ಅವರು ಪ್ರಾಮಾಣಿಕರಾಗಿದ್ದರೆ ಯಾಕೆ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ?: ಸಿಸೋಡಿಯಾ, ಕವಿತಾ, ತೇಜಸ್ವಿ ವಿರುದ್ಧ ಬಿಜೆಪಿ ವಾಗ್ದಾಳಿ
ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ, ನಿತೀಶ್ ಕುಮಾರ್ ಕೂಡ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. "ಈಗ ತನಿಖೆ ನಡೆಯುತ್ತಿದ್ದರೂ ನೀವು ಯಾಕೆ ಮಾತನಾಡುತ್ತಿಲ್ಲ? ಎಲ್ಲವೂ ರಾಜಕೀಯ ಪೈಪೋಟಿ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ನ್ಯಾಯಾಲಯದಿಂದ ನಿಮಗೆ ಏಕೆ ಕಾಲಾವಕಾಶ ಸಿಗುತ್ತಿಲ್ಲ? ಭಾಟಿಯಾ ಕೇಳಿದ್ದಾರೆ.
ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಾದೇಶಿಕ ರಾಜಕೀಯ ಪಕ್ಷಗಳು ಕೇಂದ್ರೀಯ ಸಂಸ್ಥೆಗಳಿಂದ ತನಿಖೆ ಎದುರಿಸುತ್ತಿರುವ ಬಲಿಪಶು ಕಾರ್ಡ್ ( victim card) ಅಥವಾ ಭಾವನಾತ್ಮಕ ಕಾರ್ಡ್ ಅನ್ನು ಆಡುತ್ತಿವೆ ಎಂದು ಬಿಜೆಪಿ (BJP) ಶನಿವಾರ ಹೇಳಿದೆ. “ಅವರು ಆರೋಪಗಳನ್ನು ನಿರಾಕರಿಸುವುದಿಲ್ಲ, ಅವರು ವಿಚಾರಣೆಗೆ ಸಹಾಯ ಮಾಡುತ್ತಿಲ್ಲ” ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ. ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಜೈಲಿನಲ್ಲಿದ್ದು, ಕೆ ಕವಿತಾ ಅವರನ್ನು ಇಡಿ ವಿಚಾರಣೆ ನಡೆಸುತ್ತಿದೆ. ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಬಿಹಾರದ ತೇಜಸ್ವಿ ಯಾದವ್‌ಗೆ ಸಮನ್ಸ್ ನೀಡಲಾಗಿದೆ.
ಮನೀಶ್ ಸಿಸೋಡಿಯಾ ಪ್ರಕರಣದಲ್ಲಿ ಸಿಸೋಡಿಯಾ ಅವರ ಕಸ್ಟೋಡಿಯನ್ ವಿಚಾರಣೆ ಅಗತ್ಯ ಎಂದು ನ್ಯಾಯಾಲಯ ಹೇಳಿದೆ. ಇದು ಇಡಿಗೆ ಪೂರಕವಾಗಿ ಮಾಡಿದ್ದಲ್ಲ. ರಾಜಕೀಯ ಪೈಪೋಟಿಯೂ ಇಲ್ಲ. ಇಷ್ಟು ಪ್ರಾಮಾಣಿಕರಾಗಿದ್ದರೆ ಮನೀಶ್ ಸಿಸೋಡಿಯಾ ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಏಕೆ ಉತ್ತರ ನೀಡುತ್ತಿಲ್ಲ? ಅವರು ಈ ಎಲ್ಲದರಲ್ಲೂ ಭಾಗಿಯಾಗಿಲ್ಲ ಅವರಿಗೆ ಭಾರತ ರತ್ನ ಕೊಡಬೇಕು ಎಂದು ಹೇಳಬೇಕಿತ್ತು. ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ತನಿಖೆಗೆ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದಿದ್ದಾರೆ ಗೌರವ್ ಭಾಟಿಯಾ.
ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ, ನಿತೀಶ್ ಕುಮಾರ್ ಕೂಡ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆ. “ಈಗ ತನಿಖೆ ನಡೆಯುತ್ತಿದ್ದರೂ ನೀವು ಯಾಕೆ ಮಾತನಾಡುತ್ತಿಲ್ಲ? ಎಲ್ಲವೂ ರಾಜಕೀಯ ಪೈಪೋಟಿ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ನ್ಯಾಯಾಲಯದಿಂದ ನಿಮಗೆ ಏಕೆ ಕಾಲಾವಕಾಶ ಸಿಗುತ್ತಿಲ್ಲ? ಭಾಟಿಯಾ ಕೇಳಿದ್ದಾರೆ.
ಯಾವುದೇ ಆರೋಪಿಗಳು ಖುಲಾಸೆಯಾಗಿ ಹೊರಬರುತ್ತಿಲ್ಲ ಮತ್ತು ಈ ಭ್ರಷ್ಟಾಚಾರದಲ್ಲಿ ತಾವು ಭಾಗಿಯಾಗಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. “ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಬುಚ್ಚಿಬಾಬು ಜೊತೆಗಿನ ಸಂಪರ್ಕದ ಬಗ್ಗೆ ಕೇಳಲಾಯಿತು. ಅವರು ಯಾವುದೇ ಉತ್ತರ ನೀಡಲಿಲ್ಲ. ಮದ್ಯದ ಹಗರಣದ ಕಿಂಗ್‌ಪಿನ್ ಅರವಿಂದ್ ಕೇಜ್ರಿವಾಲ್. ಕವಿತಾಜಿ, ಇಂಡೋಸ್ಪಿರಿಟ್ಸ್‌ಗೂ ಬುಚ್ಚಿಬಾಬು ಅವರಿಗೂ ಏನು ಸಂಬಂಧ ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದಿದ್ದಾರೆ ಭಾಟಿಯಾ.
ಇದನ್ನೂ ಓದಿ: ದೆಹಲಿಯಲ್ಲಿ ಕೆಸಿಆರ್ ಪುತ್ರಿ ಕವಿತಾ ವಿಚಾರಣೆ: ಹೈದರಾಬಾದ್ನಲ್ಲಿ ಪೋಸ್ಟರ್ಗಳ ಮೂಲಕ ಬಿಜೆಪಿಗೆ ಕುಟುಕಿದ ಬಿಆರ್‌ಎಸ್
ದೆಹಲಿ ಮದ್ಯ ನೀತಿಗೆ ಸಂಬಂಧಿಸಿದಂತೆ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು. ಮಾರ್ಚ್ 10 ರಂದು, ಪ್ರಕರಣದ ಮನಿ ಲಾಂಡರಿಂಗ್ ಆರೋಪದ ವಿಚಾರಣೆಗಾಗಿ ಇಡಿ ಸಿಸೋಡಿಯಾ ಅವರನ್ನು ಏಳು ದಿನಗಳ ಕಸ್ಟಡಿಗೆ ನೀಡಲಾಯಿತು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ, ತೆಲಂಗಾಣದ ಎಂಎಲ್‌ಸಿ ಕೆ ಕವಿತಾ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿದೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಸಮನ್ಸ್ ಜಾರಿ ಮಾಡಿದೆ.
ವಿರೋಧ ಪಕ್ಷದ ನಾಯಕರ ಮೇಲಿನ ಕ್ರಮ ಇತ್ತೀಚಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.ಇಡಿ ಅದಾನಿ ಬಗ್ಗೆ, ಕರ್ನಾಟಕದ ಬಿಜೆಪಿ ಶಾಸಕರ ನಗದು ದಂಧೆ ಬಗ್ಗೆ ಏಕೆ ಮೌನವಾಗಿದೆ ಎಂದು ಉದ್ಧವ್ ಬಾಳಾಸಾಹೇಬ್ ಠಾಕ್ರೆ ಸೇನಾ ಸಂಸದ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ. “ಕರ್ನಾಟಕದ ಬಿಜೆಪಿ ಶಾಸಕರ ನಗದು ದಂಧೆಯಲ್ಲಿ ಅದಾನಿ ಗ್ರೂಪ್ ಬಗ್ಗೆ ಇಡಿ ಮೌನವಾಗಿದೆ ಆದರೆ ದೆಹಲಿ, ಬಿಹಾರ, ತೆಲಂಗಾಣ, ಪಶ್ಚಿಮ ಬಂಗಾಳ ಅಥವಾ ಮಹಾರಾಷ್ಟ್ರದಲ್ಲಿಯೇ ಇರಲಿ ವಿರೋಧ ಪಕ್ಷದ ವಿಷಯಕ್ಕೆ ಬಂದಾಗ ಹೆಚ್ಚು ಉತ್ಸುಕವಾಗಿದೆ ಇದು ಸ್ವತಂತ್ರ ಸಂಸ್ಥೆಗಳ ಕರಾಳ ಅಧ್ಯಾಯವಾಗಿ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತದೆ. ಬಾಗಲು ಕೇಳಿದಾಗ ಅವರು ತೆವಳಿದರು ಎಂದು ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ.
ಭಾರತವನ್ನು ವಿರೋಧದಿಂದ ಮುಕ್ತಗೊಳಿಸುವುದು ಬಿಜೆಪಿಯ ಏಕೈಕ ಗುರಿಯಾಗಿದೆ ಎಂದು ಎಎಪಿ ಸಂಸದ ರಾಘವ್ ಚಡ್ಡಾ ಹೇಳಿದ್ದಾರೆ. ಭಾರತವು ಒಂದು ಪಕ್ಷ ಮತ್ತು ಒಬ್ಬ ನಾಯಕನನ್ನು ಹೊಂದಬೇಕೆಂದು ಅವರು ಬಯಸುತ್ತಾರೆ. ಅವರು ಪ್ರತಿಯೊಬ್ಬ ರಾಜಕಾರಣಿಯನ್ನು ಜೈಲಿಗೆ ತಳ್ಳಲು ಬಯಸುತ್ತಾರೆ. ಭಾರತವು ನಿರಂಕುಶಾಧಿಕಾರವಾಗಿ ಬದಲಾಗಬೇಕೆಂದು ಅವರು ಬಯಸುತ್ತಾರೆ” ಎಂದಿದ್ದಾರೆ ಚಡ್ಡಾ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Sat, 11 March 23