ಹಿಂದೂ ಧರ್ಮವನ್ನು ಸಂಪೂರ್ಣ ನಿರ್ಮೂಲನೆ ಮಾಡುವುದೇ ಪ್ರತಿಪಕ್ಷಗಳ ಪ್ರಮುಖ ಅಜೆಂಡಾ: ಬಿಜೆಪಿ
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್(Udhayanidhi Stalin) ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ.ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿಯು, ವಿರೋಧ ಪಕ್ಷದ ಮೈತ್ರಿಯ ಪ್ರಾಥಮಿಕ ಉದ್ದೇಶವೇ ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿದೆ ಎಂದು ಹೇಳಿದೆ. ಉದಯನಿಧಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ.
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್(Udhayanidhi Stalin) ಇತ್ತೀಚೆಗೆ ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ.ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿಯು, ವಿರೋಧ ಪಕ್ಷದ ಮೈತ್ರಿಯ ಪ್ರಾಥಮಿಕ ಉದ್ದೇಶವೇ ಹಿಂದೂ ಧರ್ಮವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದಾಗಿದೆ ಎಂದು ಹೇಳಿದೆ. ಉದಯನಿಧಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ, ಉದಯನಿಧಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ವಿವಾದಾತ್ಮಕ ಹೇಳಿಕೆಯು ಗಮನಾರ್ಹ ಪರಿಣಾಮಗಳನ್ನು ಬೀರಿದೆ ಎಂದು ಹೇಳಿದ್ದಾರೆ. ಈ ಕಾಮೆಂಟ್‌ಗಳು ಪ್ರತಿಪಕ್ಷಗಳ ಒಕ್ಕೂಟದ ನೈಜ ಸ್ವರೂಪವನ್ನು ಅನಾವರಣಗೊಳಿಸಿವೆ ಎಂದು ತ್ರಿವೇದಿ ಹೇಳಿದರು.
ಅಮಿತ್ ಶಾ ಕೂಡ ಹೇಳಿಕೆಯನ್ನು ವಿರೋಧಿಸಿದ್ದು, ಸನಾತನ ಧರ್ಮ ಎಂಬುದು ಜನರ ಮನಸ್ಸು, ಹೃದಯದಲ್ಲಿದೆ ಅದನ್ನು ಯಾರಿಂದಲೂ ನಿರ್ಮೂಲನೆ ಮಾಡಲಾಗದು. ಪ್ರತಿಪಕ್ಷಗಳು ಮತಬ್ಯಾಂಕ್, ರಾಜಕೀಯ ಉದ್ದೇಶಗಳಿಗಾಗಿ ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿವೆ ಎಂದಿದ್ದಾರೆ.
ಇಂಡಿಯಾ ಒಕ್ಕೂಟವನ್ನು ದುರಹಂಕಾರದ ಮೈತ್ರಿ ಎಂದು ಉಲ್ಲೇಖಿಸಿರುವ ಅಮಿತ್ ಶಾ, ಪ್ರತಿಪಕ್ಷಗಳು ಸನಾತನ ಧರ್ಮವನ್ನು ಟೀಕಿಸಿದಷ್ಟೂ ಅವರ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಏನು ಹೇಳಿದ್ದರು? ಸನಾತನ ಧರ್ಮ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ವಿರೋಧಿಸುತ್ತದೆ ಹಾಗಾಗಿ ಅದನ್ನು ಬುಡದಿಂದಲೇ ನಿರ್ಮೂಲನೆ ಮಾಡಬೇಕು, ಸನಾತನ ಧರ್ಮವೆಂಬುದು ಮಲೇರಿಯಾ, ಡೆಂಗ್ಯೂ, ಕೊರೊನಾ ಇದ್ದಂತೆ ಎಂದಿದ್ದಾರೆ.
ಮತ್ತಷ್ಟು ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ
ಎಂಕೆ ಸ್ಟಾಲಿನ್ ಧರ್ಮದ ಬಗ್ಗೆ ಹೇಳಿದ್ದೇನು?
ಧರ್ಮವೆಂಬುದು ತಮ್ಮ ನ್ಯೂನತೆಗಳನ್ನು ಮರೆಮಾಚುವ ಆಯುಧದಂತೆ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್(MK Stalin) ಕಿಡಿಕಾರಿದ್ದಾರೆ. ಸ್ಪೀಕಿಂಗ್ ಫಾರ್ ಇಂಡಿಯಾ ಪಾಡ್ಕಾಸ್ಟ್ನಲ್ಲಿ ಮಾತನಾಡಿರುವ ಅವರು, ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಉರಿಯುತ್ತಿರುವ ಜ್ವಾಲೆಯಲ್ಲಿ ತಾವು ಬೆಚ್ಚಗಿರಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯು ಏಕತೆಯ ಪ್ರಜ್ಞೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಎಂದು ಕಠುವಾಗಿ ನುಡಿದಿದ್ದಾರೆ.
ಮತ್ತಷ್ಟು ಓದಿ:ಧರ್ಮ ಎಂಬುದು ತಮ್ಮ ನ್ಯೂನತೆಗಳನ್ನು ಮರೆಮಾಚುವ ಆಯುಧವಾಗಿದೆ: ಎಂಕೆ ಸ್ಟಾಲಿನ್
ಮಣಿಪುರ ಮತ್ತು ಹರಿಯಾಣದ ವಿಚಾರವನ್ನು ಪ್ರಸ್ತಾಪಿಸಿದ ಸಿಎಂ ಸ್ಟಾಲಿನ್, ಮಣಿಪುರದಲ್ಲಿ ಹೊತ್ತಿಕೊಂಡ ಮತೀಯ ಬೆಂಕಿಯು ರಾಜ್ಯವನ್ನು ಸುಟ್ಟುಹಾಕಿತು ಮತ್ತು ಹರಿಯಾಣದಲ್ಲಿ ಧಾರ್ಮಿಕ ಮತಾಂಧತೆಯ ಬೆಂಕಿ ಅಮಾಯಕರ ಜೀವ ಮತ್ತು ಆಸ್ತಿಯನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. 2024 ರ ಚುನಾವಣೆಯು ಯಾರು ಅಧಿಕಾರಕ್ಕೆ ಬರಬೇಕು ಎಂಬುದಕ್ಕಿಂತ ಯಾರು ಅಧಿಕಾರಕ್ಕೆ ಬರಬಾರದು ಎಂಬುದಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ