ರಾಜ್ಯಸಭೆಯಲ್ಲಿ ಬಿಜೆಪಿಗೆ 100ಕ್ಕೂ ಹೆಚ್ಚು ಸದಸ್ಯರು: ಪಕ್ಷ ಶುರುವಾದಾಗಿನಿಂದ ಮೇಲ್ಮನೆಯಲ್ಲಿ ಮೂರಂಕಿ ದಾಟಿದ್ದು ಇದೇ ಮೊದಲು
ಭಾರತದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರ ಸಂಖ್ಯೆಯು ಸಂಸತ್ತಿನ ಮೇಲ್ಮನೆ ರಾಜಸಭೆಯಲ್ಲಿ ಮೂರಂಕಿ ದಾಟಿದೆ.
ದೆಹಲಿ: ಭಾರತದ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಂಸತ್ತಿನ ಮೇಲ್ಮನೆ ರಾಜಸಭೆಯಲ್ಲಿ ಮೂರಂಕಿ ದಾಟಿದೆ. ದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವು ಈ ಸಾಧನೆ ಮಾಡಿದೆ. 1988-1990ರ ನಂತರ ಇದೇ ಮೊದಲ ಬಾರಿಗೆ ಪಕ್ಷವೊಂದು ರಾಜ್ಯಸಭೆಯಲ್ಲಿ 100 ಸದಸ್ಯ ಬಲ ಹೊಂದಿದೆ. 1990ರ ಚುನಾವಣೆಗಳ ನಂತರ ಕಾಂಗ್ರೆಸ್ ಪಕ್ಷವು ಮೂರಂಕಿಯಿಂದ ಎರಡಂಕಿಗೆ, ಅಂದರೆ 99ಕ್ಕೆ ಕುಸಿದಿತ್ತು. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಎರಡಂಕಿ ತಲುಪಿದ್ದು ಅದೇ ಮೊದಲು.
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಬಿಜೆಪಿ ಇದೀಗ 101 ಸ್ಥಾನ ಪಡೆದಿದೆ. ಪಂಜಾಬ್ ಮೂಲದ ಸದಸ್ಯ ಶ್ವೇತ್ ಮಲಿಕ್ ಅವರ ಅವಧಿ ಏಪ್ರಿಲ್ 9ಕ್ಕೆ ಅಂತ್ಯಗೊಳ್ಳಲಿದೆ. ಅನಂತರ ಬಿಜೆಪಿ ಸದಸ್ಯ ಬಲವು 100ಕ್ಕೆ ಕುಸಿಯಲಿದೆಯಾದರೂ ಮೂರಂಕಿಗೆ ಮೋಸ ಇರುವುದಿಲ್ಲ. ಪ್ರಸ್ತುತ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ರಾಜ್ಯಸಭೆಯಲ್ಲಿ 117 ಸದಸ್ಯ ಬಲ ಹೊಂದಿದೆ. ರಾಜ್ಯಸಭೆಯಲ್ಲಿ ಪ್ರಸ್ತುತ 236 ಸದಸ್ಯರಿದ್ದು, 9 ಸ್ಥಾನಗಳು ಖಾಲಿಯಿವೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷವು 29 ಸದಸ್ಯ ಬಲಕ್ಕೆ ಕುಸಿದಿದೆ. ಇತ್ತೀಚೆಗೆ ಚುನಾವಣೆ ನಡೆದ ರಾಜ್ಯಸಭೆಯ 13 ಸ್ಥಾನಗಳ ಪೈಕಿ ಆಮ್ ಆದ್ಮಿ ಪಕ್ಷವು (ಆಪ್) ಐದು ಸ್ಥಾನಗಳಲ್ಲಿ ಜಯಗಳಿಸಿದರೆ, ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಜಯಗಳಿಸಿತ್ತು. ಕಾಂಗ್ರೆಸ್, ಸಿಪಿಐ, ಸಿಪಿಐ (ಎಂ) ಮತ್ತು ಯುಪಿಪಿಎಲ್ ತಲಾ ಒಂದು ಸ್ಥಾನಗಳಲ್ಲಿ ಜಯಗಳಿಸಿದ್ದವು.
ರಾಜ್ಯಸಭೆಯಲ್ಲಿ ಮೂರಂಕಿ ಸ್ಥಾನ ಗಳಿಸಿರುವ ಬಗ್ಗೆ ಬಿಜೆಪಿ ನಾಯಕರು ಹರ್ಷ ವ್ಯಕ್ತಪಡಿಸಿದ್ದಾದರಾದರೂ, ವಿಜಯೋತ್ಸವಗಳಿಗೆ ಇದು ಕಾಲವಲ್ಲ ಎಂದಿದ್ದಾರೆ. ಏಕೆಂದರೆ ಶೀಘ್ರದಲ್ಲಿಯೇ ಸುಮಾರು 75 ಸ್ಥಾನಗಳು ತೆರವಾಗಲಿವೆ. ಮಾರ್ಚ್ 31ರಂದು 13 ಸ್ಥಾನಗಳಿಗೆ ಚುನಾವಣೆಯ ನಡೆಯಲಿದೆ. ಉಳಿದ 62 ಸ್ಥಾನಗಳಿಗೆ ನಂತರದ ದಿನಗಳಲ್ಲಿ ಚುನಾವಣೆಗಳು ನಡೆಯಲಿವೆ. ಈ ಬಾರಿ ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ರಾಜಸ್ಥಾನ, ಬಿಹಾರ, ಕರ್ನಾಟಕ, ಒಡಿಶಾ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ರಾಜ್ಯಸಭೆ ಸದಸ್ಯರು ಆರಿಸಿ ಬರಬೇಕಿದೆ.
BJP and it’s allies win both the Rajya Sabha seats from Assam. The other two seats from North East, namely Tripura and Nagaland also won by the BJP. This makes it 4/4. Congress draws a neat blank. The BJP now has 100 members in the Rajya Sabha. No party has been there after 1988.
— Amit Malviya (@amitmalviya) March 31, 2022
ತೆರವಾಗಲಿರುವ 62 ಸ್ಥಾನಗಳ ಪೈಕಿ 30ರಲ್ಲಿ ಬಿಜೆಪಿ ಸದಸ್ಯರಿದ್ದಾರೆ. ಆದರೆ ಚುನಾವಣೆ ನಡೆಯಲಿರುವ ರಾಜ್ಯಗಳ ಪೈಕಿ ಕೆಲವೆಡೆ ಬಿಜೆಪಿ ಅಧಿಕಾರದಲ್ಲಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿಯೂ ರಾಜ್ಯಸಭೆಯಲ್ಲಿ ಬಿಜೆಪಿ ಮೂರಂಕಿ ಸದಸ್ಯಬಲ ಉಳಿಸಿಕೊಳ್ಳಬಹುದು ಎಂದು ಹೇಳಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.
Congratulations to our Party!?@BJP4India will be the first party since 1988 to have 100 seats in Rajya Sabha.
NDA wins 2 seats from Assam! All 4 RS MP’s from the North Eastern states are from our Party now! pic.twitter.com/T2DvrNWm2c
— Charu Pragya?? (@CharuPragya) April 1, 2022
ಇದನ್ನೂ ಓದಿ: ಚುನಾವಣೆಯಲ್ಲಿ ಸೋಲಿಸಲು ಆಗುತ್ತಿಲ್ಲ ಹಾಗಾಗಿ ಕೇಜ್ರಿವಾಲ್ನ್ನು ಕೊಲ್ಲಲು ಬಿಜೆಪಿ ಪ್ರಯತ್ನಿಸುತ್ತಿದೆ: ಆಮ್ ಆದ್ಮಿ ಪಕ್ಷ
ಇದನ್ನೂ ಓದಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಯೆದುರು ಬಿಜೆಪಿ ಬೆಂಬಲಿಗರ ಪ್ರತಿಭಟನೆ; ತೇಜಸ್ವಿ ಸೂರ್ಯ ಮುಂದಾಳತ್ವ, ಗೇಟ್ ಧ್ವಂಸ
Published On - 11:51 am, Sat, 2 April 22