ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಮೊದಲ 67 ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ರಾಜ್ಯದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಲಾಡ್ವಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಬಿಜೆಪಿ ಹಿರಿಯ ನಾಯಕ ಅನಿಲ್ ವಿಜ್ ಅಂಬಾಲಾ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ವರ್ಷದ ಜೂನ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಅವರು ಗೆದ್ದಿರುವ ಕರ್ನಾಲ್ ವಿಧಾನಸಭಾ ಸ್ಥಾನವನ್ನು ಪ್ರಸ್ತುತ ಅವರು ಪ್ರತಿನಿಧಿಸುತ್ತಿರುವ ಕಾರಣ, ಮುಖ್ಯಮಂತ್ರಿ ಸೈನಿ ಅವರ ಕ್ಷೇತ್ರವನ್ನು ಬಿಜೆಪಿ ಬದಲಾಯಿಸಿದೆ. ಹರಿಯಾಣದ ಮಾಜಿ ಗೃಹ ಸಚಿವ ವಿಜ್ ಅವರು ತಮ್ಮ ಕ್ಷೇತ್ರವಾದ ಅಂಬಾಲಾ ಕಂಟೋನ್ಮೆಂಟ್ನಿಂದ ಟಿಕೆಟ್ ಉಳಿಸಿಕೊಂಡಿದ್ದಾರೆ. ಅವರು 2009ರಿಂದ ಸತತ ಮೂರು ಬಾರಿ ಗೆಲುವು ದಾಖಲಿಸಿದ್ದಾರೆ.
ಮುಂಬರುವ ಹರಿಯಾಣ ವಿಧಾನಸಭೆ ಚುನಾವಣೆಗೆ ಬಿಜೆಪಿ 9 ಹಾಲಿ ಶಾಸಕರನ್ನು ಕೈಬಿಟ್ಟಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪ್ರಸ್ತುತ ಕರ್ನಾಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಲಾಡ್ವಾ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. ಬಿಜೆಪಿ ರಾಜ್ಯಸಭಾ ಸಂಸದ ಕಿರಣ್ ಚೌಧರಿ ಅವರ ಪುತ್ರಿ ಶ್ರುತಿ ಚೌಧರಿ ತೋಷಮ್ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ ಪಡೆದಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: PM Modi Singapore Visit: 6 ವರ್ಷಗಳ ನಂತರ ಮೊದಲ ಬಾರಿಗೆ ಸಿಂಗಾಪುರಕ್ಕೆ ಆಗಮಿಸಿದ ಪ್ರಧಾನಿ ಮೋದಿ
ದುಶ್ಯಂತ್ ಚೌಟಾಲಾ ಅವರ ಜನನಾಯಕ್ ಜನತಾ ಪಾರ್ಟಿಯ (ಜೆಜೆಪಿ) ಶಾಸಕರಾದ ದೇವೇಂದ್ರ ಬಾಬ್ಲಿ, ರಾಮ್ ಕುಮಾರ್ ಗೌತಮ್ ಮತ್ತು ಅನುಪ್ ಧನಕ್ ಅವರು ಕ್ರಮವಾಗಿ ತೊಹಾನಾ, ಸಫಿಡಾನ್ ಮತ್ತು ಉಕ್ಲಾನಾ ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ಟಿಕೆಟ್ ಪಡೆದಿದ್ದಾರೆ.
BJP releases first list of 67 candidates for polls to 90-member Haryana Assembly. CM Nayab Saini to contest from Ladwa.#HaryanaElections2024 pic.twitter.com/B6zhUeXQwg
— Press Trust of India (@PTI_News) September 4, 2024
ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪ್ರತಿನಿಧಿಸಲು ಅವಕಾಶ ಪಡೆದ ಇತರ ಕೆಲವು ಪ್ರಮುಖ ವ್ಯಕ್ತಿಗಳೆಂದರೆ, ರಾಟಿಯಾದಿಂದ ಬಿಜೆಪಿಯ ಮಾಜಿ ಸಂಸದೆ ಸುನೀತಾ ದುಗ್ಗಲ್, ಬಿಜೆಪಿಯ ಮಾಜಿ ಲೋಕಸಭಾ ಸಂಸದ ಕುಲದೀಪ್ ಬಿಷ್ಣೋಯ್ ಅವರ ಮಗ ಆದಂಪುರದ ಭವ್ಯ ಬಿಷ್ಣೋಯ್ ಮತ್ತು ಅವರ ಪುತ್ರಿ ಆರತಿ ಸಿಂಗ್.
ಇದನ್ನೂ ಓದಿ: PM Modi in Singapore: ಸಿಂಗಾಪುರದಲ್ಲಿ ಪ್ರಧಾನಿ ಮೋದಿಯವರನ್ನು ನೋಡಲು ಮುಗಿಬಿದ್ದ ಭಾರತೀಯರು
ಅಲ್ಲದೆ, ಇತ್ತೀಚೆಗೆ ಪಕ್ಷದ ಭವಿಷ್ಯದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದ ರಾವ್ ನರ್ಬೀರ್ ಸಿಂಗ್ ಅವರನ್ನು ಪಕ್ಷದ ಹೈಕಮಾಂಡ್ ಸಂಪರ್ಕಿಸದಿದ್ದರೆ ಬಂಡಾಯವೇಳುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿಯಿಂದ ಒಂಬತ್ತು ಹಾಲಿ ಶಾಸಕರನ್ನು ಕೈಬಿಟ್ಟಿದ್ದು, ಇಬ್ಬರು ಶಾಸಕರ ಸ್ಥಾನವನ್ನೂ ಬದಲಾಯಿಸಲಾಗಿದೆ.
ಆಗಸ್ಟ್ 29 ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಿ ಅಂತಿಮಗೊಳಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು.
ಅಕ್ಟೋಬರ್ 5ರಂದು ಹರಿಯಾಣದಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 pm, Wed, 4 September 24