ಭಾರತದೊಳಗೆ ಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನದ ಬೋಟ್; 9 ಪಾಕ್ ಸಿಬ್ಬಂದಿ ವಶಕ್ಕೆ
ಭಾರತೀಯ ಕರಾವಳಿ ಕಾವಲು ಪಡೆ ನಿನ್ನೆ ರಾತ್ರಿ ಭಾರತೀಯ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಪಾಕಿಸ್ತಾನದ ಹಡಗನ್ನು ವಶಕ್ಕೆ ಪಡೆದಿದೆ. ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನದ 9 ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ. ಅಲ್-ಮದೀನಾ ಎಂದು ಗುರುತಿಸಲಾದ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಅದು 9 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು.

ನವದೆಹಲಿ, ಜನವರಿ 15: ಭಾರತೀಯ ಜಲಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಕರಾವಳಿ ಕಾವಲು ಪಡೆ 9 ಸಿಬ್ಬಂದಿಯೊಂದಿಗೆ ಪಾಕಿಸ್ತಾನಿ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಂಡಿದೆ. ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನಿ (Pakistan) ಬೋಟ್ ಅನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಅಲ್-ಮದೀನಾ ಎಂದು ಗುರುತಿಸಲಾದ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಳ್ಳುವ ಸಮಯದಲ್ಲಿ ಅದು 9 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿತ್ತು. ಭಾರತದ ಹಿರಿಯ ಕರಾವಳಿ ಕಾವಲು ಪಡೆ ಅಧಿಕಾರಿಗಳ ಪ್ರಕಾರ, ಈ ಹಡಗನ್ನು ಮೊದಲು ಜನವರಿ 14ರಂದು ಅಂತಾರಾಷ್ಟ್ರೀಯ ಸಮುದ್ರ ಗಡಿ ರೇಖೆ (IMBL) ಬಳಿ ಪತ್ತೆ ಮಾಡಲಾಯಿತು. ಹಡಗನ್ನು ನಿಲ್ಲಿಸಲು ಸೂಚಿಸಿದಾಗ, ಆ ಬೋಟ್ ಪಾಕಿಸ್ತಾನಿ ನೀರಿನ ಕಡೆಗೆ ಪಲಾಯನ ಮಾಡಲು ಪ್ರಯತ್ನಿಸಿತು. ಆಗ ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ಆ ಹಡಗನ್ನು ವಶಪಡಿಸಿಕೊಂಡರು. ಅಲ್-ಮದೀನಾ ಹಡಗನ್ನು ಗುಜರಾತ್‌ನ ಪೋರಬಂದರು ಬಂದರಿಗೆ ಎಳೆದುಕೊಂಡು ಹೋಗಲಾಗುತ್ತಿದೆ. ಅಲ್ಲಿಗೆ ಹೋದ ನಂತರ, ವಿವಿಧ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳು ಸಿಬ್ಬಂದಿಯ ಜಂಟಿ ವಿಚಾರಣೆಯ ಭಾಗವಾಗಿ ಅದನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಲಾಗುತ್ತದೆ.
In a swift and precise night operation, an @IndiaCoastGuard Ship whilst on patrol in #Arabian sea sighted a #Pakistani Fishing Boat inside #Indian waters near the International Maritime Boundary Line on 14 Jan 26. On being challenged, the boat attempted to flee towards Pakistan… pic.twitter.com/DEz1aPBOed
— Indian Coast Guard (@IndiaCoastGuard) January 15, 2026
ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ
ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ಭಾರತದ ವಿಶೇಷ ಆರ್ಥಿಕ ವಲಯ (EEZ) ಒಳಗೆ ಪಾಕಿಸ್ತಾನಿ ಮೀನುಗಾರಿಕಾ ದೋಣಿಯನ್ನು ಭಾರತೀಯ ಕರಾವಳಿ ಕಾವಲು ಪಡೆ ವಶಪಡಿಸಿಕೊಂಡಿತ್ತು. ಅದರಲ್ಲಿದ್ದ ಎಲ್ಲಾ 11 ಸಿಬ್ಬಂದಿಯನ್ನು ಬಂಧಿಸಲಾಗಿತ್ತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
