ್ಡಿ ಜೊತೆಗೆ ಸಚಿವ ಹೆಚ್.ಡಿ.ರೇವಣ್ಣ ಶಾಸಕರಾದ ಸಿ.ಎಸ್.ಪುಟ್ಟರಾಜು, ಟಿ.ಸಿ.ರಾಮಸ್ವಾಮಿ ಮತ್ತು ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ  ಸಾತ್​ ನೀಡಿದ್ದಾರೆ.

ಇದನ್ನು ಓದಿ: ಸಿಧು ಮೂಸೆ ವಾಲಾ ಅಂತ್ಯಸಂಸ್ಕಾರದ ವೇಳೆ ಭಾರಿ ಜನಸಂದಣಿ, ಆಪ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅಭಿಮಾನಿಗಳು

ರಣ ರೋಚಕತೆಯಿಂದ ಕೂಡಿ ರಾಜ್ಯಸಭೆ ಚುನಾವಣೆ | ಟ್ವಿಸ್ಟ್​ಕೊಟ್ಟ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಸಭೆ ಚುನಾವಣಾ ಕಣ ರಣ ರೋಚಕತೆಯಿಂದ ಕೂಡಿದೆ. ಚುನಾವಣೆಗೆ ಕಾಂಗ್ರೆಸ್ ತಿರುವಿನ ಮೇಲೆ ತಿರುವು ನೀಡುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ  ನಡುವೆ ಮುಸಿಕನ ಗುದ್ದಾಡ ನಡಿದಿದೆ. ಎರಡನೇ ಅಭ್ಯರ್ಥಿಯನ್ನು ಘೋಷಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ. ಮೊದಲು ಒಂದೇ ಅಭ್ಯರ್ಥಿ ಸಾಕು ಎಂದು ಕಾಂಗ್ರೆಸ್ ಎಂದುಕೊಂಡಿತ್ತು. ಆದರೆ ಈಗ ಜೆಡಿಎಸ್‌ ಅಭ್ಯರ್ಥಿ ಮಾಜಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿಗೆ ಬೆಂಬಲ ಕೊಡಲು ಡಿಕೆಶಿ ಚಿಂತನೆ ನಡೆಸಿದ್ದರು.

ಇದನ್ನು ಓದಿ: ಶಿಗ್ಗಾಂವಿಯ ಚಿತ್ರಮಂದಿರದಲ್ಲಿ ಕೆಜಿಎಫ್-2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ: ಮತ್ತೆ ಮೂವರನ್ನು ವಶಕ್ಕೆ ಪಡೆದ ಪೊಲೀಸ್​

ಆದರೆ ಇದಕ್ಕೆ ಸಿದ್ದರಾಮಯ್ಯ ನಿರಾಕರಣೆ ಮಾಡಿದ್ದಾರೆ. ಜೆಡಿಎಸ್‌ಗೆ ಬೆಂಬಲ ಕೊಟ್ಟರೆ ತಪ್ಪು ಸಂದೇಶ ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ.  ಹೀಗಾಗಿ ಡಿಕೆಶಿಗೆ ಟಕ್ಕರ್ ಕೊಡಲು ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ.  ಡಿಕೆಶಿ ಅಪ್ತರನ್ನೇ ಅಭ್ಯರ್ಥಿಯನ್ನಾಗಿ ಸಿದ್ದರಾಮಯ್ಯ ಘೋಷಣೆ ಮಾಡಲಿದ್ದಾರೆ. ಡಿಕೆಶಿ ಅಪ್ತರಿಗೆ ಟೆಕಟ್‌ ಕೊಟ್ಟರೆ ಯಾವುದೇ ತಕಾರರು ಬರಲ್ಲ ಎಂದು ಈ ಯೋಜನೆ ರೂಪಿಸಲಾಗಿದೆ, ಈ ಹಿನ್ನೆಲೆಯಲ್ಲಿಮನ್ಸೂರ್‌ ಖಾನ್‌ಗೆ ಟಿಕೆಟ್ ನೀಡಲು ಸಿದ್ದರಾಮಯ್ಯ ಚಿಂತನೆ ನಡೆಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.