BL Santosh Poster: ಹೈದರಾಬಾದ್​ನ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ ಪೋಸ್ಟರ್

BRS-BJP Poster War: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್​ ಹೈದರಾಬಾದಿನಾದ್ಯಂತ ರಾರಾಜಿಸುತ್ತಿದೆ. ಇನ್ನೊಂದೆಡೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ.

BL Santosh Poster: ಹೈದರಾಬಾದ್​ನ ಬೀದಿ ಬೀದಿಗಳಲ್ಲಿ ರಾರಾಜಿಸುತ್ತಿವೆ ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ ಪೋಸ್ಟರ್
ಬಿ.ಎಲ್ ಸಂತೋಷ್

Updated on: Mar 16, 2023 | 10:24 AM

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್​ ಹೈದರಾಬಾದಿನಾದ್ಯಂತ ರಾರಾಜಿಸುತ್ತಿದೆ. ಇನ್ನೊಂದೆಡೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ. ಕವಿತಾ ಅವರು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ವಿರುದ್ಧ ತೆಲಂಗಾಣ ಆಡಳಿತಾರೂಢ ಭಾರತ್ ರಾಷ್ಟ್ರೀಯ ಸಮಿತಿ ಟ್ವಿಟ್ಟರ್ ವಾರ್ ನಡೆಸಿದೆ.

ಹೈದರಾಬಾದ್​ನ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶಾಸಕರನ್ನು ಖರೀದಿಸುವಲ್ಲಿ ಪರಿಣಿತರಾಗಿರುವ ಬಿಎಲ್ ಸಂತೋಷ್ ಬೇಕಾಗಿದ್ದಾರೆ ಎನ್ನುವ ಪೋಸ್ಟರ್ ಹಾಕಲಾಗಿದೆ. ಕೇವಲ ಬಿ.ಎಲ್. ಸಂತೋಷ್ ಅವರ ಬಗ್ಗೆ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿ.ಎಲ್. ಸಂತೋಷ್ ಅವರನ್ನು ಹುಡುಕಿಕೊಟ್ಟರೆ ಅದಕ್ಕೆ ಬಹುಮಾನವಾಗಿ 15,00,000 ರೂ.ಗಳ ಭರವಸೆಯನ್ನು ಈಡೇರಿಸಲಾಗುವುದು ಎಂದು ಹೇಳಿದೆ.

ಮತ್ತಷ್ಟು ಓದಿ:Delhi Liquor Case: ಕೆ.ಕವಿತಾಗೆ ಇಡಿ ಸಮನ್ಸ್‌ ತಡೆ ನೀಡಲು ನಿರಾಕರಿಸಿದ ಸುಪ್ರೀಂ, ಮಾ. 24ಕ್ಕೆ ಅರ್ಜಿ ವಿಚಾರಣೆ

ಪೋಸ್ಟರ್‌ಗಳಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ಕ್ರಿಮಿನಲ್ ಮತ್ತು ವಾಂಟೆಡ್ ಎಂದು ಬಿಂಬಿಸಲಾಗಿದೆ, ಹೈದರಾಬಾದ್‌ನ ಎರಡು ವಿಭಿನ್ನ ಸ್ಥಳಗಳಲ್ಲಿ ಪೋಸ್ಟರ್‌ಗಳು ಕಾಣಿಸಿಕೊಂಡವು.

ಒಂದು ವಾರದ ಹಿಂದಷ್ಟೇ ಬಿಆರ್​ಎಸ್ ನಗರದಲ್ಲಿ ರೈಡ್ ಡಿಟರ್ಜೆಂಟ್ಸ್​ ಅನ್ನು ಉಲ್ಲೇಖಿಸುವ ಪೋಸ್ಟರ್​ಗಳನ್ನು ಹಾಕಿತ್ತು. ಅದರ ಮೂಲಕ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾವಚಿತ್ರಗಳನ್ನು ಅಂಟಿಸಲಾಗಿತ್ತು.

ಈ ಹಿಂದೆ ಬಿಆರ್‌ಎಸ್ ವಿವಾದಾತ್ಮಕ ಪೋಸ್ಟರ್ ಮೂಲಕ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿತ್ತು. ವಾಶಿಂಗ್ ಪೌಡರ್ ನಿರ್ಮಾ ಎಂಬ ಶೀರ್ಷಿಕೆಯ ಪೋಸ್ಟರ್‌ನಲ್ಲಿ ಹೈದರಾಬಾದ್‌ನಲ್ಲಿ ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡ ನಾಯಕರ ಹೆಸರುಗಳಿದ್ದವು, ಮಾರ್ಚ್ 12 ರಂದು ನಗರದಲ್ಲಿ ನಡೆದ ಸಿಐಎಸ್‌ಎಫ್ ರೈಸಿಂಗ್ ಡೇ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಿದ್ದಾಗ ಬಿಆರ್‌ಎಸ್ ಈ ಪೋಸ್ಟರ್ ಅನ್ನು ಹಾಕಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us