UN Women ಗೆ 500,000 ಯುಎಸ್ ಡಾಲರ್ ನೀಡಿದ ಭಾರತ; ಟಿ.ಎಸ್.ತಿರುಮೂರ್ತಿಯವರಿಂದ ಟ್ವೀಟ್
ಯುಎನ್ ವುಮೆನ್ ವಿಭಾಗಕ್ಕೆ ಭಾರತ ತನ್ನ ಕೈಲಾದಷ್ಟು ಕೊಡುಗೆ ನೀಡಿದ್ದಕ್ಕೆ ಸೀಮಾ ಬಹೋಸ್ ಧನ್ಯವಾದ ಸಲ್ಲಿಸಿದ್ದಾರೆ. ಹಾಗೇ,ಯುಎನ್ ವುಮೆನ್ಗೆ ಭಾರತದ ಸಹಕಾರ ಅನಿವಾರ್ಯ ಮತ್ತು ಅತ್ಯವಶ್ಯವಾದದ್ದು ಎಂದೂ ಹೇಳಿದ್ದಾರೆ.
ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಇರುವ ವಿಶ್ವಸಂಸ್ಥೆಯ ಘಟಕ ಯುಎನ್ ವುಮೆನ್ (UN Women) ಗೆ ಭಾರತ 500,000 ಯುಎಸ್ ಡಾಲರ್ (3 ಕೋಟಿ ರೂಪಾಯಿಗೂ ಹೆಚ್ಚು)ಗಳನ್ನು ನೀಡಿದೆ. ವಿಶ್ವ ಸಂಸ್ಥೆಯ (United Nations) ಭಾರತದ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿದ್ದಾರೆ. ಸ್ತ್ರೀ ನೇತೃತ್ವದ ಅಭಿವೃದ್ಧಿ ಮತ್ತು ಲಿಂಗ ಸಮಾನತೆಯಲ್ಲಿ ಭಾರತ ಸದಾ ಸಹಭಾಗಿಯಾಗಿದೆ. ಮಹಿಳಾ ಸಬಲೀಕರಣ ಧ್ಯೇಯ ಹೊಂದಿರುವ UN Women ಘಟಕದೊಟ್ಟಿಗೆ ಸಂಬಂಧವನ್ನು ವೃದ್ಧಿ ಮಾಡಿಕೊಳ್ಳಲು ನಾವು ಇನ್ನೂ ಹೆಚ್ಚಿನ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಹಾಗೇ, ಯುಎನ್ ವುಮೆನ್ಗೆ 500,000 ಯುಎಸ್ ಡಾಲರ್ಗಳಷ್ಟನ್ನು ನೀಡಲು ತುಂಬ ಖುಷಿಯಾಗುತ್ತಿದೆ. ಈ ಹಣವನ್ನು ಯುಎನ್ ವುಮೆನ್ನ ಕಾರ್ಯನಿರ್ವಾಹಕ ನಿರ್ದೇಶಕರಾದ ಸೀಮಾ ಬಹೋಸ್ರಿಗೆ ಹಸ್ತಾಂತರ ಮಾಡಲು ತುಂಬ ಖುಷಿಯಾಗುತ್ತಿದೆ ಎಂದೂ ತಿರುಮೂರ್ತಿ ಹೇಳಿದ್ದಾರೆ.
ಯುಎನ್ ವುಮೆನ್ ವಿಭಾಗಕ್ಕೆ ಭಾರತ ತನ್ನ ಕೈಲಾದಷ್ಟು ಕೊಡುಗೆ ನೀಡಿದ್ದಕ್ಕೆ ಸೀಮಾ ಬಹೋಸ್ ಧನ್ಯವಾದ ಸಲ್ಲಿಸಿದ್ದಾರೆ. ಹಾಗೇ,ಯುಎನ್ ವುಮೆನ್ಗೆ ಭಾರತದ ಸಹಕಾರ ಅನಿವಾರ್ಯ ಮತ್ತು ಅತ್ಯವಶ್ಯವಾದದ್ದು ಎಂದೂ ಹೇಳಿದ್ದಾರೆ. ಟ್ವೀಟ್ ಮಾಡಿರುವ ಸೀಮಾ, ವಿಶ್ವಸಂಸ್ಥೆಯ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಟಿ.ಎಸ್.ತಿರುಮೂರ್ತಿಯವರೊಂದಿಗೆ ಮಹತ್ವಪೂರ್ಣ ಚರ್ಚೆ ನಡೆಸಲಾಯಿತು. ಜಾಗತಿಕವಾಗಿ ಮಹಿಳೆಯರು ಮತ್ತು ಎಲ್ಲ ವರ್ಗದ ಹೆಣ್ಣುಮಕ್ಕಳ ಹಕ್ಕು ರಕ್ಷಣೆಗಾಗಿ ಈ ಯುಎನ್ ವುಮೆನ್ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ಭಾರತದ ಸಹಕಾರ ಎಂದಿಗೂ ಬೇಕು ಎಂದು ಹೇಳಿದ್ದಾರೆ.
Delighted to hand over India’s contribution of USD 500,000 to ED Dr Sima Bahous @unwomenchief to core budget of UN Women
Reaffirmed our valued partnership for women-led development and #gender parity
Look forward to working closely with @UN_Women to further our partnership pic.twitter.com/r4d2i7OTB6
— PR/Amb T S Tirumurti (@ambtstirumurti) April 2, 2022
ಇದನ್ನೂ ಓದಿ: ಕೊಟ್ಟಿಗೆಗೆ ನುಗ್ಗಿ, ಜನರನ್ನ ಹೆದರಿಸಿ 30 ಕುರಿ ಹೊತ್ತೊಯ್ದ ಕಳ್ಳರು; ಕುರಿಗಳನ್ನು ಕಳೆದುಕೊಂಡ ಕುರಿಗಾಹಿ ಕಣ್ಣೀರು