Breaking News: ಮುಂಬೈನ ಅಂಧೇರಿಯಲ್ಲಿ ಭಾರೀ ಬೆಂಕಿ

ಮುಂಬೈನ ಅಂಧೇರಿಯಲ್ಲಿ ಭಾರೀ ಅಗ್ನಿ ಅವಘಡ

Breaking News: ಮುಂಬೈನ ಅಂಧೇರಿಯಲ್ಲಿ ಭಾರೀ ಬೆಂಕಿ
Massive fire accident in Mumbai's Andheri
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jul 29, 2022 | 8:14 PM

ಇಂದು (ಶುಕ್ರವಾರ) ಪಶ್ಚಿಮ ಅಂಧೇರಿಯಲ್ಲಿರುವ (Andheri West) ಲಿಂಕ್ ರೋಡ್ ನಲ್ಲಿ ಸ್ಟಾರ್ ಬಜಾರ್ ಪಕ್ಕ   ಅಗ್ನಿ ಅವಘಡ (Massive Fire) ಸಂಭವಿಸಿದೆ. ಸಂಜೆ 4.30ರ ಹೊತ್ತಿಗೆ ಭಾರೀ ಬೆಂಕಿ ಕಾಣಿಸಿಕೊಂಡಿದ್ದು 10 ಅಗ್ನಿಶಾಮಕ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿವೆ. 1000 ಸ್ಕ್ವೇರ್ ಫೀಟ್ ಪ್ರದೇಶದಲ್ಲಿ ದಟ್ಟಹೊಗೆಯೊಂದಿಗೆ ಬೆಂಕಿ ಉರಿದಿದ್ದು, ಇಲ್ಲಿಯವರೆಗೆ ಯಾವುದೇ ಸಾವು ನೋವು ವರದಿ ಆಗಿಲ್ಲ ಎಂದು ಮುಂಬೈ ಅಗ್ನಿಶಾಮಕ ದಳ ಹೇಳಿರುವುದಾಗಿ ಎಎನ್ಐ ಟ್ವೀಟ್ ಮಾಡಿದೆ.

ಸಂಜೆ 4.30ರ ಸುಮಾರಿಗೆ ಅಂಧೇರಿ ಕ್ರೀಡಾ ಸಂಕೀರ್ಣದ ಪಕ್ಕದಲ್ಲಿರುವ ಚಿತ್ರಕೂಟ ಮೈದಾನದಲ್ಲಿ ಅಳವಡಿಸಲಾಗಿದ್ದ ಫಿಲ್ಮ್ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ನಾಗರಿಕ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಈ ಮೊದಲು, ಆ ಪ್ರದೇಶದ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದರು, ಆದರೆ ನಂತರ ಸಿನಿಮಾ  ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅವರು ಖಚಿತಪಡಿಸಿದರು.

Published On - 4:58 pm, Fri, 29 July 22