BMC Election Exit Polls: ಮುಂಬೈನಲ್ಲಿ ಉದ್ಧವ್ ಠಾಕ್ರೆಯ 25 ವರ್ಷಗಳ ಅಧಿಕಾರ ಅಂತ್ಯ, ಬಿಜೆಪಿಗೆ ಬಹುಮತ; ಮತಗಟ್ಟೆ ಸಮೀಕ್ಷೆ ಭವಿಷ್ಯ

ಮಹಾರಾಷ್ಟ್ರದ ಬಿಎಂಸಿ ಸೇರಿದಂತೆ 29 ಪುರಸಭೆ ಚುನಾವಣೆಗಳಿಗೆ ಮತದಾನ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಕೂಡ ಬಿಡುಗಡೆಯಾಗಿವೆ. ಈ ಎಕ್ಸಿಟ್ ಪೋಲ್ ಪ್ರಕಾರ ಈ ಬಾರಿ ಬಿಜೆಪಿ ಭಾರೀ ಬಹುಮತವನ್ನು ಗಳಿಸಲಿದೆ. ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಗಳು 131-151 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಯಾವ ಎಕ್ಸಿಟ್​ ಪೋಲ್​ಗಳು ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳ ಭವಿಷ್ಯ ನುಡಿದಿವೆ ಎಂಬ ಮಾಹಿತಿ ಇಲ್ಲಿದೆ.

BMC Election Exit Polls: ಮುಂಬೈನಲ್ಲಿ ಉದ್ಧವ್ ಠಾಕ್ರೆಯ 25 ವರ್ಷಗಳ ಅಧಿಕಾರ ಅಂತ್ಯ, ಬಿಜೆಪಿಗೆ ಬಹುಮತ; ಮತಗಟ್ಟೆ ಸಮೀಕ್ಷೆ ಭವಿಷ್ಯ
Uddhav Thackeray In Bmc Election

Updated on: Jan 15, 2026 | 8:30 PM

ಮುಂಬೈ, ಜನವರಿ 15: ಮಹಾರಾಷ್ಟ್ರದ ಬಿಎಂಸಿ (BMC Election) ಸೇರಿದಂತೆ 29 ಪುರಸಭೆ ಚುನಾವಣೆಗಳಿಗೆ ಮತದಾನ ಮುಕ್ತಾಯಗೊಂಡಿದೆ. ಎಲ್ಲಾ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ನಾಳೆ (ಶುಕ್ರವಾರ) ಚುನಾವಣಾ ಫಲಿತಾಂಶಗಳನ್ನು ಪ್ರಕಟಿಸಲಾಗುವುದು. ಇಂದು ಮತದಾನ ಮುಕ್ತಾಯವಾಗುತ್ತಿದ್ದಂತೆ ಹಲವು ಏಜೆನ್ಸಿಗಳು ಚುನಾವಣೋತ್ತರ ಸಮೀಕ್ಷೆ (BMC Exit Polls) ಬಿಡುಗಡೆ ಮಾಡಿವೆ. ಅವುಗಳಲ್ಲಿ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಈ ಮೂಲಕ ಕಳೆದ 25 ವರ್ಷಗಳಿಂದ ಬಿಎಂಸಿಯ ಮೇಲೆ ಹಿಡಿತ ಹೊಂದಿರುವ ಉದ್ಧವ್ ಠಾಕ್ರೆಗೆ ಈ ಬಾರಿ ಭಾರೀ ಮುಖಭಂಗವಾಗುವುದು ಬಹುತೇಕ ಖಚಿತವಾಗಿದೆ.

ಕಳೆದ ಹಲವಾರು ದಿನಗಳಿಂದ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆಯು ಮಹಾರಾಷ್ಟ್ರ ರಾಜ್ಯದಲ್ಲಿ ಚರ್ಚೆಯ ಕೇಂದ್ರಬಿಂದುವಾಗಿತ್ತು. ಈ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದರ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿತ್ತು. ಇದೀಗ ಬಿಡುಗಡೆಯಾಗಿರುವ ಮತಗಟ್ಟೆ ಸಮೀಕ್ಷೆಯ ಪ್ರಕಾರ, ಉದ್ಧವ್ ಠಾಕ್ರೆ ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿರುವ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮೇಲೆ ಈ ಬಾರಿ ಹಿಡಿತ ಕಳೆದುಕೊಳ್ಳಲಿದ್ದಾರೆ. ಈ ಬಾರಿ ಬಿಜೆಪಿ ಮೈತ್ರಿಕೂಟ ಬಿಎಂಸಿಯ ಅಧಿಕಾರ ಪಡೆಯಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರತಿಭಟನೆಯಿಂದ ಉದ್ವಿಗ್ನಗೊಂಡಿರುವ ಇರಾನ್​​ನಲ್ಲಿ ಸಿಲುಕಿದ ಭಾರತೀಯರ ಸ್ಥಳಾಂತರ ನಾಳೆಯಿಂದ ಶುರು

ಈ ಬಾರಿ, ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿ ಮತ್ತು ಏಕನಾಥ್ ಶಿಂಧೆ ಅವರ ಮಹಾಮೈತ್ರಿ ಅಧಿಕಾರಕ್ಕೆ ಬರುತ್ತದೆ ಎಂದು ಮತಗಟ್ಟೆ ಸಮೀಕ್ಷೆಯ ಅಂಕಿ-ಅಂಶಗಳು ಹೇಳುತ್ತಿವೆ. ಆದರೆ, ಇದು ಕೇವಲ ಚುನಾವಣೋತ್ತರ ಸಮೀಕ್ಷೆಯ ಲೆಕ್ಕಾಚಾರವಾಗಿದ್ದು, ನಾಳೆ ಪ್ರಕಟವಾಗುವ ಚುನಾವಣಾ ಫಲಿತಾಂಶದ ಬಳಿಕ ಎಲ್ಲವೂ ಸ್ಪಷ್ಟವಾಗಲಿದೆ.

ಆಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆಗಳನ್ನು ಬಿಡುಗಡೆ ಮಾಡಿದೆ. ಈ ಮತಗಟ್ಟೆ ಸಮೀಕ್ಷೆಯು ಬಿಜೆಪಿ ಮೈತ್ರಿಕೂಟ ಬಹುಮತವನ್ನು ಗೆಲ್ಲುತ್ತದೆ ಎಂದು ಹೇಳಲಾಗಿದೆ. ಆಕ್ಸಿಸ್ ಮೈ ಇಂಡಿಯಾದ ನಿರ್ಗಮನ ಸಮೀಕ್ಷೆಯ ಪ್ರಕಾರ, ಬಿಜೆಪಿ ಹಾಗೂ ಏಕನಾಥ್ ಶಿಂಧೆ ಮೈತ್ರಿಕೂಟ 131-151 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಕಾಂಗ್ರೆಸ್ ಮೈತ್ರಿಕೂಟ 12-16 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಯುಬಿಟಿ (ಉದ್ಧವ್ ಠಾಕ್ರೆ) 58-68 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದರೆ, ಇತರರು 6-12 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆ: ಬಿಜೆಪಿ ನೇತೃತ್ವದ ಮಹಾಯುತಿಗೆ ಅಮೋಘ ಮುನ್ನಡೆ

ಬಿಎಂಸಿ ಚುನಾವಣೆಯಲ್ಲಿ ಒಟ್ಟು 227 ವಾರ್ಡ್‌ಗಳಿಗೆ ಮತ ಚಲಾಯಿಸಲಾಗಿದೆ. ಬಿಎಂಸಿ ಚುನಾವಣೆಗೆ 822 ಪುರುಷರು ಮತ್ತು 878 ಮಹಿಳೆಯರು ಸೇರಿದಂತೆ 1,700 ಅಭ್ಯರ್ಥಿಗಳು ಕಣದಲ್ಲಿದ್ದರು.

ಜನಮತ ಪೋಲ್ಸ್‌ ಸಮೀಕ್ಷೆ ಪ್ರಕಾರ, ಬಿಜೆಪಿಗೆ 138 ಸ್ಥಾನ ಸಿಗಲಿದೆ. ಉದ್ಧವ್ ಬಣದ ಶಿವಸೇನೆ 62, ಕಾಂಗ್ರೆಸ್ 20, ಇತರರಿಗೆ 7 ಸ್ಥಾನ ಸಿಗುವ ಸಾಧ್ಯತೆಯಿದೆ.

ಡಿವಿ ರಿಸರ್ಚ್‌ ಮತಗಟ್ಟೆ ಸಮೀಕ್ಷೆ ಪ್ರಕಾರ, ಬಿಜೆಪಿ ಮೈತ್ರಿಕೂಟಕ್ಕೆ 107-122 ಸ್ಥಾನ ಸಿಗಲಿದೆ. ಉದ್ಧವ್ ಬಣದ ಶಿವಸೇನೆ 68-83, ಕಾಂಗ್ರೆಸ್ 18-25, ಎನ್‌ಸಿಪಿ 2-4, ಇತರರಿಗೆ 8-15 ಸ್ಥಾನ ಸಿಗುವ ಸಾಧ್ಯತೆಯಿದೆ.

ಜೆವಿಸಿ ಸಮೀಕ್ಷೆ ಪ್ರಕಾರ ಬಿಜೆಪಿ ಮೈತ್ರಿಕೂಟಕ್ಕೆ 138 ಸ್ಥಾನ, ಉದ್ಧವ್ ಬಣದ ಶಿವಸೇನೆಗೆ 59, ಕಾಂಗ್ರೆಸ್ ಪಕ್ಷಕ್ಕೆ 23, ಇತರರಿಗೆ 7 ಸ್ಥಾನ ಸಿಗಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:03 pm, Thu, 15 January 26