ಪ್ರವಾದಿ ಬಗ್ಗೆ ಹೇಳಿಕೆ ವಿವಾದ: ಒಐಸಿ ಟೀಕೆ ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು ಎಂದ ಭಾರತ
Prophet Muhammad ದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತವು ಒಐಸಿ ಸೆಕ್ರೆಟರಿಯೇಟ್‌ನ ಅನಗತ್ಯ ಮತ್ತು ಸಂಕುಚಿತ ಮನೋಭಾವದ ಕಾಮೆಂಟ್‌ಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಭಾರತ ಸರ್ಕಾರವು ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ.
ದೆಹಲಿ: ಬಿಜೆಪಿಯಿಂದ (BJP) ಅಮಾನತುಗೊಂಡಿರುವ ವಕ್ತಾರರು ಮಾಡಿದ ಪ್ರವಾದಿ ಮುಹಮ್ಮದ್ (Prophet Muhammad) ಕುರಿತ ಆಕ್ಷೇಪಾರ್ಹ ಹೇಳಿಕೆ ವಿವಾದ ಬಗ್ಗೆ ಮುಸ್ಲಿಂ ರಾಷ್ಟ್ರಗಳ ಗುಂಪುಗಳ ಟೀಕೆ ಅನಗತ್ಯ ಮತ್ತು ಸಂಕುಚಿತ ಮನಸ್ಸಿನದ್ದು ಎಂದು ಭಾರತ ಹೇಳಿದೆ. ವಜಾಗೊಂಡಿರುವ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ (Nupur Sharma) ಮತ್ತು ನವೀನ್ ಜಿಂದಾಲ್ (Naveen Jindal)ಪ್ರವಾದಿ ಮುಹಮ್ಮದ್ ಬಗ್ಗೆ ಮಾಡಿದ ಹೇಳಿಕೆಯನ್ನು ಸೌದಿ ನಗರದ ಜೆಡ್ಡಾದಲ್ಲಿ ನೆಲೆಗೊಂಡಿರುವ ಇಸ್ಲಾಮಿಕ್ ಸಹಕಾರ ಸಂಘಟನೆ (OIC) ಖಂಡಿಸಿದೆ. ಭಾರತದಲ್ಲಿ ಇಸ್ಲಾಂ ಧರ್ಮದ ವಿರುದ್ಧ ದ್ವೇಷ ಮತ್ತು ನಿಂದನೆಯನ್ನು ತೀವ್ರಗೊಳಿಸುವ ಮತ್ತು ಮುಸ್ಲಿಮರ ವಿರುದ್ಧ ವ್ಯವಸ್ಥಿತ ಕಾರ್ಯತಂತ್ರಗಳ ನಡುವೆ ಈ ಹೇಳಿಕೆ ಬಂದಿದೆ ಎಂದು ಒಐಸಿ ಖಂಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಭಾರತವು ಒಐಸಿ ಸೆಕ್ರೆಟರಿಯೇಟ್‌ನ ಅನಗತ್ಯ ಮತ್ತು ಸಂಕುಚಿತ ಮನೋಭಾವದ ಕಾಮೆಂಟ್‌ಗಳನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತದೆ. ಭಾರತ ಸರ್ಕಾರವು ಎಲ್ಲಾ ಧರ್ಮಗಳಿಗೆ ಅತ್ಯುನ್ನತ ಗೌರವವನ್ನು ನೀಡುತ್ತದೆ” ಎಂದು ಹೇಳಿದರು. ಒಐಸಿ ಎಂಬುದು ಬಹುಪಾಲು ಮುಸ್ಲಿಂ ಪ್ರಾಬಲ್ಯದ ರಾಷ್ಟ್ರಗಳ ಅಂತರಸರ್ಕಾರಿ ಸಂಸ್ಥೆಯಾಗಿದ್ದು, ಅದರ ಸದಸ್ಯ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಇದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತಹ ದೇಶದ ಆಂತರಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಭಾರತವು ಒಐಸಿಯನ್ನು ಆಗಾಗ್ಗೆ ಖಂಡಿಸುತ್ತದೆ. ಅದೇ ವೇಳೆ ಒಐಸಿ ತನ್ನನ್ನು “ಮುಸ್ಲಿಂ ಪ್ರಪಂಚದ ಸಾಮೂಹಿಕ ಧ್ವನಿ” ಎಂದು ಹೇಳಿಕೊಳ್ಳುತ್ತಿದೆ.
“ಧಾರ್ಮಿಕ ವ್ಯಕ್ತಿತ್ವವನ್ನು ಅವಹೇಳನ ಮಾಡುವ ಆಕ್ಷೇಪಾರ್ಹ ಟ್ವೀಟ್‌ಗಳು ಮತ್ತು ಕಾಮೆಂಟ್‌ಗಳನ್ನು ಯಾರೋ ವ್ಯಕ್ತಿಗಳು ಮಾಡಿದ್ದಾರೆ. ಅವು ಯಾವುದೇ ರೀತಿಯಲ್ಲಿ ಭಾರತ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಸಂಬಂಧಿತ ಸಂಸ್ಥೆಗಳಿಂದ ಈ ವ್ಯಕ್ತಿಗಳ ವಿರುದ್ಧ ಈಗಾಗಲೇ ಬಲವಾದ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಬಾಗ್ಚಿ ಸೋಮವಾರ ಹೇಳಿದ್ದಾರೆ.
Our response to media queries regarding recent statement by General Secretariat of the OIC:https://t.co/961dqr76qf pic.twitter.com/qrbKgtoWnC
— Arindam Bagchi (@MEAIndia) June 6, 2022
ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಶರ್ಮಾ ಮತ್ತು ಜಿಂದಾಲ್ ಅವರನ್ನು ಪಕ್ಷ ಅಮಾನತು ಮಾಡಿದೆ. ಈ ಬಗ್ಗೆ ನಿನ್ನ ಹೇಳಿಕೆ ನೀಡಿದ್ದ ಸರ್ಕಾರ ಈ ಹೇಳಿಕೆಗಳು ಕ್ಷುಲ್ಲಕ ವ್ಯಕ್ತಿಗಳ ಹೇಳಿಕೆಯೇ ಹೊರತು ಸರ್ಕಾರದ್ದು ಅಲ್ಲ ಎಂದು ಹೇಳಿತ್ತು.ಇವತ್ತು ಬಾಗ್ಚಿ ಅವರು ಇಬ್ಬರನ್ನು “ಯಾರೋ ವ್ಯಕ್ತಿಗಳು” ಎಂದು ಉಲ್ಲೇಖಿಸಿದ್ದಾರೆ.
“ಒಐಸಿ ಸೆಕ್ರೆಟರಿಯೇಟ್ ಮತ್ತೊಮ್ಮೆ ಪ್ರೇರೇಪಿತ, ತಪ್ಪುದಾರಿಗೆಳೆಯುವ ಮತ್ತು ಚೇಷ್ಟೆಯ ಕಾಮೆಂಟ್‌ಗಳನ್ನು ಮಾಡುತ್ತಿರುವುದು ವಿಷಾದನೀಯ. ಇದು ಪಟ್ಟಭದ್ರ ಹಿತಾಸಕ್ತಿಗಳ ಪ್ರೇರಣೆಯಿಂದ ಅನುಸರಿಸಲಾಗುತ್ತಿರುವ ಅದರ ವಿಭಜಕ ಕಾರ್ಯಸೂಚಿಯನ್ನು ಮಾತ್ರ ಬಹಿರಂಗಪಡಿಸುತ್ತದೆ. ಒಐಸಿ ಸೆಕ್ರೆಟರಿಯೇಟ್ ತನ್ನ ಕೋಮುವಾದಿ ವಿಧಾನವನ್ನು ಅನುಸರಿಸುವುದನ್ನು ನಿಲ್ಲಿಸಲಿ. ಎಲ್ಲಾ ನಂಬಿಕೆಗಳು ಮತ್ತು ಧರ್ಮಗಳಿಗೆ ಸರಿಯಾದ ಗೌರವವನ್ನು ತೋರಿಸಲು ನಾವು ಒತ್ತಾಯಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದರು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:10 pm, Mon, 6 June 22