ಅನಿಲ್ ದೇಶ್​ಮುಖ್ ಮಾಡಿರುವ ವರ್ಗಾವಣೆ ಮತ್ತು ನಿಯೋಜನೆಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸಬಹುದು: ಬಾಂಬೆ ಹೈಕೋರ್ಟ್

ಸಿಬಿಐ ಸಲ್ಲಿಸಿದ್ದ ಎಫ್​ಐಆರ್​ ಪ್ರಶ್ನಿಸಿದ್ದ ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನು ಬಾಂಬೆ ಹೈಕೋರ್ಟ್​ ವಜಾ ಮಾಡಿದೆ.

ಅನಿಲ್ ದೇಶ್​ಮುಖ್ ಮಾಡಿರುವ ವರ್ಗಾವಣೆ ಮತ್ತು ನಿಯೋಜನೆಗಳ ಬಗ್ಗೆಯೂ ಸಿಬಿಐ ತನಿಖೆ ನಡೆಸಬಹುದು: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್​
TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jul 22, 2021 | 4:48 PM

ಮುಂಬೈ: ಮುಂಬೈನ ಹಿಂದಿನ ಪೊಲೀಸ್ ಆಯುಕ್ತ ಪರಮ್​ಬೀರ್ ಸಿಂಗ್​ ಲಂಚದ ಆರೋಪ ಮಾಡಿದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಹಾರಾಷ್ಟ್ರ ಸರ್ಕಾರದ ಹಿಂದಿನ ಗೃಹ ಸಚಿವ ಅನಿಲ್ ದೇಶ್​ಮುಖ್ ಮಾಡಿರುವ ವರ್ಗಾವಣೆಗಳು ಮತ್ತು ನಿಯೋಜನೆಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಎಂದು ಬಾಂಬೆ ಹೈಕೋರ್ಟ್​ ಗುರುವಾರ ಸ್ಪಷ್ಟಪಡಿಸಿದೆ. ಸಿಬಿಐ ಸಲ್ಲಿಸಿದ್ದ ಎಫ್​ಐಆರ್​ ಪ್ರಶ್ನಿಸಿದ್ದ ಮಹಾರಾಷ್ಟ್ರ ಸರ್ಕಾರದ ಅರ್ಜಿಯನ್ನು ಬಾಂಬೆ ಹೈಕೋರ್ಟ್​ ವಜಾ ಮಾಡಿದೆ.

ಅನಿಲ್​ ದೇಶ್​ಮುಖ್ ವಿರುದ್ಧ ಸಲ್ಲಿಕೆಯಾಗಿರುವ ಎಫ್​ಐಆರ್​ನಲ್ಲಿ ಎರಡು ಪ್ಯಾರಾಗಳನ್ನು ತೆಗೆದುಹಾಕಬೇಕು ಎಂದು ಮಹಾರಾಷ್ಟ್ರ ಸರ್ಕಾರ ಕೋರಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್​.ಎಸ್​.ಶಿಂದೆ ಮತ್ತು ಎನ್​.ಜೆ.ಜಮಾದಾರ್ ಅವರಿದ್ದ ಪೀಠವು ತೀರ್ಪು ನೀಡಿತು. ಅನಿಲ್​ ದೇಶಮುಖ್ ಮತ್ತು ಅವರ ಸಹವರ್ತಿಗಳು ಮಾಡಿರುವ ಯಾವುದೇ ವರ್ಗಾವಣೆ ಅಥವಾ ನಿಯೋಜನೆಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ಸಿಬಿಐಗೆ ಇದೆ ಎಂದು ನ್ಯಾಯಾಲಯ ಹೇಳಿತು.

ಈ ಪ್ರಕರಣದಲ್ಲಿ ಈಗಾಗಲೇ ನಡೆಯುತ್ತಿರುವ ಹಲವು ತನಿಖೆಗಳಲ್ಲಿ ಸಿಬಿಐ ಹಸ್ತಕ್ಷೇಪಕ್ಕೆ ಇದು ಅವಕಾಶ ಮಾಡಿಕೊಡುತ್ತದೆ ಎಂಬ ಕಾರಣ ಮುಂದಿಟ್ಟು ಈ ತೀರ್ಪನ್ನು ಹಿಂಪಡೆಯಬೇಕು ಎಂದು ಮಹಾರಾಷ್ಟ್ರ ಸರ್ಕಾರ ಕೋರಿತು. ಈ ಮನವಿಯನ್ನೂ ಹೈಕೋರ್ಟ್​ ತಿಳ್ಳಿ ಹಾಕಿತು.

‘ಅನಿಲ್ ಅಂಬಾನಿ ಮನೆ ಎದುರು ಸ್ಫೋಟಕ ತುಂಬಿದ್ದ ವಾಹನ ನಿಲ್ಲಿಸಿದ್ದ ಆರೋಪಿ ವಾಜೆಯನ್ನು 15 ವರ್ಷಗಳ ನಂತರ ಮತ್ತೆ ಪೊಲೀಸ್ ಸೇವೆಗೆ ನಿಯೋಜನೆ ಮಾಡಿದ್ದೂ ಸೇರಿದಂತೆ ಅನಿಲ್ ದೇಶ್​ಮುಖ್ ಗೃಹ ಸಚಿವರಾಗಿದ್ದಾಗ ತೆಗೆದುಕೊಂಡ ಯಾವುದೇ ನಿಯೋಜನೆ ಮತ್ತು ವರ್ಗಾವಣೆ ನಿರ್ಧಾರಗಳ ಬಗ್ಗೆ ಸಿಬಿಐ ತನಿಖೆ ನಡೆಸಬಹುದಾಗಿದೆ’ ಎಂದು ಹೈಕೋರ್ಟ್ ಹೇಳಿತು.

‘ನಮ್ಮ ತೀರ್ಪನ್ನು ತಪ್ಪಾಗಿ ಅರ್ಥೈಸಬೇಡಿ. ಅನಿಲ್ ದೇಶ್​ಮುಖ್ ನಿರ್ಧಾರಗಳನ್ನು ಸಿಬಿಐ ತನಿಖೆ ನಡೆಸಬಹುದು ಎಂದು ನಾವು ಹೇಳಿದಾಕ್ಷಣ ನೇರವಾಗಿ ಈ ಪ್ರಕರಣದ ಪರಿಮಿತಿಯಲ್ಲಿ ಇಲ್ಲದ ಪೊಲೀಸ್​ ಇಲಾಖೆಯ ವ್ಯವಹಾರಗಳಲ್ಲಿ ಸಿಬಿಐ ಹಸ್ತಕ್ಷೇಪ ನಡೆಸಬಹುದು ಎಂದು ಅಲ್ಲ’ ಎಂದು ನ್ಯಾಯಪೀಠವು ವಿವರಣೆ ನೀಡಿತು.

(Bombay High Court gives Authority to CBI to Investigate Transfers and Postings By Anil Deshmukh)

ಇದನ್ನೂ ಓದಿ: ಗುಲ್ಶನ್ ಕುಮಾರ್ ಹತ್ಯೆ ಪ್ರಕರಣ: ದಾವೂದ್ ಸಹಚರ ಅಬ್ದುಲ್ ರೌಫ್ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಬಾಂಬೆ ಹೈಕೋರ್ಟ್

ಇದನ್ನೂ ಓದಿ: ‘ಸೂಪರ್ ಕಾಪ್‘ ಆಗಲು ನಾನೇ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಇಟ್ಟಿದ್ದೆ; ತಪ್ಪೊಪ್ಪಿಗೆ ಹೇಳಿಕೆ ನೀಡಿದ ಸಚಿನ್ ವಾಜೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada