ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ಕರ್ನಾಲ್‌ನಿಂದ ಖಟ್ಟರ್, ನಾಗ್ಪುರದಿಂದ ಗಡ್ಕರಿಗೆ ಟಿಕೆಟ್

2024 ರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ  ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಇಲ್ಲದೇ ಇದ್ದುದರಿಂದ ಅವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಗಡ್ಕರಿ ಹೆಸರಿದ್ದು, ನಾಗ್ಪುರ ಕ್ಷೇತ್ರದಿಂದಲೇ ಅವರು  ಸ್ಪರ್ಧಿಸಲಿದ್ದಾರೆ. 

ಲೋಕಸಭೆಗೆ ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ: ಕರ್ನಾಲ್‌ನಿಂದ ಖಟ್ಟರ್, ನಾಗ್ಪುರದಿಂದ ಗಡ್ಕರಿಗೆ ಟಿಕೆಟ್
ಖಟ್ಟರ್- ಗಡ್ಕರಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 13, 2024 | 8:38 PM

ದೆಹಲಿ ಮಾರ್ಚ್ 13: ಲೋಕಸಭೆ ಚುನಾವಣೆಗೆ (Lok Sabha Election) ಬಿಜೆಪಿ (BJP) ಬುಧವಾರ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮನೋಹರ್ ಲಾಲ್ ಖಟ್ಟರ್(Manohar Lal Khattar), ನಿತಿನ್ ಗಡ್ಕರಿ, ಅನುರಾಗ್ ಠಾಕೂರ್, ಪಿಯೂಷ್ ಗೋಯಲ್ (ಮುಂಬೈ ಉತ್ತರ) ಮತ್ತು ತೇಜಸ್ವಿ ಸೂರ್ಯ ಮುಂತಾದ ಪ್ರಮುಖ ನಾಯಕರ ಹೆಸರುಗಳಿವೆ. ಮನೋಹರ್ ಲಾಲ್ ಖಟ್ಟರ್ ಅವರು ಕರ್ನಾಲ್‌ನಿಂದ ಸ್ಪರ್ಧಿಸಲಿದ್ದಾರೆ. ಖಟ್ಟರ್ ಅವರು  ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಂಕೇತವಾಗಿ ಹರ್ಯಾಣ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಘೋಷಣೆ ಅಚ್ಚರಿ ಮೂಡಿಸಿಲ್ಲ. 2024 ರ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ  ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಇಲ್ಲದೇ ಇದ್ದುದರಿಂದ ಅವರನ್ನು ಬಿಜೆಪಿ ಮೂಲೆಗುಂಪು ಮಾಡಿದೆ ಎಂಬ ಮಾತುಗಳು ಕೇಳಿಬಂದಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಗಡ್ಕರಿ ಹೆಸರಿದ್ದು, ನಾಗ್ಪುರ ಕ್ಷೇತ್ರದಿಂದಲೇ ಅವರು  ಸ್ಪರ್ಧಿಸಲಿದ್ದಾರೆ.

ಇನ್ನುಳಿದಂತೆ  ಅಶೋಕ್ ತನ್ವಾರ್ (ಸಿರ್ಸಾ), ಮನೋಹರ್ ಲಾಲ್ ಖಟ್ಟರ್ (ಕರ್ನಾಲ್), ಚೌಧರಿ ಧರಂಬೀರ್ ಸಿಂಗ್ (ಭಿವಾನಿ-ಮಹೇಂದ್ರಗಢ), ರಾವ್ ಇಂದರ್‌ಜಿತ್ ಸಿಂಗ್ ಯಾದವ್ (ಗುರ್‌ಗಾಂವ್), ಅನುರಾಗ್ ಸಿಂಗ್ ಠಾಕೂರ್ (ಹಮೀರ್‌ಪುರ), ಬಿವೈ ರಾಘವೇಂದ್ರ (ಶಿವಮೊಗ್ಗ), ಬಸವರಾಜ ಬೊಮ್ಮಾಯಿ (ಹಾವೇರಿ) ಶೋಭಾ ಕರಂದ್ಲಾಜೆ (ಬೆಂಗಳೂರು ಉತ್ತರ), ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ), ಭಾರತಿ ಪ್ರವೀಣ್ ಪವಾರ್ (ದಿಂಡೋರಿ), ಪಂಕಜಾ ಮುಂಡೆ (ಬೀಡ್), ಡಿ ಕೆ ಅರುಣಾ (ಮಹಬೂಬನಗರ), ತ್ರಿವೇಂದ್ರ ಸಿಂಗ್ ರಾವತ್ (ಹರದ್ವಾರ), ಅನಿಲ್ ಬಲುನಿ (ಗರ್ವಾಲ್ ) ನಿತಿನ್ ಗಡ್ಕರಿ (ನಾಗ್ಪುರ), ಪಿಯೂಷ್ ಗೋಯಲ್ (ಮುಂಬೈ ಉತ್ತರ)ದಿಂದ ಸ್ಪರ್ಧಿಸಲಿದ್ದಾರೆ.

ಬಿಹಾರದಲ್ಲಿ ಒಂದು ಸ್ಥಾನಕ್ಕೆ ನಿರ್ದಾರ ಹೊರಬೀಳುವ ಕೊನೇ ಗಳಿಗೆವರೆಗೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ 2, ಗುಜರಾತ್‌ನಲ್ಲಿ 7, ಹರಿಯಾಣದಲ್ಲಿ 6, ಹಿಮಾಚಲ ಪ್ರದೇಶದಲ್ಲಿ 2, ಕರ್ನಾಟಕದಲ್ಲಿ 20, ಮಧ್ಯಪ್ರದೇಶದ 5, ಮಹಾರಾಷ್ಟ್ರದಲ್ಲಿ 20, ತೆಲಂಗಾಣದಲ್ಲಿ 6, 1 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ತ್ರಿಪುರಾ ಮತ್ತು ಉತ್ತರಾಖಂಡದಲ್ಲಿ 2 ಸ್ಥಾನಗಳು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ದೆಹಲಿಯಲ್ಲಿ ಎರಡು ಹೊಸ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಪೂರ್ವ ದೆಹಲಿಯಿಂದ ಹರ್ಷ್ ಮಲ್ಹೋತ್ರಾ ಮತ್ತು ವಾಯುವ್ಯ ದೆಹಲಿಯಿಂದ ಯೋಗೇಂದ್ರ ಚಂದೋಲಿಯಾ ಸ್ಪರ್ಧಿಸಲಿದ್ದಾರೆ.ಬಿಜೆಪಿ ಮುಖ್ಯ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಅನಿಲ್ ಬಲುನಿ ಅವರನ್ನು ಉತ್ತರಾಖಂಡದ ಗರ್ವಾಲ್‌ನಿಂದ ಕಣಕ್ಕಿಳಿಸಲಾಗಿದೆ.

ನಾಗ್ಪುರದಲ್ಲಿ ನಿತಿನ್ ಗಡ್ಕರಿ

ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಸ್ಮೃತಿ ಇರಾನಿ ಹೆಸರಿದ್ದ ಬಿಜೆಪಿಯ ಮೊದಲ ಪಟ್ಟಿಯಲ್ಲಿ ನಿತಿನ್ ಗಡ್ಕರಿ ಹೆಸರಿರಲಿಲ್ಲ. ಬಿಜೆಪಿ ನಿತಿನ್ ಗಡ್ಕರಿ ಅವರನ್ನು ಬಿಜೆಪಿ ಮೂಲೆ ಗುಂಪು ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆ, ಉದ್ಧವ್ ಠಾಕ್ರೆ ನಿತಿನ್ ಗಡ್ಕರಿ ಅವರನ್ನು ಬಿಜೆಪಿ ಅವಮಾನಿಸುತ್ತಿದ್ದರೆ ಬಿಜೆಪಿ ತೊರೆದು ತಮ್ಮ ಪಾಳಯಕ್ಕೆ ಸೇರುವಂತೆ ಕೇಳಿಕೊಂಡಿದ್ದಾರೆ. ಅಂದಹಾಗೆ ಈಆಹ್ವಾನವು ಅಪಕ್ವ ಮತ್ತು ಹಾಸ್ಯಾಸ್ಪದವಾಗಿದೆ ಎಂದು ನಿತಿನ್ ಗಡ್ಕರಿ ಪ್ರತಿಕ್ರಿಯಿಸಿದ್ದರು.

ಎರಡನೇ ಪಟ್ಟಿಯಲ್ಲಿ ಮಹಾರಾಷ್ಟ್ರದ ಹಲವು ಹೆಸರುಗಳಿರುವುದರಿಂದ ಬಿಜೆಪಿ ಹೆಸರುಗಳನ್ನು ಪ್ರಕಟಿಸುವ ಮೊದಲು ಮಹಾರಾಷ್ಟ್ರದಲ್ಲಿ ತನ್ನ ಮಿತ್ರಪಕ್ಷಗಳೊಂದಿಗೆ ಮಾತುಕತೆ ನಡೆಸಿತ್ತು. ರಾಜ್ಯದಲ್ಲಿ ಬಿಜೆಪಿ ಏಕನಾಥ್ ಶಿಂಧೆ ಅವರ ಶಿವಸೇನೆ ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿ ಜೊತೆಗೂಡಿ ಸ್ಪರ್ಧಿಸಲಿದೆ.

ಬೀಡ್​​​ನಿಂದ ಪಂಕಜಾ ಮುಂಡೆ

ಪಂಕಜಾ ಮುಂಡೆ ಅವರ ಸಹೋದರಿ ಪ್ರೀತಮ್ ಮುಂಡೆ ಅವರು ಪ್ರತಿನಿಧಿಸುತ್ತಿದ್ದ ಬೀಡ್​​​ನಿಂದ ಸ್ಪರ್ಧಿಸಲಿದ್ದಾರೆ.

ಇದನ್ನೂ ಓದಿ: ಲೋಕಸಭಾ ಟಿಕೆಟ್ ಕೈತಪ್ಪಿದ್ದಕ್ಕೆ ನಳಿನ್ ಕುಮಾರ್ ಕಟೀಲ್, ಪ್ರತಾಪ್​ ಸಿಂಹ ಹೇಳಿದ್ದೇನು?

ಗೌತಮ್ ಗಂಭೀರ್ ಬದಲು ಯಾರು?

ತಮ್ಮ ಕ್ರಿಕೆಟ್ ಬದ್ಧತೆಗಳಿಗಾಗಿ ರಾಜಕೀಯ ತ್ಯಜಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ ಗೌತಮ್ ಗಂಭೀರ್ ಪ್ರತಿನಿಧಿಸುವ ಸ್ಥಾನವಾದ ಪೂರ್ವ ದೆಹಲಿಯಿಂದ ಹರ್ಷ್ ಮಲ್ಹೋತ್ರಾ ಸ್ಪರ್ಧಿಸಲಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Wed, 13 March 24

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು