ಕೊವಿಡ್ 19 ಕೇಂದ್ರಕ್ಕೆ ಹೋಗಿ ಸಿರಿಂಜ್ಗೆ ಔಷಧಿ ತುಂಬಿಸಿದ ಬಿಜೆಪಿ ಶಾಸಕ; 4ನೇ ಕ್ಲಾಸ್ವರೆಗೆ ಮಾತ್ರ ಓದಿದ್ದೀರಿ ಎಂದ ಕಾಂಗ್ರೆಸ್
ಬಿಜೆಪಿ ಶಾಸಕರೊಬ್ಬರು ರೆಮ್ಡಿಸಿವಿರ್ ಇಂಜೆಕ್ಷನ್ ಔಷಧಿಯನ್ನು ಸಿರಿಂಜ್ಗೆ ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್ನಿಂದ ಟೀಕೆಗಳ ಸುರಿಮಳೆಯೇ ಸುರಿದಿದೆ. ಗುಜರಾತ್ನ ಸೂರತ್ನಲ್ಲಿರುವ ಕಾಮ್ರೇಜ್ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಡಿ. ಜಲವಾಡಿಯಾ ಅವರು ಕೊವಿಡ್ 19 ಕೇಂದ್ರವೊಂದರಲ್ಲಿ ಈ ಕೆಲಸ ಮಾಡಿದ್ದಾರೆ. ರೆಮ್ಡಿಸಿವಿರ್ನ ಪುಟ್ಟ ಬಾಟಲಿಯಿಂದ ಔಷಧಿಯನ್ನು ಸಿರಿಂಜ್ಗೆ ತುಂಬಿದ್ದಾರೆ. ಕೊವಿಡ್ 19 ರೋಗಿಗೆ ಅಳವಡಿಸಲಾದ ಡ್ರಿಪ್ ಬಾಟಲಿಗೆ ಇಂಜೆಕ್ಟ್ ಮಾಡುವ ಮೊದಲು ಬಿಜೆಪಿ ಶಾಸಕನೇ ಅದರಲ್ಲಿ ರೆಮ್ಡಿಸಿವಿರ್ ತುಂಬಿಸಿದ್ದಾರೆ. ಈ […]
ಬಿಜೆಪಿ ಶಾಸಕರೊಬ್ಬರು ರೆಮ್ಡಿಸಿವಿರ್ ಇಂಜೆಕ್ಷನ್ ಔಷಧಿಯನ್ನು ಸಿರಿಂಜ್ಗೆ ತುಂಬಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದೆ. ಅದರ ಬೆನ್ನಲ್ಲೇ ಕಾಂಗ್ರೆಸ್ನಿಂದ ಟೀಕೆಗಳ ಸುರಿಮಳೆಯೇ ಸುರಿದಿದೆ. ಗುಜರಾತ್ನ ಸೂರತ್ನಲ್ಲಿರುವ ಕಾಮ್ರೇಜ್ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಡಿ. ಜಲವಾಡಿಯಾ ಅವರು ಕೊವಿಡ್ 19 ಕೇಂದ್ರವೊಂದರಲ್ಲಿ ಈ ಕೆಲಸ ಮಾಡಿದ್ದಾರೆ. ರೆಮ್ಡಿಸಿವಿರ್ನ ಪುಟ್ಟ ಬಾಟಲಿಯಿಂದ ಔಷಧಿಯನ್ನು ಸಿರಿಂಜ್ಗೆ ತುಂಬಿದ್ದಾರೆ. ಕೊವಿಡ್ 19 ರೋಗಿಗೆ ಅಳವಡಿಸಲಾದ ಡ್ರಿಪ್ ಬಾಟಲಿಗೆ ಇಂಜೆಕ್ಟ್ ಮಾಡುವ ಮೊದಲು ಬಿಜೆಪಿ ಶಾಸಕನೇ ಅದರಲ್ಲಿ ರೆಮ್ಡಿಸಿವಿರ್ ತುಂಬಿಸಿದ್ದಾರೆ.
ಈ ವಿಡಿಯೋ ನೋಡಿದ ಕಾಂಗ್ರೆಸ್ ವಕ್ತಾರ ಜಯರಾಜ್ಸಿನ್ಹ್ ಪಾರ್ಮರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕ ವಿ.ಡಿ. ಜಲವಾಡಿಯಾರಿಂದ ಗುಜರಾತ್ನ ಆರೋಗ್ಯ ಸಚಿವ ನಿತಿನ್ ಪಟೇಲ್ ಅವರು ಸ್ಫೂರ್ತಿ ಪಡೆಯಬೇಕು. ಬಿಜೆಪಿ ಕಾರ್ಯಕರ್ತರಿಗೆ ಇಂಜೆಕ್ಷನ್ ನೀಡುವ ತರಬೇತಿ ನೀಡುವ ಕೇಂದ್ರವೊಂದನ್ನು ತೆರೆಯಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನಮ್ಮ ರಾಜ್ಯದಲ್ಲಿ ವೈದ್ಯರು, ನರ್ಸ್ಗಳು, ಆರೋಗ್ಯ ಸಿಬ್ಬಂದಿ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಯ ಅಭಾವ ಇದೆ. ಹಾಗಾಗಿ ಆರೋಗ್ಯ ಸಚಿವರು ಬಿಜೆಪಿ ಕಾರ್ಯಕರ್ತರಿಗೆ ತರಬೇತಿ ನೀಡಲಿ ಎಂದು ಟೀಕೆ ಮಾಡಿರುವ ಅವರು, ಸೂರತ್ ಶಾಸಕ ವಿ.ಡಿ. ಜಲವಾಡಿಯಾ 4ನೇ ತರಗತಿವರೆಗೆ ಓದಿದ್ದಾರೆ. ಅವರೀಗ ಹೋಗಿ ಇಂಜೆಕ್ಷನ್ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೆ ಏರಿದ ಭಾರತ; ಮೊದಲೆರಡು ಸ್ಥಾನ ಯಾವ ದೇಶಗಳಿಗೆ?
PPE Kit: ಕೊರೊನಾ ಯೋಧರಿಗಾಗಿ ಹೊಸ ಮಾದರಿಯ ತಂಪಾದ ಪಿಪಿಇ ಕಿಟ್; ವಿದ್ಯಾರ್ಥಿಯೊಬ್ಬನ ವಿನೂತನ ಸಂಶೋಧನೆ!