ಪಾಗಲ್ ಪ್ರೇಮಿ ಹುಚ್ಚಾಟ, ಸಾವು ಬದುಕಿನ ನಡುವೆ ಯುವತಿ ನರಳಾಟ..

| Updated By: ಸಾಧು ಶ್ರೀನಾಥ್​

Updated on: Oct 15, 2020 | 3:53 PM

ಹೈದರಾಬಾದ್: ಪ್ರೀತಿ, ಪ್ರೇಮವೆಂಬ ಪವಿತ್ರ ಸಂಬಂಧವನ್ನು ಬಳಸಿಕೊಂಡು ನೀಚರು ಯುವತಿಯರ ಬಾಳಲ್ಲಿ ಆಟವಾಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ನಿನ್ನೆಯಷ್ಟೇ ಪ್ರಿಯಕರನ ವಂಚನೆ ಸಹಿಸಲಾಗದೆ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ‌ ಹಳಿಗೆ‌ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ತೆಲಂಗಾಣದ ಮೆಡಿಪಲ್ಲಿಯಲ್ಲಿ‌ ನಡೆದಿತ್ತು. ಈಗ ವಿಜಯವಾಡದಲ್ಲಿ ಪ್ರೇಮದ ಹೆಸರಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ ಅದಿ ಹರೆಯದ ಸಮಯದಲ್ಲಿ ಪ್ರೀತಿಗೆ ಬಿದ್ದ ಇಂಜನಿಯರಿಂಗ್ ವಿದ್ಯಾರ್ಥಿನಿಯನ್ನು ಪ್ರಿಯಕರ […]

ಪಾಗಲ್ ಪ್ರೇಮಿ ಹುಚ್ಚಾಟ, ಸಾವು ಬದುಕಿನ ನಡುವೆ ಯುವತಿ ನರಳಾಟ..
Follow us on

ಹೈದರಾಬಾದ್: ಪ್ರೀತಿ, ಪ್ರೇಮವೆಂಬ ಪವಿತ್ರ ಸಂಬಂಧವನ್ನು ಬಳಸಿಕೊಂಡು ನೀಚರು ಯುವತಿಯರ ಬಾಳಲ್ಲಿ ಆಟವಾಡುತ್ತಿರುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿವೆ. ನಿನ್ನೆಯಷ್ಟೇ ಪ್ರಿಯಕರನ ವಂಚನೆ ಸಹಿಸಲಾಗದೆ ಸಾಫ್ಟವೇರ್ ಇಂಜನಿಯರ್ ಯುವತಿಯೊಬ್ಬರು ರೈಲಿನ‌ ಹಳಿಗೆ‌ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ತೆಲಂಗಾಣದ ಮೆಡಿಪಲ್ಲಿಯಲ್ಲಿ‌ ನಡೆದಿತ್ತು. ಈಗ ವಿಜಯವಾಡದಲ್ಲಿ ಪ್ರೇಮದ ಹೆಸರಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ.

ಪ್ರೀತಿ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಗಲ್ ಪ್ರೇಮಿ

ಅದಿ ಹರೆಯದ ಸಮಯದಲ್ಲಿ ಪ್ರೀತಿಗೆ ಬಿದ್ದ ಇಂಜನಿಯರಿಂಗ್ ವಿದ್ಯಾರ್ಥಿನಿಯನ್ನು ಪ್ರಿಯಕರ ಕತ್ತಿಯಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ. ಆಂಧ್ರಪ್ರದೇಶದ ವಿಜಯವಾಡದಲ್ಲಿ ಚಿನ್ನಸ್ವಾಮಿ ಎಂಬ ಪಾಗಲ್ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿ ದಿವ್ಯ ತೇಜಸ್ವಿನಿ ಎನ್ನುವವಳ ಮನೆಗೆ ನೇರವಾಗಿ ಹೋಗಿ ತಲೆಯ ಮೇಲೆ ಕತ್ತಿಯಿಂದ ಹೊಡೆದು, ಹತ್ಯೆಗೆ ಯತ್ನಿಸಿ ನಂತರ ತನಗೆ ತಾನೇ ಗಾಯ ಮಾಡಿಕೊಂಡಿದ್ದಾನೆ. ಸದ್ಯ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದು, ದಿವ್ಯಾಳ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ಪ್ರೀತಿಯ‌ ನೆಪ.. Social Mediaಗೆ ಆಹಾರವಾದ ಫೋಟೋಗಳು: ನೊಂದ ಟೆಕ್ಕಿ ಯುವತಿ ಆತ್ಮಹತ್ಯೆ