‘ದೇಶ ಮೊದಲು’ ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವ ಬಿಜೆಪಿ ದೇಶದ ಅತ್ಯಂತ ನೆಚ್ಚಿನ ಪಕ್ಷ: ಪ್ರಧಾನಿ ಮೋದಿ

BJP Foundation Day 2024: ಬಿಜೆಪಿ ಸ್ಥಾಪನಾ ದಿನದಂದು ಪ್ರಧಾನಿ ನರೇಂದ್ರ ಮೋದಿ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ನಾಯಕರಿಗೆ ಶುಭ ಹಾರೈಸಿದ್ದಾರೆ. ಬಿಜೆಪಿ ‘ದೇಶ ಮೊದಲು' ಎಂಬ ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವ ದೇಶದ ಅತ್ಯಂತ ನೆಚ್ಚಿನ ಪಕ್ಷ ಎಂದು ಅವರು ಬಣ್ಣಿಸಿದ್ದಾರೆ.

‘ದೇಶ ಮೊದಲು' ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವ ಬಿಜೆಪಿ ದೇಶದ ಅತ್ಯಂತ ನೆಚ್ಚಿನ ಪಕ್ಷ: ಪ್ರಧಾನಿ ಮೋದಿ
‘ದೇಶ ಮೊದಲು' ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವ ಬಿಜೆಪಿ ದೇಶದ ಅತ್ಯಂತ ನೆಚ್ಚಿನ ಪಕ್ಷ: ಪ್ರಧಾನಿ ಮೋದಿ
Follow us
Ganapathi Sharma
|

Updated on:Apr 06, 2024 | 12:10 PM

ನವದೆಹಲಿ, ಏಪ್ರಿಲ್ 6: ಬಿಜೆಪಿ ಸಂಸ್ಥಾಪನಾ ದಿನದಂದು (BJP Foundation Day) ಪ್ರಧಾನಿ ನರೇಂದ್ರ ಮೋದಿ (Narendra Modi) ಪಕ್ಷದ ಎಲ್ಲ ಕಾರ್ಯಕರ್ತರಿಗೆ, ನಾಯಕರಿಗೆ ಶುಭ ಹಾರೈಸಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ‘ದೇಶ ಮೊದಲು’ ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವ ಬಿಜೆಪಿ ದೇಶದ ಅತ್ಯಂತ ನೆಚ್ಚಿನ ಪಕ್ಷ ಎಂದು ಉಲ್ಲೇಖಿಸಿದ್ದಾರೆ.

‘ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನದಂದು ದೇಶಾದ್ಯಂತ ನನ್ನ ಪಕ್ಷದ ಶ್ರಮಜೀವಿಗಳಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು. ಹಲವು ವರ್ಷಗಳಿಂದ ಶ್ರಮ, ಹೋರಾಟ ಮತ್ತು ತ್ಯಾಗದಿಂದ ಪಕ್ಷವನ್ನು ಈ ಎತ್ತರಕ್ಕೆ ಕೊಂಡೊಯ್ದ ಬಿಜೆಪಿಯ ಎಲ್ಲಾ ಮಹಾನ್ ವ್ಯಕ್ತಿಗಳಿಗೆ ಇಂದು ಗೌರವ ಸಲ್ಲಿಸುವ ದಿನವಾಗಿದೆ. ‘ದೇಶ ಮೊದಲು’ ಎಂಬ ಮಂತ್ರದೊಂದಿಗೆ ಜನಸೇವೆಯಲ್ಲಿ ತೊಡಗಿರುವ ಬಿಜೆಪಿ ದೇಶದ ಅತ್ಯಂತ ನೆಚ್ಚಿನ ಪಕ್ಷ ಎಂದು ಇಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ’ ಎಂದು ಎಕ್ಸ್​ ಸಂದೇಶದಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

‘ಬಿಜೆಪಿ ಸಂಸ್ಥಾಪನಾ ದಿನದಂದು ಭಾರತದ ಉದ್ದಗಲಕ್ಕೂ ಇರುವ ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ನಾನು ನನ್ನ ಶುಭಾಶಯಗಳನ್ನು ಹೇಳುತ್ತೇನೆ. ಹಲವು ವರ್ಷಗಳ ಪರಿಶ್ರಮದಿಂದ ನಮ್ಮ ಪಕ್ಷವನ್ನು ಕಟ್ಟಿದ ಎಲ್ಲ ಮಹಾನ್ ಮಹಿಳೆಯರು ಮತ್ತು ಪುರುಷರ ಶ್ರಮ, ಹೋರಾಟ ಮತ್ತು ತ್ಯಾಗವನ್ನು ನಾನು ಬಹಳ ಗೌರವದಿಂದ ಸ್ಮರಿಸಿಕೊಳ್ಳುತ್ತೇನೆ’ ಎಂದು ಮೋದಿ ಹೇಳಿದ್ದಾರೆ.

ಇದನ್ನೂ ಓದಿ: 17 ರಾಜ್ಯಗಳಲ್ಲಿ ಸರ್ಕಾರ, 303 ಸಂಸದರು: ಬಿಜೆಪಿಯ 44 ವರ್ಷಗಳ ಪಯಣದ ಸಂಕ್ಷಿಪ್ತ ಹಿನ್ನೋಟ ಇಲ್ಲಿದೆ

ಭಾರತೀಯ ಜನತಾ ಪಕ್ಷ ಪ್ರತಿ ವರ್ಷ ಏಪ್ರಿಲ್ 6 ರಂದು ಸಂಸ್ಥಾಪನಾ ದಿನ ಆಚರಿಸುತ್ತಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ 1980 ರ ಏಪ್ರಿಲ್ 6 ರಂದು ಬಿಜೆಪಿಯನ್ನು ಸ್ಥಾಪಿಸಿದ್ದರು.

ಈ ಬಾರಿ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಸಂಸ್ಥಾಪನಾ ದಿನದಂದು ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಬೂತ್‌ಗಳಲ್ಲಿ ‘ಮತ್ತೊಮ್ಮೆ ಮೋದಿ ಸರ್ಕಾರ’ ಎಂಬ ಘೋಷಣೆಯೊಂದಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:09 pm, Sat, 6 April 24