ಕೃಷ್ಣಾನಗರ: ಮಹುವಾ ಮೊಯಿತ್ರಾಗೆ ಪೈಪೋಟಿ ನೀಡಲು ರಾಜಮಾತೆಯನ್ನು ಕಣಕ್ಕಿಳಿಸಲಿದೆಯೇ ಬಿಜೆಪಿ?

ಬಿಜೆಪಿ ಸೇರಿದ ರಾಣಿ ಮಾ ಅಮೃತಾ ರಾಯ್, 'ನನ್ನ ಜತೆಗೆ ಇರಿ, ಎಲ್ಲರೂ ನನ್ನನ್ನು ಬೆಂಬಲಿಸಿ. ನಾನು ಖಂಡಿತವಾಗಿಯೂ ಮತ್ತೆ ಗೆಲ್ಲುತ್ತೇನೆ ಎಂದಿದ್ದಾರೆ. ಆದರೆ, ಕೃಷ್ಣಾನಗರದ ಯಾವುದೇ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಉನ್ನತ ನಾಯಕತ್ವ ಅಧಿಕೃತವಾಗಿ ಪ್ರಕಟಿಸಿಲ್ಲ. ಕೃಷ್ಣಾನಗರದ ರಾಣಿ ಮಾ, ಸುವೇಂದು  ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

ಕೃಷ್ಣಾನಗರ: ಮಹುವಾ ಮೊಯಿತ್ರಾಗೆ ಪೈಪೋಟಿ ನೀಡಲು ರಾಜಮಾತೆಯನ್ನು ಕಣಕ್ಕಿಳಿಸಲಿದೆಯೇ ಬಿಜೆಪಿ?
ಅಮೃತಾ ರಾಯ್
Follow us
|

Updated on: Mar 21, 2024 | 4:37 PM

ಕೃಷ್ಣಾನಗರ  ಮಾರ್ಚ್ 21:  ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ (BJP) ಮತ್ತೊಂದು ದೊಡ್ಡ ಅಚ್ಚರಿ. ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ಊಹಾಪೋಹಗಳ ನಡುವೆ ಪಶ್ಚಿಮ ಬಂಗಾಳದ ಕೃಷ್ಣಾನಗರದ (Krishnanagar) ರಾಜಮಾತೆ ಅಮೃತಾ ರಾಯ್(Amrita Roy) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೃಷ್ಣಾನಗರದ ರಾಜವಂಶಸ್ಥ ವಧು ಬುಧವಾರ ನಾಡಿಯಾದ ಕೃಷ್ಣಾನಗರದಲ್ಲಿರುವ ಬಿಜೆಪಿಯ ಲೋಕಸಭಾ ಚುನಾವಣಾ ಕಚೇರಿಯಲ್ಲಿ ಸುವೇಂದು ಅಧಿಕಾರಿಯ ಕೈ ಹಿಡಿದು ಬಿಜೆಪಿ ಸೇರಿದರು. ಕಳೆದ ಕೆಲವು ದಿನಗಳಿಂದ ರಾಜಮಾತೆ ಬಿಜೆಪಿ ಸೇರುವ ಬಗ್ಗೆ ಊಹಾಪೋಹಗಳು ಹಬ್ಬಿದ್ದವು. ಕೊನೆಗೂ ಇಂದು ಆ ಊಹೆ ನಿಜವಾಯಿತು. ಹಾಗಾದರೆ, ಮಹುವಾ ವಿರುದ್ಧ ಹೋರಾಡಲು ಬಿಜೆಪಿ ಕೃಷ್ಣಾನಗರದ ರಾಜಮಾತೆಯನ್ನು ಆಯ್ಕೆ ಮಾಡಲಿದೆಯೇ?

ಬಿಜೆಪಿ ಸೇರಿದ ರಾಣಿ ಮಾ ಅಮೃತಾ ರಾಯ್, ‘ನನ್ನ ಜತೆಗೆ ಇರಿ, ಎಲ್ಲರೂ ನನ್ನನ್ನು ಬೆಂಬಲಿಸಿ. ನಾನು ಖಂಡಿತವಾಗಿಯೂ ಮತ್ತೆ ಗೆಲ್ಲುತ್ತೇನೆ ಎಂದಿದ್ದಾರೆ. ಆದರೆ, ಕೃಷ್ಣಾನಗರದ ಯಾವುದೇ ಅಭ್ಯರ್ಥಿಯ ಹೆಸರನ್ನು ಬಿಜೆಪಿ ಉನ್ನತ ನಾಯಕತ್ವ ಅಧಿಕೃತವಾಗಿ ಪ್ರಕಟಿಸಿಲ್ಲ. ಕೃಷ್ಣಾನಗರದ ರಾಣಿ ಮಾ, ಸುವೇಂದು  ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

‘ನಾನು ರಾಜಕಾರಣಿಯಲ್ಲ. ಆದರೆ ನಾನು ನನ್ನ 1000 ಪ್ರತಿಶತದಿಂದ ಪ್ರಯತ್ನಿಸುತ್ತೇನೆ, ಇದರಿಂದ ಸಮಾಜವು ಉತ್ತಮವಾಗಿರುತ್ತದೆ. ವಂಚಿತರಾದವರು ಇನ್ನು ಮುಂದೆ ವಂಚಿತರಾಗದಂತೆ ಚೆನ್ನಾಗಿರಲಿ’ ಎಂದಿದ್ದಾರೆ.

ಇದನ್ನೂ ಓದಿ: ಬಹರಂಪುರದಲ್ಲಿ ಯೂಸಫ್ ಪಠಾಣ್​​ನ್ನು ಕಣಕ್ಕಿಳಿಸಿದ ಟಿಎಂಸಿ; ಬೌನ್ಸರ್ ನಿಭಾಯಿಸಬಲ್ಲರೇ ಕಾಂಗ್ರೆಸ್​​ನ ಅಧೀರ್ ಚೌಧರಿ?

ಕೃಷ್ಣಾನಗರದ ರಾಜಮಾತೆ

ಅಮೃತಾ ರಾಯ್ ಕೃಷ್ಣನಗರದ ರಾಜಮಾತೆ. ರಾಜಾ ಕೃಷ್ಣಚಂದ್ರ 1710 ರಲ್ಲಿ ಜನಿಸಿದರು. ಅವರು 1783 ರವರೆಗೆ ಬದುಕಿದ್ದು 1728 ರಿಂದ 1782 ರವರೆಗಿನ ಅವರ ಜೀವಿತಾವಧಿಯಲ್ಲಿ ನಾಡಿಯಾದ ರಾಜ ಮತ್ತು ಜಮೀನ್ದಾರರಾಗಿದ್ದರು. ಅವರು ನಾಡಿಯಾ ರಾಜ್ ಕುಟುಂಬ ಮತ್ತು ಶಾಕ್ತ ಹಿಂದೂ ಸಂಪ್ರದಾಯಕ್ಕೆ ಸೇರಿದವರು. ಅವರು ಮೊಘಲ್ ಆಳ್ವಿಕೆಯನ್ನು ವಿರೋಧಿಸಲು ಹೆಸರುವಾಸಿಯಾಗಿದ್ದಾರೆ. ತನ್ನ ಸಾಮ್ರಾಜ್ಯದಲ್ಲಿ ಕಲೆಯ ವಿಸ್ತರಣೆ ಮತ್ತು ಪೋಷಣೆ ಮಾಡಿದ್ದಾರೆ. ಅಮೃತಾ ರಾಯ್ ಈ ಕುಟುಂಬದ ಸದಸ್ಯರಾಗಿದ್ದು, ಪ್ರಸ್ತುತ ರಾಜ ಮಾತೆ ಆಗಿದ್ದಾರೆ. ಈ ಲೋಕಸಭಾ ಕ್ಷೇತ್ರದಲ್ಲಿ ಮಹುವಾ ಮೊಯಿತ್ರಾ ಅವರು ಕಳೆದ ಬಾರಿ 63,218 ಮತಗಳಿಂದ ಗೆದ್ದಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ