AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರಿಯಾಣದಲ್ಲಿ ನಿರುದ್ಯೋಗ, ಭ್ರಷ್ಟಾಚಾರಕ್ಕೆ ಬಿಜೆಪಿಯೇ ಕಾರಣ; ಪ್ರಿಯಾಂಕಾ ಗಾಂಧಿ ಆರೋಪ

ಹರಿಯಾಣದಲ್ಲಿ ಮೇ 25ರ ಲೋಕಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿ ಕುಮಾರಿ ಸೆಲ್ಜಾಗೆ ಬೆಂಬಲವನ್ನು ಪಡೆಯಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ರೋಡ್‌ಶೋ ನಡೆಸಿದರು. ಸೆಲ್ಜಾ ಮತ್ತು ಹರಿಯಾಣದ ಮಾಜಿ ಸಚಿವ ಕಿರಣ್ ಚೌಧರಿ ಅವರೊಂದಿಗೆ ತೆರೆದ ವಾಹನದಲ್ಲಿ ನಿಂತಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಸುಮಾರು 1 ಗಂಟೆಗಳ ಕಾಲ ನಡೆದ ರೋಡ್‌ಶೋನಲ್ಲಿ ಜನರ ಕಡೆಗೆ ಕೈ ಬೀಸಿದರು. ಹರಿಯಾಣದಲ್ಲಿ ಇದು ಅವರ ಮೊದಲ ಚುನಾವಣಾ ಪ್ರವಾಸವಾಗಿತ್ತು.

ಹರಿಯಾಣದಲ್ಲಿ ನಿರುದ್ಯೋಗ, ಭ್ರಷ್ಟಾಚಾರಕ್ಕೆ ಬಿಜೆಪಿಯೇ ಕಾರಣ; ಪ್ರಿಯಾಂಕಾ ಗಾಂಧಿ ಆರೋಪ
ಪ್ರಿಯಾಂಕಾ ಗಾಂಧಿ
ಸುಷ್ಮಾ ಚಕ್ರೆ
|

Updated on: May 23, 2024 | 7:37 PM

Share

ಸಿರ್ಸಾ: ಹರಿಯಾಣದಲ್ಲಿ ನಿರುದ್ಯೋಗ, ಭ್ರಷ್ಟಾಚಾರ ಮತ್ತು ಹಣದುಬ್ಬರಕ್ಕೆ ಬಿಜೆಪಿ ಸರ್ಕಾರವೇ (Haryana BJP Government) ಕಾರಣ. ಹರಿಯಾಣದಲ್ಲಿ ಕಾಂಗ್ರೆಸ್‌ನ (Congress) ದೊಡ್ಡ ಅಲೆ ಇದೆ. ಇಡೀ ದೇಶದಲ್ಲಿ ಹರಿಯಾಣದಲ್ಲಿ ಅತಿ ಹೆಚ್ಚು ನಿರುದ್ಯೋಗವಿದೆ. ಅದಕ್ಕೆ ಇಲ್ಲಿನ ಯುವಕರು ಬೆಲೆ ತೆರುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕೆ ಚುನಾವಣೆ ದೊಡ್ಡ ಅಸ್ತ್ರವಾಗಲಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Wadra) ಟೀಕಿಸಿದ್ದಾರೆ.

“ಬಿಜೆಪಿಯ ಅತಿರೇಕದ ಹಣದುಬ್ಬರ, ಭ್ರಷ್ಟಾಚಾರ ಮತ್ತು ಅಸ್ಥಿರತೆಯಿಂದ ಜನರು ಬೇಸರಗೊಂಡಿದ್ದಾರೆ. ಇಲ್ಲಿನ ಜನರು ದೊಡ್ಡ ಬದಲಾವಣೆಯನ್ನು ತರಲಿದ್ದಾರೆ” ಎಂದು ಪ್ರಿಯಾಂಕಾ ಗಾಂಧಿ ಹಿಂದಿಯಲ್ಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹರಿಯಾಣ ರಾಜ್ಯದ ಎಲ್ಲಾ ಸ್ಥಾನಗಳನ್ನು ಕಾಂಗ್ರೆಸ್ ಭಾರೀ ಅಂತರದಿಂದ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ವಿರುದ್ಧ ಹಣ ಪಡೆದ ಆರೋಪ ಮಾಡಿದ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಹರಿಯಾಣದಲ್ಲಿ ಮೇ 25ಕ್ಕೆ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕುಮಾರಿ ಸೆಲ್ಜಾಗೆ ಬೆಂಬಲವನ್ನು ಪಡೆಯಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇಂದು ರೋಡ್‌ಶೋ ನಡೆಸಿದರು. ಅವರು ಸುಮಾರು 1 ಗಂಟೆಗಳ ಕಾಲ ನಡೆದ ರೋಡ್‌ಶೋನಲ್ಲಿ ಜನರ ಕಡೆಗೆ ಕೈ ಬೀಸಿದರು. ಹರಿಯಾಣದಲ್ಲಿ ಇದು ಅವರ ಮೊದಲ ಚುನಾವಣಾ ಪ್ರವಾಸವಾಗಿತ್ತು. ಈ ವೇಳೆ ಕಾಂಗ್ರೆಸ್ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ಕಾಂಗ್ರೆಸ್ ಕಾರ್ಯಕರ್ತರು ‘ಕಾಂಗ್ರೆಸ್ ಪಕ್ಷ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದರು ಮತ್ತು ಪ್ರಿಯಾಂಕಾ ಅವರ ಮೇಲೆ ಹೂವಿನ ಎಸಳುಗಳನ್ನು ಸುರಿಸಿದರು.

ಇದನ್ನೂ ಓದಿ: Priyanka Gandhi: ಪ್ರಿಯಾಂಕಾ ಗಾಂಧಿ ಏಕೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ?

ಲೋಕಸಭೆ ಚುನಾವಣೆಯ 6ನೇ ಹಂತದ ಪ್ರಚಾರ ಅಂತ್ಯಗೊಳ್ಳುವ ಮೊದಲು ರೋಡ್‌ಶೋ ನಡೆಯಿತು. ಹರಿಯಾಣದಲ್ಲಿ ಕಾಂಗ್ರೆಸ್‌ನ ಪ್ರಮುಖ ದಲಿತ ನಾಯಕರಾಗಿರುವ ಸೆಲ್ಜಾ ಅವರು ಬಿಜೆಪಿಯ ಅಶೋಕ್ ತನ್ವರ್ ವಿರುದ್ಧ ಕಣಕ್ಕಿಳಿದಿದ್ದಾರೆ. ಸೆಲ್ಜಾ ಅವರಂತೆ ತನ್ವರ್ ಕೂಡ ಹರಿಯಾಣ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅಧ್ಯಕ್ಷರಾಗಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ