ಸುಶಾಂತ್​ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡಿದ ಬಾಂಬೆ ಹೈಕೋರ್ಟ್​

ಸುಶಾಂತ್​ ಸಿಂಗ್ ಮಾಜಿ ಪ್ರಿಯತಮೆ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಆಘಾತಕಾರಿ ವಿಚಾರವನ್ನು ಬಿಚ್ಚಿದ್ದರು. ಸುಶಾಂತ್​ ಸಿಂಗ್​ಗೆ ನಿಷೇಧಿತ ಔಷಧಗಳನ್ನು ನೀಡಲು ಸಹೋದರಿಯರು ಡಾ. ತರುಣ್ ಕುಮಾರ್ ಜತೆ ಶಾಮೀಲಾಗಿದ್ದರು ಎಂದು ರಿಯಾ ಆರೋಪಿಸಿದ್ದರು.

ಸುಶಾಂತ್​ ಸಹೋದರಿ ಮೀತು ಸಿಂಗ್ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಮಾಡಿದ ಬಾಂಬೆ ಹೈಕೋರ್ಟ್​
ಸುಶಾಂತ್​ ಸಿಂಗ್​
Edited By: ಸಾಧು ಶ್ರೀನಾಥ್​

Updated on: Feb 15, 2021 | 3:26 PM

ಮುಂಬೈ: ದೇಶವ್ಯಾಪಿ ಸಂಚಲನ ಸೃಷ್ಟಿಸಿದ್ದ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣದಲ್ಲಿ ಅವರ ಸಹೋದರಿ ಮೀತು ಸಿಂಗ್​ ವಿರುದ್ಧ ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಬಾಂಬೇ ಹೈಕೋರ್ಟ್​ ವಜಾ ಮಾಡಿದೆ. ಅವರ ಮತ್ತೋರ್ವ ಸಹೋದರಿಯಾದ ಪ್ರಿಯಾಂಕಾ ಸಿಂಗ್​ ವಿರುದ್ಧ ತನಿಖೆ ಮುಂದುವರಿಸಬಹುದು ಎಂದು ಕೋರ್ಟ್​ ಹೇಳಿದೆ.

ಸುಶಾಂತ್​ ಸಿಂಗ್ ಮಾಜಿ ಪ್ರಿಯತಮೆ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಆಘಾತಕಾರಿ ವಿಚಾರವನ್ನು ಬಿಚ್ಚಿಟ್ಟಿದ್ದರು. ಸುಶಾಂತ್​ ಸಿಂಗ್​ಗೆ ನಿಷೇಧಿತ ಔಷಧಗಳನ್ನು ನೀಡಲು ಸಹೋದರಿಯರು ಡಾ. ತರುಣ್ ಕುಮಾರ್ ಜತೆ ಶಾಮೀಲಾಗಿದ್ದರು ಎಂದು ರಿಯಾ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದರು. ಈ ಪ್ರಕರಣ ರದ್ದು ಮಾಡುವಂತೆ ಸುಶಾಂತ್​ ಸಹೋದರಿಯರು ಬಾಂಬೆ ಹೈಕೋರ್ಟ್​ಗೆ ಮನವಿ ಮಾಡಿದ್ದರು.

 ಪ್ರಿಯಾಂಕಾ ಸಿಂಗ್ ವಿರುದ್ಧ ಕೇಳಿ ಬಂದ ಆರೋಪದಲ್ಲಿ ಹುರುಳಿದೆ
ನ್ಯಾಯಮೂರ್ತಿ ಎಸ್​.ಎಸ್​. ಶಿಂಧೆ ಹಾಗೂ ಎಂಎಸ್​​ ಕಾರ್ನಿಕ್​ ಅವರನ್ನೊಳಗೊಂಡ ಪೀಠ ಅರ್ಜಿ ವಿಚಾರಣೆ ನಡೆಸಿ ಜನವರಿ 7ರಂದು ತೀರ್ಪನ್ನು ಕಾಯ್ದಿರಿಸಿತ್ತು. ಈ ತೀರ್ಪನ್ನು ಇಂದು ನೀಡಲಾಗಿದೆ. ಪ್ರಿಯಾಂಕಾ ಸಿಂಗ್ ವಿರುದ್ಧ ಕೇಳಿ ಬಂದ ಆರೋಪದಲ್ಲಿ ಹುರುಳಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಹೀಗಾಗಿ, ಅವರ ವಿರುದ್ಧದ ತನಿಖೆ ಮುಂದುವರಿಯಬೇಕು. ಇದಕ್ಕೆ ಯಾವುದೇ ಅಡೆತಡೆ  ಉಂಟಾಗಬಾರದು ಎಂದು ಪೀಠ ಹೇಳಿದೆ. ಇದೇ ವೇಳೆ, ಮೀತು ಸಿಂಗ್​ ವಿರುದ್ಧದ ಪ್ರಕರಣವನ್ನು ರದ್ದು ಮಾಡಿದೆ.

ಕಳೆದ ವರ್ಷ ಜೂನ್​ 14ರಂದು ಸುಶಾಂತ್​ ಸಿಂಗ್​ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆ ಹಿಂದೆ ಬಾಲಿವುಡ್​ ಮಂದಿಯ ಕೈವಾಡವಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ದೊಡ್ಡ ದೊಡ್ಡ ನಿರ್ಮಾಪಕರ ಹೆಸರು ಕೂಡ ಇದಕ್ಕೆ ತಳುಕು ಹಾಕಿಕೊಂಡಿತ್ತು.

ಇದನ್ನೂ ಓದಿ: ಸುಶಾಂತ್​ ಸಿಂಗ್​ ಸಂಬಂಧಿ ಹತ್ಯೆ ಯತ್ನ; ಬೈಕ್​ ಮೇಲೆ ಬಂದು ಗುಂಡು ಹಾರಿಸಿದ ದುಷ್ಕರ್ಮಿಗಳು

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us