Breaking News: ಸೆಪ್ಟೆಂಬರ್ 22ರಂದು ವಿಶ್ವಾಸಮತ ಯಾಚನೆ ಮಾಡಲಿದೆ ಪಂಜಾಬ್ ಸರ್ಕಾರ
ಪಂಜಾಬ್ ಸರ್ಕಾರ ಬಹುಮತ ಪರೀಕ್ಷೆ ಸಂಕಷ್ಟ ಎದುರಾಗಿದೆ. ದೆಹಲಿಯ ನಂತರ, ಪಂಜಾಬ್‌ನ ಎಎಪಿ ಸರ್ಕಾರ ಬಹುಮತ ಸಾಬೀತುಪಡಿಸಬೇಕಿದೆ.
ಚಂಡೀಗಢ: ರಾಜ್ಯದಲ್ಲಿ ‘ಆಪರೇಷನ್ ಕಮಲ’ದ (Operation Lotus)ಬಗ್ಗೆ ಎಎಪಿ ಶಾಸಕರ ಆರೋಪದ ಮಧ್ಯೆ ಬಹುಮತ ಸಾಬೀತುಪಡಿಸಲು ಸೆಪ್ಟೆಂಬರ್ 22 ರಂದು ವಿಶ್ವಾಸಮತ ಪರೀಕ್ಷೆ ನಡೆಸಲು ತಮ್ಮ ಸರ್ಕಾರವು ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಿದೆ ಎಂದು ಪಂಜಾಬ್ (Punjab) ಮುಖ್ಯಮಂತ್ರಿ ಭಗವಂತ್ ಮಾನ್ ( Bhagwant Mann) ಸೋಮವಾರ ಹೇಳಿದ್ದಾರೆ. “ಜನರ ನಂಬಿಕೆಗೆ ಪ್ರಪಂಚದ ಯಾವುದೇ ಕರೆನ್ಸಿಯಲ್ಲಿ ಬೆಲೆ ಇಲ್ಲ… ಗುರುವಾರ ಸೆಪ್ಟೆಂಬರ್ 22ರಂದು ಪಂಜಾಬ್ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುವುದು ಅಲ್ಲಿ ವಿಶ್ವಾಸ ಮತ ಸಾಬೀತುಪಡಿಸಲಾಗುವುದು. ಕ್ರಾಂತಿ ಚಿರಾಯುವಾಗಲಿ ಎಂದು ಮಾನ್ ಪಂಜಾಬಿಯಲ್ಲಿ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ಬಿಜೆಪಿಯ ಜನರು ತಲಾ ₹ 25 ಕೋಟಿ ನೀಡುವುದಾಗಿ ತನ್ನ 10 ಶಾಸಕರನ್ನು ಸಂಪರ್ಕಿಸಿದ್ದಾರೆ ಎಂದು ಆಡಳಿತ ಪಕ್ಷವು ಈ ಹಿಂದೆ ಹೇಳಿತ್ತು.ಸೆಪ್ಟೆಂಬರ್ 14 ರಂದು, ಬಿಜೆಪಿ ತನ್ನ ಶಾಸಕರನ್ನು ಬೇಟೆಯಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಆಡಳಿತಾರೂಢ ಎಎಪಿ ರಾಜ್ಯ ಡಿಜಿಪಿಗೆ ದೂರು ನೀಡಿದ ನಂತರ ಪಂಜಾಬ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ರಾಜ್ಯದ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಮತ್ತು ಪಕ್ಷದ ಶಾಸಕರು ಡಿಜಿಪಿ ಗೌರವ್ ಯಾದವ್ ಅವರನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದರು.
ਲੋਕਾਂ ਦੇ ਵਿਸ਼ਵਾਸ ਦੀ ਦੁਨੀਆਂ ਦੀ ਕਿਸੇ ਕਰੰਸੀ ਵਿੱਚ ਕੋਈ ਕੀਮਤ ਨਹੀਂ ਹੁੰਦੀ …22 September ਦਿਨ ਵੀਰਵਾਰ ਨੂੰ ਪੰਜਾਬ ਵਿਧਾਨ ਸਭਾ ਦਾ ਸਪੈਸ਼ਲ ਸ਼ੈਸ਼ਨ ਬੁਲਾ ਕੇ ਵਿਸ਼ਵਾਸ ਮਤਾ ਪੇਸ਼ ਕਰਕੇ ਕਾਨੂੰਨੀ ਤੌਰ ‘ਤੇ ਇਹ ਗੱਲ ਸਾਬਤ ਕਰ ਦਿੱਤੀ ਜਾਵੇਗੀ…ਇਨਕਲਾਬ ਜ਼ਿੰਦਾਬਾਦ..! pic.twitter.com/VM2zA1upDP
— Bhagwant Mann (@BhagwantMann) September 19, 2022
ರಾಜ್ಯದ ಕೆಲವು ಶಾಸಕರು ನೀಡಿದ ದೂರಿನ ಮೇರೆಗೆ ಪಂಜಾಬ್ ಪೊಲೀಸರು ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 8 ಮತ್ತು ಸೆಕ್ಷನ್ 171-ಬಿ ಮತ್ತು 120-ಬಿ ಅಡಿಯಲ್ಲಿ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ ಎಂದು ರಾಜ್ಯ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ದೆಹಲಿ ಮತ್ತು ಪಂಜಾಬ್‌ನ ಬಿಜೆಪಿ ಏಜೆಂಟ್‌ಗಳು ಮತ್ತು ಕಾರ್ಯಕರ್ತರು ಪಂಜಾಬ್‌ನಲ್ಲಿ ಸರ್ಕಾರವನ್ನು ಉರುಳಿಸಲು ಎಎಪಿಯ 35 ಶಾಸಕರನ್ನು ಒಡೆಯಲು ಪ್ರಯತ್ನಿಸಿದ್ದಾರೆ ಎಂದು ಚೀಮಾ ಹೇಳಿದರು. ಕೇಂದ್ರೀಯ ಸಂಸ್ಥೆಗಳಾದ ಸಿಬಿಐ ಮತ್ತು ಇಡಿಯನ್ನು ಬಳಸಿಕೊಂಡು ವಿವಿಧ ರಾಜ್ಯಗಳಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸುವ ಮೂಲಕ ಬಿಜೆಪಿಯು ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಆದರೆ ಪಂಜಾಬ್‌ನಲ್ಲಿ ಆಪರೇಷನ್ ಕಮಲ ಸಂಪೂರ್ಣ ವಿಫಲವಾಗಿದೆ ಎಂದು ಚೀಮಾ ಹೇಳಿದ್ದಾರೆ. ಇತರ ರಾಜ್ಯಗಳಲ್ಲಿ ಎಎಪಿಯ ಹೆಚ್ಚುತ್ತಿರುವ ಗ್ರಾಫ್‌ನಿಂದ ಬಿಜೆಪಿಗೆ ಬೆದರಿಕೆ ಇದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.
ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರನ್ನು ಖರೀದಿಸುವ ಬಿಜೆಪಿಯ ತಂತ್ರ ವಿಫಲವಾಗಲಿದೆ ಎಂದು ಮಾನ್ ಹೇಳಿದ್ದಾರೆ ಈ ಜನರು (ಬಿಜೆಪಿ) ಮತಗಳನ್ನು ಪಡೆಯದಿದ್ದರೆ, ಅವರು ಶಾಸಕರನ್ನು ಖರೀದಿಸುವ ಮಾರ್ಗವನ್ನು ಆರಿಸಿಕೊಳ್ಳುತ್ತಾರೆ ಎಎಪಿಯ ಶಾಸಕರು ತಮ್ಮ ಭೂಮಿ ಮತ್ತು ಪಂಜಾಬ್‌ಗೆ ನಿಷ್ಠರಾಗಿರುತ್ತಾರೆ ಎಂಬ ನಂಬಿಕೆಯನ್ನು ಮಾನ್ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ, ಪಂಜಾಬ್ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಎಎಪಿ ವಿಫಲವಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಪಕ್ಷವು ಈಗ ಬಿಜೆಪಿ ವಿರುದ್ಧ ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರ ಗಮನವನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಬಿಜೆಪಿ ಪಕ್ಷವು ಎಎಪಿ ಶಾಸಕರನ್ನು ಬಿಜೆಪಿಗೆ ಸೇರುವಂತೆ ಮಾಡಲು ಹಣ ನೀಡುತ್ತಿರುವ ಬಗ್ಗೆ ಎಎಪಿ ಮಾಡಿರುವ ಆರೋಪದ ಕುರಿತು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಿಂದ ತನಿಖೆಗೆ ಬಿಜೆಪಿ ಒತ್ತಾಯಿಸಿದೆ.
Published On - 3:00 pm, Mon, 19 September 22