ದೆಹಲಿ: ಬಿಜೆಪಿಯಿಂದ (BJP) ಅಮಾನತುಗೊಂಡಿರುವ ಇಬ್ಬರು ವಕ್ತಾರರು ಇಸ್ಲಾಂ ಮತ್ತು ಪ್ರವಾದಿ (prophet muhammad) ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ನಂತರ ಭಾರತವು ಗಲ್ಫ್ ದೇಶಗಳಿಂದ ರಾಜತಾಂತ್ರಿಕ ಆಕ್ರೋಶವನ್ನು ಎದುರಿಸುತ್ತಿರುವ ನಡುವೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸೋಮವಾರ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಡಳಿತಾರೂಢ ಪಕ್ಷದ ಮತಾಂಧತೆಯು ಭಾರತವನ್ನು ಪ್ರತ್ಯೇಕವಾಗುವಂತೆ ಮಾಡಿದ್ದಂತೆ ಜಾಗತಿಕವಾಗಿ ಭಾರತದ ಸ್ಥಾನಮಾನಕ್ಕೆ ಧಕ್ಕೆ ತಂದಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ರಾಹುಲ್, ಆಂತರಿಕವಾಗಿ ವಿಭಜನೆಗೊಂಡರೆ, ಭಾರತವು ಬಾಹ್ಯವಾಗಿ ದುರ್ಬಲವಾಗುತ್ತದೆ. ಬಿಜೆಪಿಯ ನಾಚಿಕೆಗೇಡಿನ ಮತಾಂಧತೆಯು ನಮ್ಮನ್ನು ಪ್ರತ್ಯೇಕಿಸಿರುವುದು ಮಾತ್ರವಲ್ಲ, ಜಾಗತಿಕವಾಗಿ ಭಾರತದ ಸ್ಥಾನಮಾನವನ್ನು ಹಾಳು ಮಾಡಿದೆ ಎಂದಿದ್ದಾರೆ. ಕತಾರ್, ಕುವೈತ್ ಮತ್ತು ಇರಾನ್ ತಮ್ಮ ದೇಶಗಳಿಗೆ ಭಾರತದ ರಾಯಭಾರಿಗಳನ್ನು ಕರೆಸಿದ್ದು, ಹಲವಾರು ರಾಷ್ಟ್ರಗಳ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತೀಯ ಉತ್ಪನ್ನಗಳ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಭಾನುವಾರ, ಬಿಜೆಪಿ ತನ್ನ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ (Nupur Sharma )ಮತ್ತು ದೆಹಲಿಯ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ (Naveen Kumar Jindal) ಅವರನ್ನು ಅಮಾನತುಗೊಳಿಸಿದೆ. ಅದೇ ವೇಳೆ ಪಕ್ಷವು “ಎಲ್ಲಾ ಧರ್ಮಗಳನ್ನು ಗೌರವಿಸುತ್ತದೆ” ಮತ್ತು “ಯಾವುದೇ ಧರ್ಮದ ಅವಮಾನಗಳನ್ನು ಬಲವಾಗಿ ಖಂಡಿಸುತ್ತದೆ” ಎಂದು ಹೇಳಿಕೆಯನ್ನೂ ನೀಡಿದೆ.
Divided internally, India becomes weak externally.
BJP’s shameful bigotry has not only isolated us, but also damaged India’s standing globally.
— Rahul Gandhi (@RahulGandhi) June 6, 2022
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಹಣಕಾಸು ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಇದು ದೇಶದೊಳಗಿನ ಟೀಕೆಯಲ್ಲ, ಅಂತಾರಾಷ್ಟ್ರೀಯ ಹಿನ್ನಡೆಯೇ ಬಿಜೆಪಿಯನ್ನು ಇಬ್ಬರು ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಡಿದೆ ಎಂದಿದ್ದಾರೆ .
श्रीमती नूपुर शर्मा और श्री नवीन कुमार इस्लामोफोबिया के मूल निर्माता नहीं थे।
याद रखिए, वे राजा से ज्यादा वफादार होने की कोशिश कर रहे थे।
— P. Chidambaram (@PChidambaram_IN) June 6, 2022
ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಇಸ್ಲಾಮೋಫೋಬಿಯಾದ ಮೂಲ ಸೃಷ್ಟಿಕರ್ತರಲ್ಲ. ನೆನಪಿರಲಿ, ಅವರು ರಾಜನಿಗಿಂತ ಹೆಚ್ಚು ನಿಷ್ಠರಾಗಿರಲು ಪ್ರಯತ್ನಿಸುತ್ತಿದ್ದರು ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 6:45 pm, Mon, 6 June 22