AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ್ಯೋತಿರ್ಲಿಂಗ ತಾಣ ಶ್ರೀಶೈಲದ ಪ್ರಸಾದದಲ್ಲಿ ಕಂಡಿದ್ದು ಮೂಳೆ ಪೀಸ್​​ ಅಲ್ಲ.. ದೇವಸ್ಥಾನದ ಅಧಿಕಾರಿ ಹೇಳಿದ್ದೇನು?

ಶ್ರೀಶೈಲ ದೇವಸ್ಥಾನದ ಇ.ಒ. ಪೆದ್ದಿರಾಜು, ದಾಲ್ಚಿನ್ನಿ ತುಂಡುಗಳನ್ನು ನೋಡಿದ ಭಕ್ತ ಅಸ್ಥಿ ಎಂದು ತಪ್ಪಾಗಿ ಭಾವಿಸಿದ್ದಾನೆ, ಆದರೆ ದೇವಾಲಯದ ಸಮಿತಿಯ ತನಿಖೆಯಲ್ಲಿ ಅವರ ಮಾತು ಸುಳ್ಳು ಎಂದು ತಿಳಿದುಬಂದಿದೆ. ಶ್ರೀಶೈಲ ದೇಗುಲದಲ್ಲಿ ಪ್ರಸಾದ ತಯಾರಿಕೆಯಲ್ಲಿ ಯಾವಾಗಲೂ ಪ್ರಮಾಣಿತ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಇಂತಹ ಅಪವಿತ್ರ ಕೃತ್ಯಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜ್ಯೋತಿರ್ಲಿಂಗ ತಾಣ ಶ್ರೀಶೈಲದ ಪ್ರಸಾದದಲ್ಲಿ ಕಂಡಿದ್ದು ಮೂಳೆ ಪೀಸ್​​ ಅಲ್ಲ.. ದೇವಸ್ಥಾನದ ಅಧಿಕಾರಿ ಹೇಳಿದ್ದೇನು?
ಜ್ಯೋತಿರ್ಲಿಂಗ ತಾಣ ಶ್ರೀಶೈಲದ ಪ್ರಸಾದದಲ್ಲಿ ಕಂಡಿದ್ದು ಮೂಳೆ ಪೀಸ್​​ ಅಲ್ಲ
ಸಾಧು ಶ್ರೀನಾಥ್​
|

Updated on: Feb 12, 2024 | 2:57 PM

Share

ದೇವಸ್ಥಾನದ ಪ್ರಸಾದದಲ್ಲಿ ಅಸ್ಥಿ ಇದೆ ಎಂದು ಹೈದರಾಬಾದ್ ಮೂಲದ ಭಕ್ತರೊಬ್ಬರು ಮಾಡಿದ್ದ ಆರೋಪವನ್ನು ಶ್ರೀಶೈಲಂ ದೇವಸ್ಥಾನದ ಆಡಳಿತ ಮಂಡಳಿ ರಚಿಸಿದ್ದ ತ್ರಿಸದಸ್ಯ ಸಮಿತಿಯು ತಳ್ಳಿಹಾಕಿದೆ. ಶುಕ್ರವಾರ ಶ್ರೀಶೈಲ ದೇವಸ್ಥಾನಕ್ಕೆ ಬಂದಿದ್ದ ಹೈದರಾಬಾದ್‌ನ ಭಕ್ತರೊಬ್ಬರು ದೇವಸ್ಥಾನದಲ್ಲಿ ಮಾರಾಟ ಮಾಡಿದ ಪುಳಿಯೋಗರೆ ಪ್ರಸಾದದಲ್ಲಿ ಎರಡು ಮೂಳೆ ಪೀಸ್​​ಗಳು ಪತ್ತೆಯಾಗಿದೆ ಎಂದು ಆರೋಪಿಸಿದ್ದರು. ದೇವಸ್ಥಾನದಲ್ಲಿ ಸ್ವೀಕರಿಸಿದ್ದ ಪುಳಿಯೋಗರೆ ಪ್ರಸಾದದಲ್ಲಿ ಮೂಳೆ ಪತ್ತೆಯಾಗಿರುವ ಬಗ್ಗೆ ಭಕ್ತರೊಬ್ಬರು ಔಪಚಾರಿಕವಾಗಿ ದೂರು ನೀಡಿದ್ದರು. ದೂರುದಾರ ತಾನು ಕಂಡ ದಾಖಲೆಗಳನ್ನು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಹಾಜರುಪಡಿಸಿದರು. ಶ್ರೀಶೈಲ ದೇವಸ್ಥಾನದ ಆಡಳಿತಾಧಿಕಾರಿಗಳು ಕೂಡಲೇ ಅದಕ್ಕೆ ಸ್ಪಂದಿಸಿ ತನಿಖೆಗೆ ಆದೇಶಿಸಿದ್ದರು. ಪುಳಿಯೋಗರೆಯಲ್ಲಿ ಬಳಸುವ ದಾಲ್ಚಿನ್ನಿ ಕಡ್ಡಿಗಳನ್ನು ಭಕ್ತ ನೋಡಿ ಮೂಳೆ ಎಂದು ಭಾವಿಸಿರುವುದು ದೇವಸ್ಥಾನ ಸಮಿತಿಯ ತನಿಖೆಯಿಂದ ತಿಳಿದುಬಂದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ವಿವರಿಸಿದೆ. ಸಂಪೂರ್ಣ ವಿವರಗಳ ನೋಡುವುದಾದರೆ

ಆಂಧ್ರ ಪ್ರದೇಶದ ಶ್ರೀಶೈಲಂ ದೇವಸ್ಥಾನದಲ್ಲಿ ಭಾನುವಾರ ಆತಂಕಕಾರಿ ಘಟನೆ ನಡೆದಿದೆ. ಹೈದರಾಬಾದ್‌ನ ಹರೀಶ್ ರೆಡ್ಡಿ ಎಂಬ ಭಕ್ತ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ತಾವು ಪಡೆದಿದ್ದ ಪುಳಿಯೋಗರೆ ಪ್ರಸಾದದಲ್ಲಿ ಎರಡು ಎಲುಬಿನ ತುಂಡುಗಳು ಕಂಡು ಆತಂಕಗೊಂಡಿದ್ದಾರೆ. ಭಗವಾನ್ ಶಿವನ ವಾಸಸ್ಥಾನವೆಂದು ಪರಿಗಣಿಸಲಾದ ಶ್ರೀಶೈಲಂ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಹಳೆಯ, ಪವಿತ್ರ ಮತ್ತು ಪ್ರಮುಖ ಜ್ಯೋತಿರ್ಲಿಂಗ ತಾಣವಾಗಿದೆ. ಇಂತಹ ಕ್ಷೇತ್ರದಲ್ಲಿ ಇಂತಹ ಆರೋಪ ಬಂದಾಗ ಭಕ್ತರಲ್ಲಿ, ಜನರಲ್ಲಿ ಭಾರೀ ಕೋಲಾಹಲ ಶುರುವಾಗಿದೆ. ಈ ಘಟನೆಯು ದೇವಾಲಯದ ಅಡುಗೆ ಸೌಕರ್ಯ ಸ್ಥಳದ ಸ್ವಚ್ಛತೆ ಮತ್ತು ನಿರ್ವಹಣೆಯ ಬಗ್ಗೆ ಗಂಭೀರ ಕಳವಳ ಉಂಟುಮಾಡಿದೆ. ಈ ಬಗ್ಗೆ ಶ್ರೀಶೈಲ ದೇವಸ್ಥಾನದ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ತ್ವರಿತವಾಗಿ ಕ್ರಮ ಕೈಗೊಂಡಿದ್ದಾರೆ.

Also Read: ಅಪಘಾತದಲ್ಲಿ ಯುವಕ ದಾರುಣ ಸಾವು -ಅಪಘಾತ ಮಾಡಿದ ವ್ಯಕ್ತಿಯೂ ಮನನೊಂದು ಸೂಸೈಡ್: ಮಡಿಕೇರಿಯಲ್ಲಿ ಕರುಣಾಜನಕ‌ ಕಥೆ

ಶ್ರೀಶೈಲ ದೇವಸ್ಥಾನದ ಇ.ಒ. ಪೆದ್ದಿರಾಜು, ದಾಲ್ಚಿನ್ನಿ ತುಂಡುಗಳನ್ನು ನೋಡಿದ ಭಕ್ತ ಅಸ್ಥಿ ಎಂದು ತಪ್ಪಾಗಿ ಭಾವಿಸಿದ್ದಾನೆ, ಆದರೆ ದೇವಾಲಯದ ಸಮಿತಿಯ ತನಿಖೆಯಲ್ಲಿ ಅವರ ಮಾತು ಸುಳ್ಳು ಎಂದು ತಿಳಿದುಬಂದಿದೆ. ಶ್ರೀಶೈಲ ದೇಗುಲದಲ್ಲಿ ಪ್ರಸಾದ ತಯಾರಿಕೆಯಲ್ಲಿ ಯಾವಾಗಲೂ ಪ್ರಮಾಣಿತ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಇಂತಹ ಅಪವಿತ್ರ ಕೃತ್ಯಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿ, ಭ್ರಮರಾಂಬಿಕಾ ದೇವಿಯ ಪುಣ್ಯ ಕ್ಷೇತ್ರ… ಈ ಐತಿಹಾಸಿಕ ಶ್ರೀಶೈಲದ ಪಾವಿತ್ರ್ಯತೆ ಕಾಪಾಡಲು ಸದಾ ಶ್ರಮಿಸುತ್ತಿದ್ದೇವೆ ಎಂದಿದ್ದಾರೆ.

ಶ್ರೀಶೈಲ ದೇವಸ್ಥಾನದಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಪ್ರಸಾದವನ್ನು ತಯಾರಿಸಲಾಗುತ್ತದೆ ಎಂದು ಶ್ರೀಭರಮಾಂಬಾದೇವಿ ಅಮ್ಮನವರ ದೇವಸ್ಥಾನದ ಪ್ರಧಾನ ಅರ್ಚಕ ಮಾರ್ಕಂಡೇಯ ಶಾಸ್ತ್ರಿ ಮತ್ತು ವೇದ ವಿದ್ವಾಂಸರಾದ ಗಂಟಿ ರಾಧಾಕೃಷ್ಣ ವಿವರಿಸಿದರು. ಶ್ರೀಶೈಲ ಮಹಾಕ್ಷೇತ್ರದಲ್ಲಿ ಭಕ್ತರಿಗೆ ವಿತರಿಸುವ ಪುಳಿಹೊರ ಪ್ರಸಾದದಲ್ಲಿ ಅಸ್ಥಿ ಪತ್ತೆಯಾಗಿಲ್ಲ ಎಂದು ತೀರ್ಮಾನಿಸಲಾಗಿದೆ. ನಿತ್ಯ ನೈವೇದ್ಯ ತಯಾರಿಯೂ ಪ್ರಧಾನ ಅರ್ಚಕರ ನೇತೃತ್ವದಲ್ಲಿ ನಡೆಯುತ್ತದೆ.

ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
ರಾತ್ರಿ ಸುರಿದ ಭಾರೀ ಮಳೆಯಿಂದ ನೀರು ಜಮೀನಿಗೆ ನುಗ್ಗಿ ರೈತ ರಾಜಣ್ಣ ಕಂಗಾಲು
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
VIDEO: ಕೆಣಕಿದ ದಿಗ್ವೇಶ್ ರಾಥಿಯ ಬೆಂಡೆತ್ತಿದ ಅಂಕಿತ್
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ಚಿನ್ನಾಭರಣ ಖರೀದಿಗೆ ಬಂದು ಮಗುವನ್ನೇ ಮರೆತ ತಾಯಿ; ಮುಂದೇನಾಯ್ತು ಗೊತ್ತಾ?
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ತೆಲುಗು ವೇದಿಕೆ ಮೇಲೆ ‘ಬಾವ’ ಹಾಡಿಗೆ ರಾಜ್, ಜೆಪಿ, ಶನೀಲ್ ಭರ್ಜರಿ ಸ್ಟೆಪ್
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ಪಾರ್ಕಿಂಗ್​ಗಾಗಿ ಪೂರ್ತಿ ರಸ್ತೆಯನ್ನೇ ಕಬಳಿಸಿರುವುದು ಮೂರ್ಖತನದ ಪರಮಾವಧಿ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ರಾಯಚೂರು: ಎದೆಯತ್ತರದ ನೀರಲ್ಲೇ ಮೃತದೇಹ ಹೊತ್ತು ಸಾಗಿದ ಗ್ರಾಮಸ್ಥರು; ವಿಡಿಯೋ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವರಮಹಾಲಕ್ಷ್ಮೀ ಹಬ್ಬ: ಕೆಆರ್ ಮಾರುಕಟ್ಟೆಯಲ್ಲಿ ಖರೀದಿಗೆ ಮುಗಿಬಿದ್ದ ಜನ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವಿಡಿಯೋ: ಚಿಕ್ಕಮಗಳೂರು ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಸಂಚಾರ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
ವ್ಯಾಪಾರ ಅಧಿಕವಾಗಲು ಏನು ಮಾಡಬೇಕು? ವಿಡಿಯೋ ನೋಡಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ
Daily horoscope: ಇಂದಿನ ದ್ವಾದಶ ರಾಶಿಗಳ ಫಲಾಫಲಾಗಳ ಬಗ್ಗೆ ತಿಳಿಯಿರಿ