ಬಿಟ್ಟು ಹೋದ ಕಾರ್ಯಕರ್ತರನ್ನು ಪಕ್ಷಕ್ಕೆ ಮತ್ತೆ ಕರೆ ತರಲು ಬಿಜೆಪಿ ಮಾಸ್ಟರ್ ಪ್ಲ್ಯಾನ್, ರಾಷ್ಟ್ರಮಟ್ಟದಲ್ಲಿ ಆಂದೋಲನ, ತ್ರಿಪಾಠಿಗೆ ಮಹತ್ವದ ಜವಾಬ್ದಾರಿ

ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಹೊಸ ರಾಜ್ಯ ಅಧ್ಯಕ್ಷರನ್ನು ಯಶಸ್ವಿಯಾಗಿ ನೇಮಕ ಮಾಡಿದ ಬೆನ್ನಲ್ಲೇ, ಭಾರತೀಯ ಜನತಾ ಪಕ್ಷದ (BJP) ಹೈಕಮಾಂಡ್ ಸೋಮವಾರ ಸಾಂಸ್ಥಿಕ ಬಲವರ್ಧನೆಯ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹಾಗೂ ಆಯಕಟ್ಟಿನ ನಿರ್ಧಾರವನ್ನು ಕೈಗೊಂಡಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ನಿತಿನ್ ನವೀನ್ ಅವರು ಸಂಘ ಪರಿವಾರದ ಅತ್ಯಂತ ಹಿರಿಯ ಹಾಗೂ ತಳಮಟ್ಟದ ಧೀಮಂತ ನಾಯಕ ನಾಗೇಂದ್ರ ನಾಥ್ ತ್ರಿಪಾಠಿ ಅವರನ್ನು ಪಕ್ಷದ ನೂತನ ರಾಷ್ಟ್ರೀಯ ಸಂಘಟಕರನ್ನಾಗಿ ನೇಮಕ ಮಾಡಿದ್ದಾರೆ.ಈ ಹೊಸ ಜವಾಬ್ದಾರಿಯೊಂದಿಗೆ ತ್ರಿಪಾಠಿ ಅವರ ಪ್ರಮುಖ ಕಾರ್ಯಕ್ಷೇತ್ರ ಇನ್ಮುಂದೆ ರಾಷ್ಟ್ರ ರಾಜಧಾನಿ ದೆಹಲಿಯಾಗಲಿದ್ದು, ದೇಶಾದ್ಯಂತ ಪಕ್ಷದ ಸಾಂಸ್ಥಿಕ ರಚನೆಯನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ಇವರ ಮೇಲಿರಲಿದೆ.

ಬಿಟ್ಟು ಹೋದ ಕಾರ್ಯಕರ್ತರನ್ನು ಪಕ್ಷಕ್ಕೆ ಮತ್ತೆ ಕರೆ ತರಲು ಬಿಜೆಪಿ ಮಾಸ್ಟರ್ ಪ್ಲ್ಯಾನ್, ರಾಷ್ಟ್ರಮಟ್ಟದಲ್ಲಿ ಆಂದೋಲನ, ತ್ರಿಪಾಠಿಗೆ ಮಹತ್ವದ ಜವಾಬ್ದಾರಿ
ನಾಗೇಂದ್ರ ನಾಥ್ ತ್ರಿಪಾಠಿ
Image Credit source: Newsdrum

Updated on: Jun 02, 2026 | 11:57 AM

ನವದೆಹಲಿ, ಜೂನ್ 02: ಪಕ್ಷವನ್ನು ಮತ್ತಷ್ಟು ಬಲಪಡಿಸುವ ಹಾಗೂ ಚುನಾವಣಾ ಸಿದ್ಧತೆ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ(BJP)ವು ತನ್ನ ತಳಮಟ್ಟದ ಜಾಲವನ್ನು ಮತ್ತಷ್ಟು ಗಟ್ಟಿಗೊಳಿಸಲು ಮಹತ್ವದ ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಪಕ್ಷಕ್ಕಾಗಿ ದಶಕಗಳ ಕಾಲ ದುಡಿದು, ಈಗ ಯಾವುದೇ ಅಧಿಕಾರ ಅಥವಾ ಮುಂಚೂಣಿ ಹುದ್ದೆಗಳಲ್ಲಿ ಇಲ್ಲದ ಪಕ್ಷವನ್ನು ಬಿಟ್ಟು ಹೋದ ಅನುಭವಿ ಕಾರ್ಯಕರ್ತರನ್ನು ಮರಳಿ ಸಕ್ರಿಯಗೊಳಿಸಲು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಂಪರ್ಕ ಆಂದೋಲವನ್ನು ಹಮ್ಮಿಕೊಳ್ಳಲಾಗಿದೆ. ಈ ಬೃಹತ್ ಆಂದೋಲನದ ನೇತೃತ್ವವನ್ನು ವಹಿಸಲು ಆರ್‌ಎಸ್‌ಎಸ್‌ನ ಹಿರಿಯ ಧೀಮಂತ ಸಂಘಟಕ ನಾಗೇಂದ್ರ ನಾಥ್ ತ್ರಿಪಾಠಿ ಅವರನ್ನು ಬಿಜೆಪಿಯ ರಾಷ್ಟ್ರೀಯ ಸಂಘಟಕರನ್ನಾಗಿ ನೇಮಕ ಮಾಡಲಾಗಿದೆ.

ದಶಕಗಳ ಅನುಭವದ ‘ತ್ರಿಪಾಠಿ’ ಬಲ

ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್ ನೇತೃತ್ವದ ಹೊಸ ತಂಡದಲ್ಲಿ ಪಕ್ಷ ಹಾಗೂ ಸಂಘ ಪರಿವಾರದ ನಡುವೆ ಹೆಚ್ಚಿನ ಸಮನ್ವಯ ಸಾಧಿಸಲು ಈ ನೇಮಕ ಶುರುವಾಗಿದೆ. 71 ವರ್ಷದ ನಾಗೇಂದ್ರ ನಾಥ್ ತ್ರಿಪಾಠಿ ಆರ್​ಎಸ್​ಎಸ್​, ಎಬಿವಿಪಿ ಹಾಗೂ ಬಿಜೆಪಿಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ತಳಮಟಗಟದಲ್ಲಿ ಕೆಲಸ ಮಾಡಿದ ಅಪಾರ ಅನುಭವವಿದೆ.

2002 ರಲ್ಲಿ ಉತ್ತರ ಪ್ರದೇಶ ಬಿಜೆಪಿಯ ಸಾಂಸ್ಥಿಕ ರಚನೆಯನ್ನು ಏಕೀಕರಿಸಿದಾಗ, ಇಡೀ ರಾಜ್ಯದ ಏಕೈಕ ಪ್ರಧಾನ ಕಾರ್ಯದರ್ಶಿಯಾಗಿ (ಸಂಘಟನೆ) ತ್ರಿಪಾಠಿ ಕಾರ್ಯನಿರ್ವಹಿಸಿದ್ದರು. ಸುಮಾರು ಒಂದು ದಶಕದ ಕಾಲ ಯುಪಿಯಲ್ಲಿ ಪಕ್ಷದ ಜಾಲವನ್ನು ವಿಸ್ತರಿಸಿದ ಕೀರ್ತಿ ಇವರಿಗಿದೆ.

ಪ್ರಾದೇಶಿಕ ಪರಿಣತಿ: ಇತ್ತೀಚಿನವರೆಗೂ ರಾಂಚಿಯಲ್ಲಿ ಬಿಹಾರ ಮತ್ತು ಜಾರ್ಖಂಡ್‌ನ ಪ್ರಾದೇಶಿಕ ಸಂಘಟನಾ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದ ಇವರು, ಈಗ ತಮ್ಮ ಕಾರ್ಯಕ್ಷೇತ್ರವನ್ನು ದೆಹಲಿಗೆ ಬದಲಾಯಿಸಲಿದ್ದಾರೆ.

ಆಂದೋಲನದ ಮುಖ್ಯ ಉದ್ದೇಶಗಳೇನು?
ಬಿಜೆಪಿ ಮತ್ತು ಆರ್‌ಎಸ್‌ಎಸ್ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಈ ಆಂದೋಲನದ ಪ್ರಮುಖ ಗುರಿಯಾಗಿದೆ. ಕುಂದುಕೊರತೆಗಳ ನಿವಾರಣೆ: ತ್ರಿಪಾಠಿ ನೇತೃತ್ವದ ಹಿರಿಯ ನಾಯಕರ ತಂಡವು ದೇಶಾದ್ಯಂತ ವ್ಯಾಪಕ ಪ್ರವಾಸ ಕೈಗೊಳ್ಳಲಿದೆ. ಸಕ್ರಿಯ ರಾಜಕಾರಣದಿಂದ ಕೊಂಚ ದೂರ ಉಳಿದಿರುವ ಹಿರಿಯ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಿ, ಅವರ ಕೊಡುಗೆಗಳನ್ನು ಗೌರವಿಸಿ, ಅವರ ಕುಂದುಕೊರತೆಗಳನ್ನು ಆಲಿಸಲಿದೆ.

ಮತ್ತಷ್ಟು ಓದಿ: ತಾವು ಹೊಸ ಪಕ್ಷ ಕಟ್ಟುವ ವದಂತಿ ಬಗ್ಗೆ ಅಣ್ಣಾಮಲೈ ಹೇಳಿದ್ದೇನು?

ತಳಮಟ್ಟದ ಶಕ್ತಿ ಪುನಶ್ಚೇತನ: ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಿದ್ಧಾಂತಕ್ಕಾಗಿ ಇಡೀ ಜೀವನ ಮುಡಿಪಾಗಿಟ್ಟ ನಿಷ್ಠಾವಂತ ಕಾರ್ಯಕರ್ತರು ತಮಗೆ ಸೂಕ್ತ ಮನ್ನಣೆ ಸಿಗುತ್ತಿದೆ ಎಂದು ಭಾವಿಸುವಂತೆ ಮಾಡುವುದು ಈ ಆಂದೋಲನದ ಪ್ರಮುಖ ಆಶಯವಾಗಿದೆ.

ವರ್ಷಗಳ ಕಾಲ ಪಕ್ಷದ ಬೆನ್ನೆಲುಬಾಗಿದ್ದ ಶಕ್ತಿಯನ್ನು ಮರುಸಂಘಟಿಸುವ ಬಿಜೆಪಿಯ ಈ ತಂತ್ರವು ದೇಶಾದ್ಯಂತ ಇರುವ ಲಕ್ಷಾಂತರ ಹಿರಿಯ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಲಿದ್ದು, ಪಕ್ಷದ ಸಾಂಸ್ಥಿಕ ಬಲವನ್ನು ಮತ್ತೊಂದು ಉನ್ನತ ಮಟ್ಟಕ್ಕೆ ಕೊಂಡೊಯ್ಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us