2006 Varanasi Bomb Blast Case: ಪ್ರಮುಖ ಅಪರಾಧಿ ವಾಲಿವುಲ್ಲಾಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ
2006ರ ವಾರಾಣಸಿಯಲ್ಲಿ ಅವಳಿ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ವಾಲಿವುಲ್ಲಾಗೆ ಉತ್ತರ ಪ್ರದೇಶದ ಗಾಜಿಯಾಬಾದ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ.
ನವದೆಹಲಿ: 2006ರ ವಾರಾಣಸಿಯಲ್ಲಿ (Varanasi) ಸರಣಿ ಸ್ಫೋಟ (varanasi serial blasts) ಪ್ರಕರಣದ ಪ್ರಮುಖ ಅಪರಾಧಿ ವಾಲಿವುಲ್ಲಾಗೆ (Terrorist Waliullah) ಉತ್ತರ ಪ್ರದೇಶದ ಗಾಜಿಯಾಬಾದ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ವಾಲಿವುಲ್ಲಾ 2006ರಲ್ಲಿ ವಾರಣಾಸಿಯ ದೇವಸ್ಥಾನ, ರೈಲ್ವೆ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ್ದನು.
Uttar Pradesh | 2006 Varanasi serial blasts convicted terrorist Waliullah Khan sentenced to death penalty & life imprisonment.
— ANI UP/Uttarakhand (@ANINewsUP) June 6, 2022
2006 ವಾರಣಾಸಿಯಲ್ಲಿ ಸರಣಿ ಸ್ಪೋಟ ಸಂಭವಿಸಿದ್ದು ಹೇಗೆ?
ಮಾರ್ಚ್ 7, 2006 ರಂದು ಪವಿತ್ರ ನಗರವಾದ ವಾರಣಾಸಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದ 16 ವರ್ಷಗಳ ನಂತರ, ಭಯೋತ್ಪಾದಕ ವಲಿಯುಲ್ಲಾ ಖಾನ್ಗೆ ಗಲ್ಲು ಶಿಕ್ಷೆಯಾಗಿದೆ.
- ಮಾರ್ಚ್ 7, 2006 ರಂದು, ಮೊದಲ ಸ್ಫೋಟವು ಲಂಕಾ ಪೊಲೀಸ್ ಠಾಣೆಯ ಸಂಕಟ್ ಮೋಚನ್ ದೇವಾಲಯದ ಒಳಗೆ ಸಂಜೆ 6.15 ಕ್ಕೆ ಸಂಭವಿಸಿತು. ಸ್ಪೋಟಕದಲ್ಲಿ 7 ಜನರು ಸಾವನ್ನಪ್ಪಿದ್ದರು.
- 15 ನಿಮಿಷಗಳ ನಂತರ, ವಾರಣಾಸಿ ಕಂಟೋನ್ಮೆಂಟ್ ರೈಲು ನಿಲ್ದಾಣದಲ್ಲಿ ಪ್ರಥಮ ದರ್ಜೆ ನಿವೃತ್ತಿ ಕೊಠಡಿಯ ಹೊರಗೆ ಬಾಂಬ್ ಸ್ಫೋಟಿಸಿತು. ಈ ಘಟನೆಯಲ್ಲಿ 18 ಜನರು ಸಾವನ್ನಪ್ಪಿದ್ದರು. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
- ಅದೇ ದಿನ, ದಶಾಶ್ವಮೇಧ್ ಪೊಲೀಸ್ ಠಾಣೆಯ ರೈಲ್ವೆ ಕ್ರಾಸಿಂಗ್‌ನ ಬೇಲಿಗಳ ಬಳಿ ಕುಕ್ಕರ್ ಬಾಂಬ್ ಕೂಡ ಪತ್ತೆಯಾಗಿದೆ.
Published On - 4:59 pm, Mon, 6 June 22