Bomb Threat: ದೆಹಲಿಯ ಪುಷ್ಪ್ ವಿಹಾರ್‌ನಲ್ಲಿರುವ ಅಮೃತಾ ಶಾಲೆಗೆ ಬಾಂಬ್ ಬೆದರಿಕೆ
ದಕ್ಷಿಣ ದೆಹಲಿಯ ಪುಷ್ಪ್ ವಿಹಾರ್‌ನಲ್ಲಿರುವ ಅಮೃತಾ ಶಾಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳಕ್ಕೆ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಲಾಗಿದೆ.
ದೆಹಲಿ: ದಕ್ಷಿಣ ದೆಹಲಿಯ ಪುಷ್ಪ್ ವಿಹಾರ್‌ನಲ್ಲಿರುವ ಅಮೃತಾ ಶಾಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳಕ್ಕೆ ಬೆದರಿಕೆ ಮೇಲ್ ಬಂದಿದೆ ಎಂದು ಹೇಳಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಬಂದಿದ್ದು, ಕಾರ್ಯಚರಣೆ ನಡೆಸುತ್ತಿದೆ. ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಅಮೃತಾ ಶಾಲೆಯ ಮಕ್ಕಳನ್ನು ದೆಹಲಿಯ ಖಾಸಗಿ ಶಾಲೆಯೊಂದಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೂ ಮುನ್ನ ಮಥುರಾ ರಸ್ತೆಯಲ್ಲಿರುವ ‘ದಿ ಡೆಲ್ಲಿ ಪಬ್ಲಿಕ್ ಸ್ಕೂಲ್’ (ಡಿಪಿಎಸ್) ಆವರಣದಲ್ಲಿ ಬಾಂಬ್ ಇಡಲಾಗಿದೆ ಎಂದು ಬೆದರಿಕೆ ಮೇಲ್ ಬಂದ ಹದಿನೈದು ದಿನಗಳ ನಂತರ, ಪೊಲೀಸರು ಶಾಲೆ ಬಳಿ ಕಾರ್ಯಚರಣೆ ನಡೆಸಿದ್ದಾರೆ.
ಈ ಮೇಲ್ ನೋಡಿದಾಗ ಇಮೇಲ್ ಐಡಿ ಡಿಪಿಎಸ್‌ನ ವಿದ್ಯಾರ್ಥಿಗೆ ಲಿಂಕ್ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ. ಈ ಕುರಿತು ವಿದ್ಯಾರ್ಥಿಯು ಕೌನ್ಸೆಲಿಂಗ್ ಮಾಡಲಾಗಿದೆ. ಈ ಸಮಯದಲ್ಲಿ ವಿದ್ಯಾರ್ಥಿ ನಾವು ಕೇವಲ ಮೋಜಿಗಾಗಿ ತಮಾಷೆಗಾಗಿ ಮಾಡಿದ್ದು ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ: Bomb Threat Call: ಅಮಿತಾಭ್, ಅಂಬಾನಿ, ಧರ್ಮೇಂದ್ರ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿದ ಕಿಡಿಗೇಡಿ
ಕಳೆದ ತಿಂಗಳು ‘ದಿ ಇಂಡಿಯನ್ ಸ್ಕೂಲ್’ ನಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು. ಬಾಂಬ್ ಸ್ಕ್ವಾಡ್ ಮತ್ತು ಇತರ ಏಜೆನ್ಸಿಗಳು ಸ್ಫೋಟಕ ವಸ್ತುವಿಗಾಗಿ ಶಾಲಾ ಆವರಣವನ್ನು ಕಾರ್ಯಚರಣೆ ನಡೆಸಲಾಗಿದೆ, ನಂತರ ಅದು ಬೆದರಿಕೆ ಮೇಲ್ ಎಂದು ಹೇಳಲಾಗಿತ್ತು
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:37 am, Tue, 16 May 23