Pakistani Intruder: ಪಂಜಾಬ್​ನ ಅಮೃತಸರದಲ್ಲಿ ಪಾಕಿಸ್ತಾನಿ ಒಳನುಸುಳುಕೋರನ ಬಂಧನ

|

Updated on: Mar 09, 2023 | 11:28 AM

ಗಡಿ ಭದ್ರತಾ ಪಡೆ(BSF)ಯು ಪಂಜಾಬ್​ನ ಅಮೃತಸರದ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಬಂಧಿಸಿದೆ.

Pakistani Intruder: ಪಂಜಾಬ್​ನ ಅಮೃತಸರದಲ್ಲಿ ಪಾಕಿಸ್ತಾನಿ ಒಳನುಸುಳುಕೋರನ ಬಂಧನ
ಪಾಕಿಸ್ತಾನಿ ಒಳನುಸುಳುಕೋರ
Image Credit source: ANI
Follow us on

ಗಡಿ ಭದ್ರತಾ ಪಡೆ(BSF)ಯು ಪಂಜಾಬ್​ನ ಅಮೃತಸರದ ಗಡಿಯಲ್ಲಿ ಪಾಕಿಸ್ತಾನಿ ಒಳನುಸುಳುಕೋರನನ್ನು ಬಂಧಿಸಿದೆ. ಅಮೃತಸರ ಸೆಕ್ಟರ್​ನ ರಜತಾಲ್​ನಲ್ಲಿರುವ ಬಾರ್ಡರ್ ಔಟ್ ಪೋಸ್ಟ್​ನಲ್ಲಿ ಮಾರ್ಚ್​ 8ರ ಮಧ್ಯರಾತ್ರಿ ಪಾಕಿಸ್ತಾನದ ಕಡೆಯಿಂದ ಒಳನುಸುಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಬಿಎಸ್​ಎಫ್ ಹೇಳಿಕೆಯಲ್ಲಿ ತಿಳಿಸಿದೆ. ಕರ್ತವ್ಯ ನಿರತ ಬಿಎಸ್​ಎಫ್ ಪಡೆಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಆತನನ್ನು ಬಂಧಿಸಲಾಗಿದೆ.

ಪ್ರಾಥಮಿಕ ತನಿಖೆಯ ವೇಳೆಗೆ ಅವರು ಬಾಂಗ್ಲಾದೇಶದ ಪ್ರಜೆ ಎಂದು ತಿಳಿಸಿದ್ದಾರೆ, ಅವರ ವಿಚಾರಣೆಯನ್ನು ಮುಂದುವರೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.

ಮತ್ತಷ್ಟು ಓದಿ: 2022ರಲ್ಲಿ ಅಮೃತಸರದಲ್ಲಿ ಹೊಡೆದುರುಳಿಸಿದ ಪಾಕ್ ಡ್ರೋನ್ ಬಂದಿದ್ದು ಚೀನಾದಿಂದ: ಬಿಎಸ್ಎಫ್

2021ರಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಜತೆಗಿನ ಅಂತಾರಾಷ್ಟ್ರೀಯ ಗಡಿಗಳಲ್ಲಿ ದಾಖಲೆ ಸಂಖ್ಯೆಯಲ್ಲಿ ಒಳನುಸುಳುವಿಕೆ ಯತ್ನಗಳು ನಡೆದಿತ್ತು.

2020ರಲ್ಲಿ 1252, 2019ರಲ್ಲಿ 1408, 2018ರಲ್ಲಿ 1173 ಹಾಗೂ 2017ರಲ್ಲಿ 1251 ಒಳನುಸುಳುಕೋರರನ್ನು ಬಂಧಿಸಲಾಗಿದೆ. ಇದರ ಜತೆಗೆ 2020ರಲ್ಲಿ 16, 2019ರಲ್ಲಿ 6 ಹಾಗೂ 2018ರಲ್ಲಿ 8 ಹಾಗೂ 2017ರಲ್ಲಿ 11 ಮಂದಿ ಒಳನುಸುಳುಕೋರರನ್ನು ಹತ್ಯೆಗೈಯಲಾಗಿತ್ತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ