ಗಡಿ ಭಾಗದಲ್ಲಿ ಮಧ್ಯರಾತ್ರಿ ಡ್ರೋಣ್​ ಹಾರಾಟ; ಬಿಎಸ್​ಎಫ್​ ಯೋಧರಿಂದ ಗುಂಡಿನ ದಾಳಿ

ಅಮೃತ್​ಸರ್​​ ವಲಯದಲ್ಲಿ ಅಕ್ಟೋಬರ್​ 19-20ರ ನಡುವಿನ ರಾತ್ರಿ ಇದೇ ತರಹದ ಡ್ರೋಣ್​ವೊಂದು ಪತ್ತೆಯಾಗಿತ್ತು. ಆಗಲೂ ಸಹ ಬಿಎಸ್​ಎಫ್​ ಸೈನಿಕರು ಅದರೆಡೆಗೆ ಗುಂಡಿನ ದಾಳಿ ನಡೆಸಿದ್ದರು.

ಗಡಿ ಭಾಗದಲ್ಲಿ ಮಧ್ಯರಾತ್ರಿ ಡ್ರೋಣ್​ ಹಾರಾಟ; ಬಿಎಸ್​ಎಫ್​ ಯೋಧರಿಂದ ಗುಂಡಿನ ದಾಳಿ
ಡ್ರೋಣ್​​ ಸಾಂಕೇತಿಕ ಚಿತ್ರ
Follow us
TV9 Web
| Updated By: Lakshmi Hegde

Updated on: Oct 28, 2021 | 11:23 AM

ಪಂಜಾಬ್​​​ನ ಅಮೃತ್​ಸರ್​​ನ ಭಾರತ-ಪಾಕಿಸ್ತಾನ ಗಡಿ (India-Pakistan Border)ಯಲ್ಲಿ ಇಂದು ಬೆಳಗ್ಗೆ ಡ್ರೋಣ್​​ವೊಂದು ಹಾರಾಟ ನಡೆಸಿತ್ತು. ಶಹ್​ಪುರ್​​ ಗಡಿಯ ಔಟ್​​ಪೋಸ್ಟ್​​​ ಬಳಿ ಮಧ್ಯರಾತ್ರಿ 12.30ರ ಹೊತ್ತಿಗೆ ಕಾಣಿಸಿಕೊಂಡ ಡ್ರೋಣ್​​ಗೆ ಗಡಿ ಭದ್ರತಾ ಪಡೆ (BSF) (BSF)ಯ 73ನೇ ಬೆಟಾಲಿಯನ್​​​ ಯೋಧರು ಗುಂಡು ಹಾರಿಸಿದ್ದಾರೆ. ಇವರು ಒಂದೇ ಸಮ ಗುಂಡಿನ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಡ್ರೋಣ್​ ಪಾಕಿಸ್ತಾನದತ್ತ ಹಾರಿಹೋಗಿದೆ.   

ಅಮೃತ್​ಸರ್​​ ವಲಯದಲ್ಲಿ ಅಕ್ಟೋಬರ್​ 19-20ರ ನಡುವಿನ ರಾತ್ರಿ ಇದೇ ತರಹದ ಡ್ರೋಣ್​ವೊಂದು ಪತ್ತೆಯಾಗಿತ್ತು. ಆಗಲೂ ಸಹ ಬಿಎಸ್​ಎಫ್​ ಸೈನಿಕರು ಅದರೆಡೆಗೆ ಗುಂಡಿನ ದಾಳಿ ನಡೆಸಿದ್ದರು. ಆ ಡ್ರೋಣ್​ ಹಾರಾಡಿದ ಜಾಗದಲ್ಲಿ ಪರಿಶೀಲನೆ ನಡೆಸಿದಾಗ ಅಲ್ಲಿ ಒಂದು ಕೆಜಿ ಹೆರೋಯಿನ್​ ಮತ್ತು ಅದಕ್ಕೆ ಸಿಕ್ಕಿಸಿಡಲಾಗಿದ್ದ ಕಬ್ಬಿಣದ ರಿಂಗ್​​ವೊಂದು ಪತ್ತೆಯಾಗಿತ್ತು. ಇತ್ತೀಚೆಗೆ ಗಡಿ ಭಾಗಗಳಲ್ಲಿ ಡ್ರೋಣ್​​ಗಳು ಪದೇಪದೆ ಹಾರಾಟ ನಡೆಸುತ್ತಿವೆ. ಮೊಟ್ಟ ಮೊದಲು ಜೂ.27ರಂದು ಜಮ್ಮುವಿನ ಭಾರತೀಯ ವಾಯುಪಡೆ ಸ್ಟೇಶನ್​​​ನಲ್ಲಿ ಡ್ರೋಣ್​ ದಾಳಿ ಆಯಿತು. ಎರಡು ಡ್ರೋಣ್​​​ಗಳು ಅಲ್ಲಿ ಬಾಂಬ್​ ಎಸೆದ ಪರಿಣಾಮ ಇಬ್ಬರು ಸಿಬ್ಬಂದಿಗೆ ಗಾಯವಾಗಿತ್ತು.  ಹಾಗೇ, ವಾಯುನೆಲೆಯ ಒಂದು ಭಾಗವೂ ಜಖಂಗೊಂಡಿತ್ತು.

ಇದೀಗ ಜಮ್ಮು-ಕಾಶ್ಮೀರ ಸೇರಿ ಗಡಿ ಭಾಗಗಳಲ್ಲಿ ಡ್ರೋಣ್​​ಗಳ ಹಾರಾಟ ಹೆಚ್ಚುತ್ತಿರುವುದರಿಂದ ಅವುಗಳ ಮೇಲೆ ಕಣ್ಣಿಡಲೆಂದೇ ಹೆಚ್ಚಿನ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಶ್ರೀನಗರ ಮತ್ತು ಜಮ್ಮು ಏರ್​​ ಫೋರ್ಸ್​ ಸ್ಟೇಶನ್​​ಗಳಲ್ಲಿ ಕೂಡ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (NSG)ಯನ್ನು ನಿಯೋಜಿಸಲಾಗಿದೆ. ಹೀಗೆ ಪಾಕಿಸ್ತಾನದಿಂದ ಬರುವ ಡ್ರೋಣಗಳು ಗಡಿ ಭಾಗಗಳಲ್ಲಿ ಉಗ್ರರಿಗೆ ಮಾದಕ ದ್ರವ್ಯ, ಮಾರಕ ಅಸ್ತ್ರಗಳ ಸರಬರಾಜು ಮಾಡುತ್ತಿರುವ ಬಗ್ಗೆಯೂ ವರದಿಯಾಗಿದೆ.

ಇದನ್ನೂ ಓದಿ: ಪುರಾಣ ಪ್ರಸಿದ್ಧ ಹಾಸನಾಂಬೆ ದರ್ಶನೋತ್ಸವ ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

KL Rahul: ಮೆಗಾ ಹರಾಜಿಗೂ ಮುನ್ನ ಬಿಗ್ ಶಾಕ್: ಕೆಎಲ್ ರಾಹುಲ್ ಬಗ್ಗೆ ಪಂಜಾಬ್ ಕಿಂಗ್ಸ್​ನಿಂದ ಅಚ್ಚರಿ ಹೇಳಿಕೆ