ಲೋಕಸಭೆ ಚುನಾವಣೆ ನಂತರ ತೆಲಂಗಾಣದ ರೇವಂತ್ ಸರ್ಕಾರ ಉರುಳಿಸಲು ಸಂಚು ನಡೆದಿದೆ -ಬಂಡಿ ಸಂಜಯ್ ಸಂಚಲನ ಹೇಳಿಕೆ

|

Updated on: Jan 16, 2024 | 1:31 PM

Bandi Sanjay: ಲೋಕಸಭೆ ಚುನಾವಣೆ ನಂತರ ತೆಲಂಗಾಣದ ರೇವಂತ್ ಸರ್ಕಾರ ಉರುಳಿಸಲು ಸಂಚು ನಡೆದಿದೆ. ಕೆಸಿಆರ್ ಕಡೆಯಿಂದ ಕಾಂಗ್ರೆಸ್ ಶಾಸಕರ ಖರೀದಿಗೆ ಯತ್ನ ನಡೆದಿದೆ ಎಂಬ ಬಿಜೆಪಿ ಸಂಸದ ಬಂಡಿ ಸಂಜಯ್ ಹೇಳಿಕೆ ಇದೀಗ ತೆಲಂಗಾಣ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಲೋಕಸಭೆ ಚುನಾವಣೆ ನಂತರ ತೆಲಂಗಾಣದ ರೇವಂತ್ ಸರ್ಕಾರ ಉರುಳಿಸಲು ಸಂಚು ನಡೆದಿದೆ -ಬಂಡಿ ಸಂಜಯ್ ಸಂಚಲನ ಹೇಳಿಕೆ
ಲೋಕಸಭೆ ಚುನಾವಣೆ ನಂತರ ತೆಲಂಗಾಣದ ರೇವಂತ್ ಸರ್ಕಾರ ಉರುಳಿಸಲು ಸಂಚು ನಡೆದಿದೆ
Follow us on

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಕೆಸಿಆರ್ ಪಿತೂರಿ ನಡೆಸುತ್ತಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಸಂಸದ ಬಂಡಿ ಸಂಜಯ್ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯ ನಂತರ ರೇವಂತ್ ರೆಡ್ಡಿ ಸರ್ಕಾರ ಯಾವಾಗ ಬೇಕಾದರೂ ಪತನವಾಗುವ ಅಪಾಯವಿದೆ ಎಂದಿದ್ದಾರೆ. ಕೆಸಿಆರ್ ಅವರು ಈ ನಿಟ್ಟಿನಲ್ಲಿ ಗುಪ್ತ್​​ ಗುಪ್ತ್​​​ ಆಗಿ ವ್ಯವಹರಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಇದರಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಷಡ್ಯಂತ್ರಗಳು ಅವರೊಂದಿಗೆ ನಡೆಯುತ್ತಿವೆ ಎಂದು ಬಂಡಿ ಸಂಜಯ್ ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಕೆಸಿಆರ್ ಭಾರಿ ಹಣ ನೀಡಿ, ಅವರನ್ನು ತಮ್ಮತ್ತ ಪರಿವರ್ತಿಸಿಕೊಂಡಿದ್ದಾರೆ ಎಂದು ಬಂಡಿ ಸಂಜಯ್ ಆರೋಪಿಸಿದರು. ಕರೀಂನಗರದಲ್ಲಿ ಬಂಡಿ ಸಂಜಯ್ ಈ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಷಡ್ಯಂತ್ರದ ಬಗ್ಗೆ ಪಕ್ಷದ ನಾಯಕರಿಗೆ ತಿಳಿದಿಲ್ಲದಿದ್ದರೂ, ಅದು ಹಸಿ ಸತ್ಯ ಎಂದು ಸಂಸದ ಬಂಡಿ ಸಂಜಯ್ ಹೇಳಿದ್ದಾರೆ. ಬಿಜೆಪಿ-ಬಿಆರ್​​ಎಸ್ ಎರಡೂ ಒಂದೇ ಎಂಬ ಅಸತ್ಯ ಪ್ರಚಾರವನ್ನು ನಿಲ್ಲಿಸಬೇಕು. ಕೆಸಿಆರ್ ಷಡ್ಯಂತ್ರಗಳಿಂದ ನಿಮ್ಮ ಸರ್ಕಾರವನ್ನು ಉಳಿಸಿಕೊಳ್ಳಿ ಎಂದು ಕಾಂಗ್ರೆಸ್​​ ನಾಯಕರಿಗೆ ಬಂಡಿ ಸಂಜಯ್ ಕುಮಾರ್ ಸಲಹೆ ನೀಡಿದರು.

ಇದೇ ವೇಳೆ ಅಯೋಧ್ಯೆಯಲ್ಲಿ ರಾಮನ ಚಿತ್ರಣವನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ ಎಂಬ ಆರೋಪವನ್ನು ಸಂಸದ ಬಂಡಿ ಸಂಜಯ್ ತಳ್ಳಿಹಾಕಿದರು. ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೂ ಯಾದಾದ್ರಿಯ ಪುನರ್ ನಿರ್ಮಾಣಕ್ಕೂ ಬಹಳ ವ್ಯತ್ಯಾಸವಿದೆ ಎಂದು ಹೇಳಿದರು. ಕೆಸಿಆರ್ ಮಾಡಿದಂತೆ ಮೋದಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿಲ್ಲ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾಗಬಹುದು ಎಂಬ ಬಂಡಿ ಸಂಜಯ್ ಹೇಳಿಕೆಗಳು ಇದೀಗ ರಾಜ್ಯಾದ್ಯಂತ ಸಂಚಲನ ಮೂಡಿಸುತ್ತಿವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಮಾಜಿ ಮುಖ್ಯಮಂತ್ರಿ ಕೆಸಿಆರ್ ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಸಂಜಯ್ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರನ್ನು ಕೆಸಿಆರ್ ಖರೀದಿಸಲು ಯತ್ನಿಸುತ್ತಿದ್ದು, ಆ ಪಕ್ಷದ ಶಾಸಕರು ಮಾಜಿ ಸಿಎಂ ಸಂಪರ್ಕದಲ್ಲಿದ್ದಾರೆ ಎಂದು ಬಂಡಿ ಸಂಜಯ್ ಪ್ರತಿಕ್ರಿಯಿಸಿದ್ದಾರೆ. ಸಂಸತ್ ಚುನಾವಣೆಯ ನಂತರ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳುವ ಮೂಲಕ ಕೆಸಿಆರ್ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಬಂಡಿ ಸಂಜಯ್ ಆರೋಪಿಸಿದರು.

ಮತ್ತಷ್ಟು ಓದಿ: Uttar Pradesh Politics: ಲೋಕಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲಿದೆ ಬಿಎಸ್​ಪಿ, ಮೈತ್ರಿ ಇಲ್ಲ ಎಂದ ಮಾಯಾವತಿ

ಕೆಸಿಆರ್ ಷಡ್ಯಂತ್ರಗಳ ಕೇರಾಫ್ ಆಗಿದ್ದಾರೆ ಎಂದ ಸಂಜಯ್, ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಹೋರಾಟವನ್ನು ಆ ನಂತರ ಮಾಡಿಕೊಳ್ಳಬಹುದು ಅದರೆ ಮೊದಲು ಬಿಆರ್‌ಎಸ್ ಅನ್ನು ಹತ್ತಿಕ್ಕಲು ಒಟ್ಟಾಗಿ ಬನ್ನಿ ಎಂದು ಸಂಜಯ್ ಕರೆ ನೀಡಿದ್ದಾರೆ. ಕೆಸಿಆರ್ ಚಲನವಲನಗಳ ಮೇಲೆ ನಿಗಾ ಇಡುವಂತೆ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಅವರು ಸಲಹೆ ನೀಡಿದ್ದಾರೆ. ತೆಲಂಗಾಣದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸಬೇಕು ಎಂದು ಅವರು ಕರೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನೀಡಿರುವ ಭರವಸೆಗಳು ಜಾರಿಯಾಗಬೇಕಾದರೂ ಬಿಜೆಪಿ ಸಂಸದರನ್ನು ಗೆಲ್ಲಿಸಬೇಕು ಎಂದರು.

ಯಾದಾದ್ರಿಯನ್ನು ವ್ಯಾಪಾರ ಕೇಂದ್ರವನ್ನಾಗಿ ಮಾಡಿ ದೇವಸ್ಥಾನದಲ್ಲಿ ತನ್ನ ಆಕೃತಿಯನ್ನು ಕೆತ್ತಿಸಿದವರು ಕೆಸಿಆರ್ ಎಂದು ಬಂಡಿ ಸಂಜಯ್ ವಾಗ್ದಾಳಿ ನಡೆಸಿದರು. ಪ್ರಧಾನಿ ಮೋದಿ ಅಯೋಧ್ಯೆಯಲ್ಲಿ ತಮ್ಮ ಚಿತ್ರ ಕೆತ್ತಿಸಿಕೊಳ್ಳುವುದಾಗಲಿ ಅಥವಾ ಆ ಪ್ರದೇಶದಲ್ಲಿ ಭೂಮಿ ಖರೀದಿಸುವುದಾಗಲಿ ಮಾಡಿಲ್ಲ. ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳು ಧಾರ್ಮಿಕ ಕೇಂದ್ರವನ್ನು ವಿವಾದಾಸ್ಪದಗೊಳಿಸುತ್ತಿವೆ ಎಂದು ಬಂಡಿ ಸಂಜಯ್ ಆಕ್ರೋಶ ವ್ಯಕ್ತಪಡಿಸಿದರು. ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಏಕೆ ಬರುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡರನ್ನು ಅವರು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅಂದು ಕೆಸಿಆರ್ ಭದ್ರಾದ್ರಿ ರಾಮಯ್ಯನ ಕಲ್ಯಾಣ ಕಾರ್ಯಕ್ರಮಗಳಿಗೆ ಮುಂದಾಗಲಿಲ್ಲ. ವೇಮುಲವಾಡ ಅಭಿವೃದ್ಧಿಗೆ ನೂರಾರು ಕೋಟಿ ಮೀಸಲಿಡುವುದಾಗಿ ಹೇಳಿದ್ದರೂ ಅದು ಜಾರಿಯಾಗಿಲ್ಲ ಎಂದು ಬಂಡಿ ಸಂಜಯ್ ಕಿಡಿಕಾರಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 1:30 pm, Tue, 16 January 24