ಕುಲಗಾಂವ್​ನಲ್ಲಿ ಬಿಜೆಪಿ ಮುಖಂಡನ ಹತ್ಯೆಗೈದ ಉಗ್ರರು; ಒಂದೇ ತಿಂಗಳಲ್ಲಿ ಪಕ್ಷದ ಇಬ್ಬರು ನಾಯಕರ ಕೊಲೆ

ಆಗಸ್ಟ್​ ತಿಂಗಳಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗುತ್ತಿರುವ ಎರಡನೇ ಬಿಜೆಪಿ ಮುಖಂಡ ಇವರಾಗಿದ್ದಾರೆ. ಜಾವೇದ್​ ಅಹ್ಮದ್ ಹತ್ಯೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ.

ಕುಲಗಾಂವ್​ನಲ್ಲಿ ಬಿಜೆಪಿ ಮುಖಂಡನ ಹತ್ಯೆಗೈದ ಉಗ್ರರು; ಒಂದೇ ತಿಂಗಳಲ್ಲಿ ಪಕ್ಷದ ಇಬ್ಬರು ನಾಯಕರ ಕೊಲೆ
ಮೃತ ಬಿಜೆಪಿ ಮುಖಂಡ
Follow us
TV9 Web
| Updated By: Lakshmi Hegde

Updated on:Aug 17, 2021 | 6:06 PM

ಜಮ್ಮು-ಕಾಶ್ಮೀರದ ಕುಲಗಾಂವ್​ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿ (BJP)ಯ ಮುಖಂಡರೊಬ್ಬರನ್ನು ಉಗ್ರರು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಜಾವೇದ್​ ಅಹ್ಮದ್​ ದಾರ್​ ಮೃತ ಬಿಜೆಪಿ ಮುಖಂಡ. ಇವರು ಹೋಮ್​ಶಾಲಿಬಗ್​ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿದ್ದರು. ಇಂದು ಕುಲಗಾಂವ್​ನ ಬ್ರಜ್ಲೂ-ಜಾಗಿರ್​ ಎಂಬಲ್ಲಿ ಉಗ್ರರಿಂದ ಗುಂಡಿನ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಆಗಸ್ಟ್​ ತಿಂಗಳಲ್ಲಿ ಉಗ್ರರ ಗುಂಡೇಟಿಗೆ ಬಲಿಯಾಗುತ್ತಿರುವ ಎರಡನೇ ಬಿಜೆಪಿ ಮುಖಂಡ ಇವರಾಗಿದ್ದಾರೆ. ಜಾವೇದ್​ ಅಹ್ಮದ್​ ದಾರ್ ಹತ್ಯೆಯನ್ನು, ಕಾಶ್ಮೀರದ ಬಿಜೆಪಿಯ ಮಾಧ್ಯಮ ವಿಭಾಗದ ಮುಖ್ಯಸ್ಥರ ಮನ್​ಜೂರ್​ ಅಹ್ಮದ್​ ಸೇರಿ ಹಲವು ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಆಗಸ್ಟ್​ 9ರಂದು ಬಿಜೆಪಿ ನಾಯಕ ಗುಲಾಮ್​ ರಸೂಲ್​ ದಾರ್​ ಮತ್ತು ಅವರ ಪತ್ನಿ ಜವಹಾರಾ ಬಾನೂ ಅವರನ್ನು ಮನೆಯಿಂದ ಎಳೆದುಕೊಂಡು ಬಂದು ಗುಂಡು ಹಾರಿಸಿದ್ದರು. ಈ ದುರ್ಘಟನೆ ಅನಂತ್​ನಾಗ್​ ಜಿಲ್ಲೆಯ ಲಾಲ್​ಚೌಕ್​ ಬಳಿ ನಡೆದಿತ್ತು. 65ವರ್ಷ ಗುಲಾಮ್​ ದಾರ್​, ಕುಲಗಾಂವ್​ ಜಿಲ್ಲೆಯ ಬಿಜೆಪಿ ಕಿಸಾನ್​ ಮೋರ್ಚಾ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: Multibagger 2021: 1.20 ಲಕ್ಷ ರೂಪಾಯಿ ಮೊತ್ತವು 5 ವರ್ಷದಲ್ಲಿ 62 ಲಕ್ಷ ರೂಪಾಯಿ ಆದ ಮಲ್ಟಿಬ್ಯಾಗರ್ ಇದು

‘542 ಸದಸ್ಯರ ಮುಂದೆ ಸಚಿವರ ಪರಿಚಯ ಮಾಡಲು ಕಾಂಗ್ರೆಸ್ ಬಿಡಲಿಲ್ಲ; ದೇಶದ 135 ಕೋಟಿ ಜನರ ಮುಂದೆ ನಾವು ಹೋಗುತ್ತೇವೆ’

Published On - 6:06 pm, Tue, 17 August 21

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ