ಉತ್ತರ ಭಾರತದಲ್ಲಿ ಬಹುತೇಕ ಸ್ಥಳಗಳಲ್ಲಿ ಶಾಖದ ಅಲೆ ಮುಂದುವರೆದಿದೆ. ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ರಾಜಸ್ಥಾನವಂತೂ ಮರುಭೂಮಿ ಇರುವುದರಿಂದ ಬೇರೆಲ್ಲಾ ರಾಜ್ಯಗಳಿಗಿಂತ ಹೆಚ್ಚು ಬಿಸಿಲನ್ನು ಕಾಣುತ್ತಿದೆ. ರಾಜಸ್ಥಾನದಲ್ಲಿ ಬಿಎಸ್ಎಫ್ ಯೋಧರೊಬ್ಬರು ಮರಳಿನಲ್ಲಿ ಹಪ್ಪಳ ಹುರಿಯುತ್ತಿರುವ ದೃಶ್ಯ ಕಂಡುಬಂದಿದೆ. ಹಪ್ಪಳ ಹುರಿದು ಬಿಸಿಲ ಧಗೆ ಯಾವ ಪ್ರಮಾಣದಲ್ಲಿ ಇದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಬಿಕಾನೇರ್ ತೀವ್ರ ಶಾಖದ ಅಲೆಯಿಂದ ತತ್ತರಿಸುತ್ತಿದೆ ಮತ್ತು ತಾಪಮಾನವು 45 ಡಿಗ್ರಿ ಸೆಲ್ಸಿಯಸ್ ದಾಟಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಬುಧವಾರದಂದು ಗರಿಷ್ಠ ತಾಪಮಾನ 46.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುಂದಿನ ಮೂರು ದಿನಗಳ ಕಾಲ ಅಲ್ವಾರ್, ಭರತ್‌ಪುರ್, ದೌಸಾ, ಧೋಲ್‌ಪುರ್, ಜೈಪುರ್, ಜುಂಜುನು, ಕರೌಲಿ, ಸಿಕರ್, ಬಾರ್ಮರ್, ಬಿಕಾನೇರ್, ಚುರು, ಹನುಮಾನ್‌ಗಢ, ಜೈಸಲ್ಮೇರ್, ಜೋಧ್‌ಪುರ, ನಾಗೌರ್ ಮತ್ತು ಗಂಗಾನಗರದಲ್ಲಿ ತೀವ್ರ ಬಿಸಿಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯು ದೆಹಲಿ ಮತ್ತು ರಾಜಸ್ಥಾನ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಿಗೆ ಶಾಖ ಅಲೆಯ ರೆಡ್ ಅಲರ್ಟ್ ಘೋಷಿಸಲಾಗಿದೆ. ಚಳಿ, ಇರಲಿ ಬಿಸಿಲಿರಲಿ ನಮ್ಮ ಸೇನೆಯು ಎಂಥಾ ಹವಾಮಾನದಲ್ಲೂ ನಮ್ಮನ್ನು ಸುರಕ್ಷಿತವಾಗಿರಿಸಲು ಕಷ್ಟಪಡುತ್ತಿರುತ್ತಾರಲ್ಲಾ ಅದಕ್ಕೆ ಧನ್ಯವಾದ ಹೇಳಲೇಬೇಕು ಎಂದು ವಿಡಿಯೋ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿದ್ದಾರೆ.
ಮತ್ತಷ್ಟು ಓದಿ: ಕಾರು ಅಪಘಾತ; ಗಾಯಗೊಂಡ ಸ್ಥಿತಿಯಲ್ಲೇ ಸೆಲ್ಫಿಗೆ ಪೋಸ್ ನೀಡಿದ ಯುವತಿಯರು
ಇದೆಲ್ಲವೂ ಜಾಗತಿಕ ತಾಪಮಾನ ಏರಿಕೆಯಿಂದಾಗಿ ನಡೆಯುತ್ತಿದೆ, ಇಡೀ ಜಗತ್ತು ಹವಾಮಾನ ಬದಲಾವಣೆಯ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗುತ್ತದೆ ಇಲ್ಲದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ
Papad on the sand. Possible? Welcome to Rajasthan, 47°C.#Heatwave https://t.co/YkjU9L7Zro pic.twitter.com/Plbav8ex1N
— Mumbai Rains (@rushikesh_agre_) May 22, 2024
ಹವಾಮಾನ ಇಲಾಖೆಯು ಮೇ 25 ರವರೆಗೆ ಈ ರಾಜ್ಯಗಳಲ್ಲಿ ಬಿಸಿಗಾಳಿಯಿಂದ ತೀವ್ರ ಬಿಸಿಗಾಳಿ ಪರಿಸ್ಥಿತಿಗಳಿಗೆ ಮುನ್ಸೂಚನೆ ನೀಡಿದೆ. ರಾಜಸ್ಥಾನದ ಪಶ್ಚಿಮ ವಲಯದ ಗಂಗಾನಗರ, ಬಿಕಾನೇರ್, ಜೈಸಲ್ಮೇರ್, ಬಾರ್ಮರ್ನಲ್ಲಿ ಸೆಕೆ ಹೆಚ್ಚು. ಈ ಪ್ರದೇಶದಲ್ಲಿರುವ ಯೋಧರಿಗೆ ಸಲಾಮ್ ಎಂದಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ